ಕಬ್ಬನ್​ಪಾರ್ಕ್​ನಲ್ಲಿ ವಾಹನ ಸಂಚಾರಕ್ಕೆ ಬ್ರೇಕ್: ವಾಯುಮಾಲಿನ್ಯ ನಿಯಂತ್ರಿಸಲು ಕಠಿಣ ಕ್ರಮ

ಬೆಂಗಳೂರು: ಕಬ್ಬನ್​ಪಾರ್ಕ್ ಉದ್ಯಾನದಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯ ನಿಯಂತ್ರಿಸಲು ವಾಹನಗಳು ಸಂಚಾರಕ್ಕೆ ನಿರ್ಬಂಧ ಹೇರಲು ತೋಟಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಪ್ರಸ್ತಾವನೆ ಸಿದ್ಧಪಡಿಸಿದ್ದಾರೆ.

ಕಬ್ಬನ್​ಪಾರ್ಕ್ ಮೂಲಕ ಪ್ರತಿದಿನ 5 ರಿಂದ 6 ಲಕ್ಷ ವಾಹನಗಳು ಹಾದು ಹೋಗುತ್ತವೆ. ಲಕ್ಷಾಂತರ ವಾಹನಗಳು ಹೊರಸೂಸುವ ಹೊಗೆ ಪಾರ್ಕ್​ನ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಕಬ್ಬನ್​ಪಾರ್ಕ್​ನ ಎಲ್ಲ ದಿಕ್ಕುಗಳಲ್ಲೂ ವಾಹನಗಳು ಸಂಚರಿಸುವುದರಿಂದ ವಾಯುಮಾಲಿನ್ಯದ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ ಮೂರು ವರ್ಷಗಳಿಂದ ಪ್ರತಿ ಭಾನುವಾರ ವಾಹನಗಳ ಸಂಚಾರ ನಿಷೇಧಿಸಲಾಗಿದೆ.

ಆದರೆ, ಉದ್ಯಾನದ ಏಳು ಪ್ರವೇಶದ್ವಾರಗಳ ಪೈಕಿ ಐದು ದ್ವಾರಗಳಲ್ಲಿ ವಾಹನಗಳು ಸಂಚರಿಸುತ್ತವೆ. ಹೀಗಾಗಿ ವಾಯುಮಾಲಿನ್ಯ ಹೆಚ್ಚಾಗಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲು ಚಿಂತನೆ ನಡೆಸಲಾಗಿದೆ.

 

Leave a Reply

Your email address will not be published. Required fields are marked *