More

  ಕನ್ನಡ ರಥಯಾತ್ರೆಗೆ ಅದ್ದೂರಿ ಸ್ವಾಗತ

  ಬಾಗಲಕೋಟೆ: ಕೂಡಲಸಂಗಮದ ಬಸವೇಶ್ವರ ವೃತ್ತಕ್ಕೆ ಆಗಮಿಸಿದ ಕನ್ನಡ ರಥಯಾತ್ರೆಗೆ ಸೋಮವಾರ ಅದ್ದೂರಿ ಸ್ವಾಗತ ನೀಡಲಾಯಿತು.

  ರಥಯಾತ್ರೆಗೆ ಸ್ವಾಗತ ಕೋರಿದ ತಾಲೂಕಾ ಆಡಳಿತ ವರ್ಗ, ಕನ್ನಡ ಸಾಹಿತ್ಯ ಪರಷತ್ತು, ಕನ್ನಡ ಪರಸಂಘಟನೆಗಳ ಮುಖಂಡರು ಭುವನೇಶ್ವರಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ರಥಯಾತ್ರೆಗೆ ಚಾಲನೆ ಕೊಟ್ಟು ಮರೆವಣಿಗೆಯಲ್ಲಿ ಪಾಲ್ಗೊಂಡರು.

  ಬಸವೇಶ್ವರ ವೃತ್ತದಿಂದ ಚಾಲುಕ್ಯ ಮಹಾದ್ವಾರದವರೆಗೆ ಮೆರವಣಿಗೆ ಸಾಗಿತು. ವಿವಿಧ ಮಹನಿಯರ ವೇಷಭೂಷಣ ತೊಟ್ಟ ಶಾಲಾ ಮಕ್ಕಳು, ಕುಂಭ-ಕಳಸ ಹೊತ್ತ ಮಹಿಳೆಯರು, ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡವು. ಕನ್ನಡಾಭಿಮಾನಿಗಳು ಕುಣಿದು ಕುಪ್ಪಳಿಸಿದರು.

  ರಥಯಾತ್ರೆಯಲ್ಲಿ ಹುನಗುಂದ ತಶೀಲ್ದಾರ ನಿಂಗಪ್ಪ ಬಿರಾದಾರ, ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಮುರುಳೀದರ ದೇಶಪಾಂಡೆ, ಕ್ಷೇತ್ರ ಶಿಕ್ಷಣಾಧಿಕಾರಿ ಜಾಸ್ಮೀನ ಕಿಲ್ಲೇದಾರ, ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಲ್ಲಿಕಾರ್ಜುನ ಸಜ್ಜನ, ಎಸ್.ಕೆ.ಕೊನೆಸಾಗರ, ಸಿ.ಎಸ್.ಚಟ್ಟೇರ, ಸಿದ್ಧಲಿಂಗಪ್ಪ ಬೀಳಗಿ, ಗ್ರಾಮ ಪಂಚಾಯತ ಅಧ್ಯಕ್ಷೆ ಗಂಗಮ್ಮ ರಾಂಪೂರ, ಮುಖಂಡರಾದ ಗಂಗಾಧರ ದೊಡಮನಿ, ಶಂಕ್ರಪ್ಪ ನೇಗಲಿ, ಗಂಗಣ್ಣ ಬಾಗೇವಾಡಿ ಮುಂತಾದವರು ಪಾಲ್ಗೊಂಡಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts