ಕಮರ್ಷಿಯಲ್ ಹಾದಿಯಲ್ಲಿ ವಿರಾಜರೂಪ

ತೆಲುಗು ನಿರ್ದೇಶಕ ವಿಜಯ್ ನಾರದಸಿ ನಿರ್ದೇಶನದ ‘ವಿರಾಜ್’ ಚಿತ್ರದ ಆಡಿಯೋ ಇತ್ತೀಚೆಗೆ ಬಿಡುಗಡೆಯಾಯಿತು. ಬಹುತೇಕ ಹೊಸಬರೇ ನಟಿಸಿರುವ ಚಿತ್ರಕ್ಕೆ ಹೊಸ ನಿರ್ವಪಕರೇ ಬಂಡವಾಳ ಹೂಡಿದ್ದಾರೆ. ಎರಡು ಕುಟುಂಬಗಳ ನಡುವಿನ ಕಥಾನಕವನ್ನು ಕಮರ್ಷಿಯಲ್ ರೀತಿಯಲ್ಲಿ ಹೇಳುವ ಉದ್ದೇಶದಿಂದ ‘ವಿರಾಜ್’ನನ್ನು ಸೃಷ್ಟಿಸಿದ್ದಾರೆ ನಿರ್ದೇಶಕರು. ಸೆಂಟಿಮೆಂಟ್, ತಾಯಿ ಪ್ರೀತಿ, ಆಕ್ಷನ್, ಹಾಸ್ಯ ಹೀಗೆ ಎಲ್ಲವನ್ನು ಹದವಾಗಿ ಬೆರೆಸಿ ಸಿನಿಮಾ ಮಾಡಿದ್ದಾರಂತೆ. ನವನಟ ವಿದ್ಯಾಭರಣ್ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ಶಿರಿನ್ ಕಾಂಚವಾಲ್, ನಿಖಿತಾ ನಾಯಕಿಯರಾಗಿ ನಟಿಸಿದ್ದಾರೆ. ವಿಶೇಷ ಎಂಬಂತೆ ಕೃಷಿ ತಾಪಂಡ ಅತಿಥಿ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಚಿತ್ರದಲ್ಲಿ ಒಟ್ಟು ಏಳು ಹಾಡುಗಳಿದ್ದು, ಸುಭಾಷ್ ಆನಂದ್ ಸಂಗೀತ ನೀಡಿದ್ದಾರೆ. ಮೈಸೂರು ಮೂಲದ ಉದ್ಯಮಿ ಮಂಜುನಾಥ ಸ್ವಾಮಿ ‘ವಿರಾಜ್’ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಇತ್ತೀಚೆಗೆ ‘ದಿ ವಿಲನ್’ ಚಿತ್ರದ ನಿರ್ವಪಕ ಸಿ. ಆರ್. ಮನೋಹರ್ ಸೇರಿ ಚಿತ್ರರಂಗದ ಮತ್ತು ಕೆಲ ರಾಜಕೀಯ ಗಣ್ಯರು ಆಡಿಯೋ ಬಿಡುಗಡೆ ಮಾಡಿದರು. ಆನಂದ್ ಆಡಿಯೋ ಸಂಸ್ಥೆ ಚಿತ್ರದ ಹಾಡಿನ ಹಕ್ಕುಗಳನ್ನು ಪಡೆದುಕೊಂಡಿದೆ.

Leave a Reply

Your email address will not be published. Required fields are marked *