ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ‘ಚಿತ್ರಕೂಟ’: ಕುವೆಂಪು ಸಮಗ್ರ ಸಾಧನೆ ಅನಾವರಣಕ್ಕೆ ಗ್ಯಾಲರಿ

mysore

ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ‘ಚಿತ್ರಕೂಟ’: ಕುವೆಂಪು ಸಮಗ್ರ ಸಾಧನೆ ಅನಾವರಣಕ್ಕೆ ಗ್ಯಾಲರಿಮೈಸೂರು: ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟ ರಾಷ್ಟ್ರ ಕವಿ ಕುವೆಂಪು ಅವರನ್ನು ಕುರಿತ ಸಮಗ್ರ ಅಧ್ಯಯನಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಗ್ಯಾಲರಿಯನ್ನು ಆರಂಭಿಸಲಾಗಿದ್ದು, ಶ್ರೀದಲ್ಲೇ ಜ್ಞಾನಪೀಠ ಪ್ರಶಸ್ತಿಯ ವಾದರಿಯನ್ನು ಪ್ರದರ್ಶನಕ್ಕಿಡಲು ತಯಾರಿ ನಡೆದಿದೆ.

ಕುವೆಂಪು ಅವರ ಹುಟ್ಟೂರು ಕುಪ್ಪಳಿಯಲ್ಲಿರುವ ಜ್ಞಾನಪೀಠ ಪ್ರಶಸ್ತಿ ಫಲಕ ಮತ್ತು ಅಭಿನಂದನಾ ಗ್ರಂಥದ ಪ್ರತಿಕತಿ ವಾದರಿಯನ್ನು ಗ್ಯಾಲರಿಯಲ್ಲಿ ಸಾರ್ವಜನಿಕರ ಮತ್ತು ವಿದ್ಯಾರ್ಥಿಗಳ ದರ್ಶನಕ್ಕಿಡಲು ಕುವೆಂಪು ಅವರ ಪುತ್ರಿ ತಾರಿಣಿ ಮತ್ತು ಅಳಿಯ ಡಾ.ಕೆ.ಚಿದಾನಂದಗೌಡ ಅವರಲ್ಲಿ ಮನವಿ ವಾಡಲಾಗಿದೆ. ಅದಕ್ಕೆ ಅವರು ಸಹ ಸಮ್ಮತಿ ನೀಡಿದ್ದಾರೆ. ಹೀಗಾಗಿ, ಶ್ರೀದಲ್ಲೇ ಜ್ಞಾನಪೀಠ ಪ್ರಶಸ್ತಿಯ ಪ್ರತಿರೂಪವನ್ನು ನೋಡುವ ಸೌಭಾಗ್ಯ ದೊರೆಯಲಿದೆ.

ಮಲೆನಾಡಿನಿಂದ ಸಾಂಸ್ಕೃತಿಕ ನಗರಿಗೆ ಆಗಮಿಸಿ ಮೈಸೂರು ವಿಶ್ವವಿದ್ಯಾಲಯದ ಕುಲಪತಿಯಾಗಿ ವಾನಸಗಂಗೋತ್ರಿಯನ್ನು ಕಟ್ಟಿದ ಕುವೆಂಪು ಅವರ ‘ಶ್ರೀ ರಾವಾಯಣ ದರ್ಶನಂ’ ಕತಿಯು ಕನ್ನಡ ಭಾಷೆಗೆ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟಿತ್ತು. ರಾಜ್ಯದ ನಾಡಗೀತೆ ‘ಜಯ ಭಾರತ ಜನನಿಯ ತನುಜಾತೆ’ ಪದ್ಯವನ್ನು ಕುವೆಂಪು ರಚಿಸಿ 100 ವರ್ಷ ತುಂಬಿದೆ. ಈ ಸಂದರ್ಭದಲ್ಲಿ ಏನಾದರೂ ಶಾಶ್ವತವಾದ ಯೋಜನೆ ರೂಪಿಸಬೇಕೆಂಬ ಉದ್ದೇಶ ಹೊಂದಿದ್ದ ಕನ್ನಡ ಅಧ್ಯಯನ ಸಂಸ್ಥೆಯು ಈಗ ಕುವೆಂಪು ಗ್ಯಾಲರಿಯನ್ನು ನಿರ್ವಾಣ ವಾಡಿದೆ.

ನಿರ್ಮಾತೃ ನರೇಂದ್ರ :

ಬೆಂಗಳೂರಿನ ಕುವೆಂಪು ವಿಚಾರ ವೇದಿಕೆ ಅಧ್ಯಕ್ಷ ನರೇಂದ್ರ ಅವರು ಕುಪ್ಪಳಿಯಲ್ಲಿ ಕುವೆಂಪು, ತೇಜಸ್ವಿ ಹೆಸರಿನಲ್ಲಿ ಪ್ರಶಸ್ತಿಯನ್ನು ಸ್ಥಾಪಿಸಿದ್ದಾರೆ. ಈಗ ಅವರೇ ಕುವೆಂಪು ಗ್ಯಾಲರಿ ನಿರ್ವಾಣಕ್ಕೆ ಕಾರಣಕರ್ತರಾಗಿದ್ದಾರೆ. ಗ್ಯಾಲರಿಯಲ್ಲಿ ಕುವೆಂಪು ಅವರ ಸಮಗ್ರ ಕತಿಗಳು ಇವೆ. ಕುವೆಂಪು ಚಿತ್ರಕೂಟದಲ್ಲಿ 200ಕ್ಕೂ ಹೆಚ್ಚು ಚಿತ್ರಪಟಗಳನ್ನು ನೋಡಬಹುದಾಗಿದೆ. ಕುವೆಂಪು ಅವರ ಎಲ್ಲ ಕತಿಗಳು, ಗ್ರಂಥಗಳು ಒಂದೇ ಕಡೆ ಲಭ್ಯವಾಗುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ.

ಮುಂಬರುವ ದಿನಗಳಲ್ಲಿ ಕುವೆಂಪು ಕುರಿತು ರಾಜ್ಯ, ಹೊರ ರಾಜ್ಯದ ಕವಿಗಳು, ವಿಮರ್ಶಕರು ವಾಡಿರುವ ವಿಮರ್ಶಾ ಕತಿ, ಲೇಖನಗಳ ಸಂಪುಟವನ್ನು ವಿದ್ಯಾರ್ಥಿಗಳ ಕೈಗೆ ಸಿಗುವಂತೆ ವಾಡಲು ಅನೇಕರ ಜತೆಗೆ ಸವಾಲೋಚನೆ ನಡೆಸಲಾಗಿದೆ. ಈಗಾಗಲೇ ಕುವೆಂಪು ಕುರಿತ ವಿಮರ್ಶಾ ಕತಿಗಳನ್ನು ನೀಡಲು ಹಲವು ಲೇಖಕರು ಒಪ್ಪಿಕೊಂಡಿದ್ದಾರೆ

ಲ್ಯಾಬ್‌ಗೆ ಹೊಸ ರೂಪ:

ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು ಸೇರಿ 200ಕ್ಕೂ ಹೆಚ್ಚು ಜನರು ಇದ್ದು, ಭಾಷೆ ಹಾಗೂ ಬಹುವಾಧ್ಯಮ ಪ್ರಯೋಗಾಲಯ (ಕಂಪ್ಯೂಟರ್ ಲ್ಯಾಬ್‌ಗೆ)ಕ್ಕೆ ಹೊಸ ರೂಪವನ್ನು ನೀಡಲಾಗಿದೆ. ಗ್ರಾಮೀಣ ಪ್ರದೇಶದಿಂದ ಬರುವ ವಿದ್ಯಾರ್ಥಿಗಳಿಗೂ ಅನುಕೂಲವಾಗುವ ರೀತಿಯಲ್ಲಿ ಗ್ರಂಥಾಲಯವನ್ನು ನಿರ್ವಾಣ ವಾಡಿ ಅಗತ್ಯವಿರುವ ಟೇಬಲ್, ಕುರ್ಚಿಗಳ ವ್ಯವಸ್ಥೆಯನ್ನೂ ಮಾಡಲಾಗಿದೆ.

