ತರೀಕೆರೆ: ಅಜ್ಜಂಪುರ ಶೆಟ್ರು ಸಿದ್ದಪ್ಪ ಪ್ರೌಢಶಾಲೆ ಮೈದಾನದಲ್ಲಿ ಕದಂಬ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿದ್ದ ಹೊನಲು ಬೆಳಕಿನ ಕಬಡ್ಡಿ ಪ್ರೋ ಲೀಗ್ ಪಂದ್ಯಾವಳಿಯಲ್ಲಿ ಅತ್ತತ್ತಿ ಮಧುಸೂದನ್ ಮಾಲೀಕತ್ವದ ಡಿಎಸ್‌ಎಸ್ ತಂಡ ಗೆದ್ದು ಪ್ರಥಮ ಸ್ಥಾನ ಪಡೆಯಿತು.
ಹೊನಲು ಬೆಳಕಿನ ಪ್ರೋ ಲೀಗ್ ಕಬಡ್ಡಿ ಪಂದ್ಯಾವಳಿಯಲ್ಲಿ ಎಸ್‌ಎಸ್, ಐರಾವತ, ಬಿಆರ್‌ಎಸ್ ಸೇರಿ ಒಟ್ಟು 8 ತಂಡಗಳು ಸ್ಪರ್ಧಿಸಿದ್ದವು.
ಉತ್ತಮ ನಿರ್ವಹಣೆ ಮೂಲಕ ೈನಲ್ ಪ್ರವೇಶಿಸಿದ ಯತೀಶ್ ಮಾಲೀಕತ್ವದ ಮನೋಜ್‌ಗೌಡ ಹಾಗೂ ಅತ್ತತ್ತಿ ಮಧುಸೂದನ್ ಮಾಲೀಕತ್ವದ ಡಿಎಸ್‌ಎಸ್ ತಂಡ ಅಂತಿಮ ಕಾದಾಟದಲ್ಲಿ ಅತ್ತತ್ತಿ ಮಧುಸೂದನ್ ಮಾಲೀಕತ್ವದ ಡಿಎಸ್‌ಎಸ್ ತಂಡಕ್ಕೆ ಜಯ ಒಲಿಯಿತು.
ಡಿಎಸ್‌ಎಸ್ ತಂಡದ ನಾಯಕ ಪ್ರಜ್ವಲ್ ಪ್ರಥಮ ಸ್ಥಾನದೊಂದಿಗೆ 50 ಸಾವಿರ ರೂ. ನಗದು ಮತ್ತು ಟ್ರೋಫಿ ಪಡೆದರೆ, ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟ ಯತೀಶ್ ಮಾಲೀಕತ್ವದ ಮನೋಜ್‌ಗೌಡ ತಂಡದ ನಾಯಕ 30 ಸಾವಿರ ರೂ. ನಗದು, ಟ್ರೋಫಿ ಹಾಗೂ ಬಿ.ರಂಗಸ್ವಾಮಿ ಮಾಲೀಕತ್ವದ ತಂಡದ ನಾಯಕ ಚಿದಾನಂದ 15 ಸಾವಿರ ರೂ. ನಗದು ಬಹುಮಾನದ ಜತೆ ಆಕರ್ಷಕ ಟ್ರೋಫಿ ಪಡೆದುಕೊಂಡರು.
ಕದಂಬ ಸ್ಪೋಟ್ಸ್ ಕ್ಲಬ್ ಗೌರವ ಅಧ್ಯಕ್ಷ ಎ.ಟಿ.ಶ್ರೀನಿವಾಸ್, ಅಧ್ಯಕ್ಷ ನವೀನ್ ಮಂದಾಲಿ, ಪ್ರಮುಖರಾದ ಬೊಮ್ಮರಾಜ್, ಅಣ್ಣಪ್ಪ, ಪೊಲೀಸ್ ಇನ್ಸ್‌ಪೆಕ್ಟರ್ ಕೆ.ವೀರೇಂದ್ರ ಅವರು ವಿಜೇತ ತಂಡಕ್ಕೆ ಪ್ರಶಸ್ತಿ ಪ್ರದಾನ ಮಾಡಿದರು.