Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ಕನ್ನಡ ಶಾಲೆಯತ್ತ ಬೇಡ ನಿರ್ಲಕ್ಷ್ಯ

Tuesday, 12.06.2018, 3:55 AM       No Comments

ನಂದಗುಡಿ: ತಾವರೆಕೆರೆ ಗ್ರಾಮದಲ್ಲಿ ಶೀಘ್ರವೇ ತಾಲೂಕುಮಟ್ಟದ ಕಸಾಪ ಸಮ್ಮೇಳನ ನಡೆಸಲಾಗುವುದು ಎಂದು ತಾಲೂಕು ಕಸಾಪ ಅಧ್ಯಕ್ಷ ಟಿ. ನಾಗರಾಜ್ ಹೇಳಿದರು.

ಹೋಬಳಿಯ ತಾವರೆಕೆರೆ ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ ತಾಲೂಕು ಕಸಾಪ ಭಾನುವಾರ ಏರ್ಪಡಿಸಿದ್ದ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜ ಸೇವೆಕರು, ತಮ್ಮ ತಂದೆ-ತಾಯಿ ಹೆಸರಿನಲ್ಲಿ ಇಂತಿಷ್ಟು ಹಣ ಇಟ್ಟು ದತ್ತಿ ಹೆಸರಿನಲ್ಲಿ ಕಸಾಪ ವತಿಯಿಂದ ಉತ್ತಮ ಸೇವೆ ಮಾಡಬಹುದು. ಇತ್ತಿಚೆಗೆ 4 ದತ್ತಿಗಳನ್ನು ಪ್ರಾರಂಭಿಸಿದ್ದೇವೆ ಎಂದು ಹೇಳಿದರು.

ಮಕ್ಕಳು ಉತ್ತಮವಾಗಿ ವಿದ್ಯಾಭ್ಯಾಸ ಮಾಡಬೇಕು. ಕನ್ನಡ ಶಾಲೆಯಲ್ಲಿ ಓದಿದ ಅನೇಕರು ಇಂದು ಉತ್ತಮ ಹೆಸರು ಮಾಡಿದ್ದಾರೆ. ಕನ್ನಡ ಶಾಲೆಯಲ್ಲಿ ವ್ಯಾಸಂಗ ಮಾಡಿ ಹೆಚ್ಚಿನ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ತಾಲೂಕು ಕಸಾಪದಿಂದ ಸನ್ಮಾನಿಸಲಾಗುವುದು ಎಂದು ತಿಳಿಸಿದರು.

ಹಿರಿಯ ಸಾಹಿತಿ ಟಿ.ಡಿ.ಎನ್. ಮೂರ್ತಿ ಮಾತನಾಡಿ, ಮೌಲ್ಯಗಳನ್ನು ಮರೆಯಬಾರದು. ಮಕ್ಕಳಿಗೆ ಶಿಕ್ಷಣ ಕೊಟ್ಟರೆ ಸಾಲದು ಸಂಸ್ಕಾರ ಕೊಟ್ಟು ಮಾನವೀಯ ಮೌಲ್ಯಗಳ ಬಗ್ಗೆ ತಿಳಿಹೇಳಿ ಅದರಂತೆ ನಡೆಯುವಂತೆ ಮಾಡಬೇಕು ಎಂದರು.

ಮುಖ್ಯಶಿಕ್ಷಕ ಕೃಷ್ಣಕುಮಾರ್ ಮಾತನಾಡಿ, ನಾಡಿನಲ್ಲಿ ಜನಿಸಿದ ಅನೇಕ ಮಹಾನ್ ಕವಿಗಳು ರಚಿಸಿದ ಸಾಹಿತ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ಸೇರಿ ಅನೇಕ ಪ್ರಶಸ್ತೆ ರಾಜ್ಯಕ್ಕೆ ಸಂದಿವೆ. ಅವರಂತೆ ವಿದ್ಯಾರ್ಥಿಗಳು ಸಹ ಉತ್ತಮ ಹೆಸರು ಪಡೆಯಬೇಕು ಎಂದರು.

ಭಗವಾನ್ ಬುದ್ಧನ ಸ್ಮರಣಾರ್ಥ ದತ್ತಿ ಆರಂಭಿಸಿದ ಡಾ.ಟಿ.ಡಿ.ಎನ್. ಮೂರ್ತಿ ಅವರನ್ನು ಸನ್ಮಾನಿಸಲಾಯಿತು.

ಕಸಾಪ ಬೆಂ.ಗ್ರಾ.ಜಿಲ್ಲೆ ಉಪಾಧ್ಯಕ್ಷ ಡೇರಿ ಮುನಿನಂಜಪ್ಪ, ಹೋಬಳಿ ಅಧ್ಯಕ್ಷ ಶಿವಶಂಕರ್, ಉಪಾಧ್ಯಕ್ಷ ಬಿ.ಸಿ. ಕಾಂತರಾಜ್, ಗೌರವಾಧ್ಯಕ್ಷ ನರಸಿಂಹಮೂರ್ತಿ, ಜಿಲ್ಲಾ ಮಹಿಳಾ ಕಸಾಪ ಅಧ್ಯಕ್ಷೆ ಪುನಿತಾ ನಟರಾಜ್, ಉಪಾಧ್ಯಕ್ಷ ಎಚ್.ಎಂ. ಮುನಿರಾಜು, ಗೌರವ ಕಾರ್ಯದರ್ಶಿ ಕಣ್ಣೂರಹಳ್ಳಿ ಬೈರಪ್ಪ, ಅನುಗೊಂಡನಹಳ್ಳಿ ಹೋಬಳಿ ಅಧ್ಯಕ್ಷ ಟಿ.ವೈ ಮಂಜುನಾಥ್, ಜಡಿಗೇನಹಳ್ಳಿ ಹೋಬಳಿ ಅಧ್ಯಕ್ಷ ಬೋಳಪ್ಪ, ಉಪಾಧ್ಯಕ್ಷ ಮಂಜುನಾಥ್, ಸಾಹಿತಿ ಚಂದ್ರಶೇಖರ್, ಮಾರ್ಕೆಂಡಪ್ಪ, ಹೊಸಕೋಟೆ ಟೌನ್ ಕಾರ್ಯದರ್ಶಿ ಹಸೇನ್, ಪಿಡಿಒ ಸುಂದರ್, ಹಿರಿಯ ಶಾಲೆಯ ಮುಖ್ಯಶಿಕ್ಷಕ ಡಿ.ಕೆ. ನಾಗರಾಜ್ ಹಾಗೂ ಇತರರು ಇದ್ದರು.

 

Leave a Reply

Your email address will not be published. Required fields are marked *

Back To Top