ಚಿತ್ರಕೂಟ ಎಂದು ನಾಮಕರಣ:

ಕುವೆಂಪು ಅವರ ಬಗ್ಗೆ ಇಂದಿನ ತಲೆವಾರಿಗೆ ಸಮಗ್ರವಾಗಿ ಅಧ್ಯಯನದ ವಸ್ತುಗಳು ದೊರೆಯುವಂತೆ ವಾಡಬೇಕೆಂಬ ಮಹತ್ವಾಕಾಂಕ್ಷೆಯಿಂದ ಬೆಂಗಳೂರಿನ ನರೇಂದ್ರ ಅವರು ಗ್ಯಾಲರಿಯನ್ನು ನಿರ್ಮಿಸಲು 2 ಲಕ್ಷ ರೂ. ದೇಣಿಗೆ ನೀಡಲು ಮುಂದಾಗಿದ್ದರು. ಆದರೆ, ಕನ್ನಡ ಅಧ್ಯಯನ ಸಂಸ್ಥೆಯವರು, ಅಷ್ಟು ಸಾಕಾಗುವುದಿಲ್ಲ. ಎಲ್ಲವನ್ನೂ ನೀವೇ ವಾಡಿಕೊಡಬೇಕೆಂದು ನರೇಂದ್ರ ಅವರಿಗೆ ಕೋರಿಕೊಂಡಿದ್ದರು. ಇದರ ಫಲವಾಗಿ ನರೇಂದ್ರ ಅವರೇ ಗ್ಯಾಲರಿಯ ಸಂಪೂರ್ಣ ಹೊಣೆ ಹೊತ್ತು ನಿರ್ಮಿಸಿಕೊಟ್ಟಿದ್ದಾರೆ. ಕುವೆಂಪು ಗ್ಯಾಲರಿಗೆ ‘ಚಿತ್ರಕೂಟ’ ಎಂದು ಹೆಸರಿಸಲಾಗಿದೆ. ಇದು ‘ಶ್ರೀ ರಾವಾಯಣ ದರ್ಶನಂ’ ನಲ್ಲಿರುವ ಒಂದು ಶೀರ್ಷಿಕೆಯಾಗಿದೆ. ಮಧ್ಯಪ್ರದೇಶದಲ್ಲಿ ರಾಮ, ಲಕ್ಷ್ಮಣ, ಸೀತೆ ವನವಾಸದ ವೇಳೆ ತಂಗಿದ್ದ ಒಂದು ತಾಣ ಚಿತ್ರಕೂಟ. ಹಾಗಾಗಿ ಈ ಹೆಸರನ್ನು ಗ್ಯಾಲರಿಗೆ ಇಡಲಾಗಿದೆ ಎಂದು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಡಾ.ಎನ್.ಕೆ.ಲೋಲಾಕ್ಷಿ ಹೇಳುತ್ತಾರೆ.

ಬಹುಭಾಷಾ ಪರಿಣತರ ಸೇವೆ

ಮೈಸೂರು ವಿಶ್ವವಿದ್ಯಾಲಯದ ಕನ್ನಡ ಚಟುವಟಿಕೆಗಳನ್ನೆಲ್ಲ ಒಂದೆಡೆ ಕೇಂದ್ರೀಕರಿಸುವ ದಷ್ಟಿಯಿಂದ ರೂಪುಗೊಂಡಿತು ಕನ್ನಡ ಅಧ್ಯಯನ ಸಂಸ್ಥೆ. (1966). ಈ ವಿವಿಯಲ್ಲಿ ಆರಂಭವಾದ ಮೊದಲನೆಯ ಭಾಷಾ ಸಂಸ್ಥೆಯೂ

