Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ಕಬಡ್ಡಿಯಲ್ಲಿ ಭಾರತಕ್ಕೆ ಆಘಾತ

Friday, 24.08.2018, 3:04 AM       No Comments

ಜಕಾರ್ತ: ಸತತ 7 ಬಾರಿ ಸ್ವರ್ಣ ಜಯಿಸಿದ್ದ ಭಾರತ ಪುರುಷರ ಕಬಡ್ಡಿ ತಂಡ ಏಷ್ಯಾಡ್​ನ ಸೆಮಿಫೈನಲ್​ನಲ್ಲೇ ಮುಗ್ಗರಿಸಿತು. ಗುರುವಾರ ನಡೆದ ಉಪಾಂತ್ಯದಲ್ಲಿ ಅಜಯ್ ಠಾಕೂರ್ ಸಾರಥ್ಯದ ವಿಶ್ವ ಚಾಂಪಿಯನ್ ಭಾರತ 18-27 ರಿಂದ ಇರಾನ್​ಗೆ ಶರಣಾಯಿತು. 1990ರಿಂದ ಸತತವಾಗಿ ಸ್ವರ್ಣ ಜಯಿಸಿದ್ದ ಭಾರತ ಕೂಟದ ಇತಿಹಾಸದಲ್ಲಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸಲು ವಿಫಲವಾಯಿತು. ಸ್ವರ್ಣಕ್ಕಾಗಿ ಇರಾನ್ ಹಾಗೂ ದಕ್ಷಿಣ ಕೊರಿಯಾ ತಂಡಗಳು ಎದುರಾಗಲಿವೆ.

ಟ್ಯಾಕಲಿಂಗ್ ಹಾಗೂ ರೈಡಿಂಗ್ ಎರಡರಲ್ಲೂ ವೈಫಲ್ಯ ಅನುಭವಿಸಿದ ಭಾರತ, ಇರಾನ್​ನ ಸಂಘಟಿತ ಆಟಕ್ಕೆ ಶರಣಾಯಿತು. ಭಾರತದ ರೈಡರ್​ಗಳನ್ನು 6 ಬಾರಿ ಸೂಪರ್ ಟ್ಯಾಕಲ್ ಖೆಡ್ಡಾಗೆ ಬೀಳಿಸಿದ ಬಲಿಷ್ಠ ರಕ್ಷಣಾತ್ಮಕ ಪಡೆ ಹೊಂದಿರುವ ಇರಾನ್ ತಂಡ ದ್ವಿತೀಯಾರ್ಧದಲ್ಲಿ ಬಿಗಿ ಹಿಡಿತ ಸಾಧಿಸಿತು. ಭಾರತದ ವೈಫಲ್ಯದ ಲಾಭ ಪಡೆದ ಇರಾನ್ ಪಡೆ ಸತತ ಮೂರನೇ ಬಾರಿಗೆ ಫೈನಲ್ ಪ್ರವೇಶಿಸಿತು. ಜತೆಗೆ ಹಿಂದಿನ ಎರಡು ಸ್ವರ್ಣ ಸಮರದಲ್ಲಿ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಂಡಿತು. ಮೊದಲಾರ್ಧದಲ್ಲಿ ಉಭಯ ತಂಡಗಳು ತಲಾ 9 ಅಂಕಗಳಿಂದ ಸಮಬಲ ಸಾಧಿಸಿದವು. ಪಂದ್ಯದ ಮುಕ್ತಾಯಕ್ಕೆ 4 ನಿಮಿಷ ಬಾಕಿ ಇರುವ ವೇಳೆ ಆಲೌಟ್ ಆದ ಭಾರತ, 10 ಅಂಕ ಹಿನ್ನಡೆ ಹೊಂದಿದ್ದ ಹಿನ್ನೆಲೆಯಲ್ಲಿ ಸೋಲು ಖಚಿತಗೊಂಡಿತು. ಲೀಗ್ ಹಂತದಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಸೋತಿದ್ದ ಭಾರತ, ಎ ಗುಂಪಿನಲ್ಲಿ 2ನೇ ಸ್ಥಾನಿಯಾಗಿ ಸೆಮೀಸ್​ಗೇರಿತ್ತು. 2014ರ ಇಂಚೋನ್ ಕೂಟದ ಫೈನಲ್​ನಲ್ಲಿ ಭಾರತ 27-25 ರಿಂದ ಇರಾನ್ ವಿರುದ್ಧವೇ ರೋಚಕ ಜಯ ದಾಖಲಿಸಿತ್ತು. 2010ರ ಗುವಾಂಗ್​ಜೌ ಕೂಟದಲ್ಲೂ 37-20 ರಿಂದ ಜಯ ಕಂಡಿತ್ತು.

ಫೈನಲ್​ಗೇರಿದ ಮಹಿಳಾ ತಂಡ

ಭಾರತ ಮಹಿಳಾ ಕಬಡ್ಡಿ ತಂಡ ಸತತ 3ನೇ ಬಾರಿಗೆ ಫೈನಲ್ ಪ್ರವೇಶಿಸಿತು. ಪ್ರಶಸ್ತಿ ಫೇವರಿಟ್ ಎನಿಸಿಕೊಂಡಿರುವ ಭಾರತ ತಂಡ ಉಪಾಂತ್ಯದ ಪಂದ್ಯದಲ್ಲಿ 27-14 ರಿಂದ ಚೀನಾ ತೈಪೆ ತಂಡವನ್ನು ಸೋಲಿಸಿತು. ಹಿಂದಿನ ಎರಡೂ ಬಾರಿಯೂ ಸ್ವರ್ಣ ಜಯಸಿರುವ ಭಾರತ, ಶುಕ್ರವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಇರಾನ್ ತಂಡವನ್ನು ಎದುರಿಸಲಿದೆ. ಭಾರತ ತಂಡ 2012, 2013 ಹಾಗೂ 2014ರ ವಿಶ್ವಕಪ್​ಗಳಲ್ಲೂ ಚಾಂಪಿಯನ್ ಆಗಿತ್ತು.

Leave a Reply

Your email address will not be published. Required fields are marked *

Back To Top