ಹೌದು. ತನ್ನ ಸ್ವರೂಪ -ವ್ಯಾಪ್ತಿಗಳಲ್ಲಿ ಭಾರತೀಯ ಭಾಷೆಯೊಂದರ ಅಧ್ಯಯನಕ್ಕೆ ಈ ಸಂಸ್ಥೆ ವಿಶೇಷ ಕೊಡುಗೆ ನೀಡಿದೆ. ಹಳೆಗನ್ನಡ, ನಡು ಗನ್ನಡ, ವಚನಸಾಹಿತ್ಯ, ದಾಸ ಸಾಹಿತ್ಯ, ಛಂದಸ್ಸು, ದ್ರಾವಿಡ ಭಾಷಾ ವಿಜ್ಞಾನ, ಸಂಸ್ಕತಿ, ಶಾಸನ, ಜಾನಪದ, ಕಾವ್ಯಮೀವಾಂಸೆ, ಸಾಹಿತ್ಯವಿಮರ್ಶೆ, ಭಾಷಾಂತರ, ಸಾಹಿತ್ಯ ಚರಿತ್ರೆ, ಸಂಶೋಧನೆ, ಆಧುನಿಕ ಸಾಹಿತ್ಯ ಮುಂತಾದ ವಿಷಯಗಳಲ್ಲಿ ವಿಶೇಷ ತಜ್ಞರಾದವರು ಇಲ್ಲಿನ ಬೋಧಕ ಹಾಗೂ ಬೋಧಕೇತರ ಶೈಕ್ಷಣಿಕ ವರ್ಗ ದಲ್ಲಿದ್ದಾರೆ. ಅನ್ಯ ಭಾಷಾ ನಿಪುಣರನ್ನೂ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಒಳಗೊಂಡಿದೆ. ಇಂಗ್ಲಿಷ್, ತಮಿಳು, ತೆಲುಗು, ಮಲಯಾಳಂ ಭಾಷೆಗೆ ಸಂಬಂಧಿಸಿದಂತೆ ವಿಶೇಷ ಪರಿಣತರ ಸೇವೆಯೂ ಈ ಸಂಸ್ಥೆಗೆ ಸಂದಿದೆ.

 
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ದಾನಿಗಳ ನೆರವಿನಿಂದ ಗ್ಯಾಲರಿ ನಿರ್ವಾಣವಾಗಿದೆ. ಕುವೆಂಪು ಅವರಿಗೆ ಪ್ರಾಪ್ತವಾಗಿರುವ ಜ್ಞಾನಪೀಠ ಪ್ರಶಸ್ತಿಯ ಪ್ರತಿಕೃತಿ ಪ್ರದರ್ಶಿಸಲು ಅವರ ಪುತ್ರಿಯಿಂದ ಸಮ್ಮತಿ ದೊರಕಿದೆ. ಶ್ರೀದಲ್ಲೇ ಈ ಭಾಗದ ಜನರಿಗೂ ಆ ವಾದರಿಯನ್ನು ನೋಡುವ ಅವಕಾಶ ಲಭ್ಯವಾಗಲಿವೆ
ಡಾ.ಎನ್.ಕೆ.ಲೋಲಾಕ್ಷಿ
ನಿರ್ದೇಶಕಿ, ಮೈವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ.

 

 

Share This Article

ಅಪ್ಪಿತಪ್ಪಿಯೂ ಈ ಆಹಾರಗಳನ್ನು ತುಪ್ಪದೊಂದಿಗೆ ಸೇವಿಸಬೇಡಿ; ಉತ್ತಮ ಆರೋಗ್ಯಕ್ಕಾಗಿ ತಿಳಿದುಕೊಳ್ಳಲೇಬೇಕಾದ ಮಾಹಿತಿ | Health Tips

ಭಾರತೀಯ ಪಾಕಪದ್ಧತಿಯಲ್ಲಿ ತುಪ್ಪಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಆಯುರ್ವೇದದಲ್ಲಿ ತುಪ್ಪವು ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ, ಆರೋಗ್ಯಕ್ಕೂ…

ಕಾಫಿ ಕುಡಿಯುವಾಗ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಪ್ರಪಂಚದಾದ್ಯಂತ ಕಾಫಿ ಪ್ರಿಯರನ್ನು ಕಾಣಬಹುದು. ಇಲ್ಲಿಯವರೆಗೆ ಕಾಫಿಯ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆದಿದ್ದು, ಇದು ಅದರ…

ಕಪ್ಪು ದ್ರಾಕ್ಷಿ vs ಹಸಿರು ದ್ರಾಕ್ಷಿ.. ಆರೋಗ್ಯಕ್ಕೆ ಯಾವುದು ಉತ್ತಮ..? grapes

grapes: ದ್ರಾಕ್ಷಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಈ ಹಣ್ಣುಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಹಸಿರು…