16 C
Bangalore
Thursday, December 12, 2019

ಕನ್ನಡಿಯೊಳಗಿನ ಗಂಟಾದ ಸಾಲ ಮನ್ನಾ ಹಣ!

Latest News

ಸುಗಮ ಸಾರಿಗೆಗೆ ಬೇಕು 2 ಲಕ್ಷ ಕೋಟಿ ರೂಪಾಯಿ

ಬೆಂಗಳೂರು: ನಗರದ ಸಂಚಾರದಟ್ಟಣೆ ನಿವಾರಿಸುವ ಜತೆಗೆ ವಾಯುಮಾಲಿನ್ಯ ಸಮಸ್ಯೆ ಉಲ್ಬಣಿಸದಂತೆ ತಡೆಯಲು ಅಗತ್ಯ ಸೌಲಭ್ಯ ಕಲ್ಪಿಸಲು 2.30 ಲಕ್ಷ ಕೋಟಿ ರೂ. ಬೇಕಿದೆ. ಮುಂದಿನ 20...

ವಿಕ್ಟೋರಿಯಾದಲ್ಲಿ 68 ಕೋಟಿ ರೂ ವೆಚ್ಚದ ಕಟ್ಟಡ

ಬೆಂಗಳೂರು: ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (ಬಿಎಂಸಿಆರ್​ಐ) ಆಸ್ಪತ್ರೆಗಳಲ್ಲಿ ಒಳರೋಗಿಗಳ ಸೇವೆಗಾಗಿ 68.50 ಕೋಟಿ ರೂ. ವೆಚ್ಚದಲ್ಲಿ ಸಾವಿರ ಒಳರೋಗಿಗಳ ದಾಖಲು...

ಪೊಲೀಸರ ಹಸ್ತಕ್ಷೇಪಕ್ಕೆ ಕೋರ್ಟ್ ಕಿಡಿ

ಬೆಂಗಳೂರು: ಸ್ಥಿರಾಸ್ತಿ ವ್ಯಾಜ್ಯವೊಂದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಲು ಖುದ್ದು ಪೊಲೀಸ್ ಠಾಣೆಗೆ ಹಾಜರಾಗುವಂತೆ ಸೂಚಿಸಿ ವಕೀಲರೊಬ್ಬರಿಗೆ ನೋಟಿಸ್ ನೀಡಿದ ಪ್ರಕರಣದಲ್ಲಿ ವಿಜಯನಗರ ಠಾಣೆ ಇನ್​ಸ್ಪೆಕ್ಟರ್...

ಗಣಿತಶಾಸ್ತ್ರಜ್ಞ, ತಂತ್ರಜ್ಞಾನ ನಿಪುಣ, ಇತಿಹಾಸ ಸಂಶೋಧಕ

ಎರಡು ಶತಮಾನಗಳ ಕಾಲ ಭಾರತದಲ್ಲಿ ಆಧಿಕಾರಿಕವಾಗಿ ತಳವೂರಿದ್ದ ಬ್ರಿಟಿಷರು ಭೌಗೋಳಿಕವಾಗಿ ಅಲ್ಲದೆ ಬೌದ್ಧಿಕವಾಗಿ- ಮಾನಸಿಕವಾಗಿಯೂ ಭಾರತೀಯರನ್ನು ದಾಸ್ಯಕ್ಕೊಳಪಡಿಸಲು ಪ್ರಯತ್ನಿಸಿದರು; ತಮ್ಮ ಇತಿಹಾಸ-ಸಂಸ್ಕೃತಿಗಳನ್ನು ಕುರಿತು ಭಾರತೀಯರಲ್ಲಿ ಕೀಳರಿಮೆ...

ಡಿಸೆಂಬರ್ 14 ರಂದು ಕರ್ಕಿ ಕಾವ್ಯ ಪ್ರಶಸ್ತಿ ಪ್ರದಾನ

ಹುಬ್ಬಳ್ಳಿ: ಡಾ. ಡಿ.ಎಸ್. ರ್ಕ ಸಾಹಿತ್ಯ ವೇದಿಕೆಯಿಂದ ಜಗದೀಶ ಶೆಟ್ಟರ್ ದತ್ತಿ ಆಶ್ರಯದಲ್ಲಿ ಕೊಡಮಾಡುವ ಪ್ರಸಕ್ತ ಸಾಲಿನ ಡಾ. ಡಿ.ಎಸ್. ರ್ಕ ಕಾವ್ಯ ಪ್ರಶಸ್ತಿಯು...

ಸಂತೋಷ ಮುರಡಿ ಮುಂಡರಗಿ: ಸರ್ಕಾರ ರೈತರ ಬೆಳೆ ಸಾಲ ಮನ್ನಾ ಮಾಡಿದರೂ ಬ್ಯಾಂಕ್ ಆಫ್ ಇಂಡಿಯಾ ಡಂಬಳ ಶಾಖೆ ಮಾತ್ರ ತನ್ನ ರೈತ ಗ್ರಾಹಕರನ್ನು ಗೊಂದಲದಲ್ಲಿಟ್ಟಿದೆ. ಇದರಿಂದ ರಾಜ್ಯ ಸರ್ಕಾರ ಮಾಡಿರುವ ಬೆಳೆ ಸಾಲದ ಮನ್ನಾ ಹಣ ರೈತರಿಗೆ ಕನ್ನಡಿಯೊಳಗಿನ ಗಂಟಿನಂತಾಗಿದೆ.

ತಾಲೂಕಿನ ಡಂಬಳ ಗ್ರಾಮದ ಬ್ಯಾಂಕ್ ಆಫ್ ಇಂಡಿಯಾದವರು ರೈತರಿಂದ ಸಾಲದ ಹಣವನ್ನು ಸಂಪೂರ್ಣವಾಗಿ ಮರುಪಾವತಿಸಿಕೊಂಡು ನವೀಕರಣ ಮಾಡಿಕೊಡುತ್ತಿದ್ದಾರೆ. ಆದರೆ, ರೈತರ ಸಾಲ ಖಾತೆಯಲ್ಲಿ ಜಮೆ ಆಗಿರುವ ಸರ್ಕಾರದ ಮನ್ನಾ ಹಣದ ಬಗ್ಗೆ ನಿಖರ ಮಾಹಿತಿ ಕೊಡದೇ ರೈತರನ್ನು ಗೊಂದಲಕ್ಕೆ ಸಿಲುಕಿಸುತ್ತಿದ್ದಾರೆ.

ಡಂಬಳದ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಸುಮಾರು 259 ರೈತರು ಬೆಳೆ ಸಾಲ ಪಡೆದುಕೊಂಡಿದ್ದಾರೆ. ಬ್ಯಾಂಕ್​ನಲ್ಲಿ 2017 ಡಿಸೆಂಬರ್ 31ಕ್ಕಿಂತ ಪೂರ್ವದಲ್ಲಿ ಬೆಳೆ ಸಾಲ ಪಡೆದುಕೊಂಡ ರೈತರ ಸಾಲದ ಖಾತೆಗೆ ಸರ್ಕಾರದಿಂದ ಅಂದಾಜು 1.28 ಕೋಟಿ ರೂ. ಜಮೆಯಾಗಿದೆ. ಆದರೆ, ಅದು ರೈತರ ಉಪಯೋಗಕ್ಕೆ ಬರದಂತಾಗಿದೆ.

ರೈತರು ಪಡೆದಂತಹ ಒಟ್ಟು ಸಾಲದ ಮೊತ್ತದಲ್ಲಿ ಸರ್ಕಾರದ ಸಾಲ ಮನ್ನಾ ಯೋಜನೆಯಡಿ ಸಾಲದ ಖಾತೆಗೆ ಜಮೆಯಾಗಿರುವ ಹಣ ವಜಾ ಮಾಡಿ ಇನ್ನುಳಿದ ಬಾಕಿ ಸಾಲದ ಮೊತ್ತ ಮಾತ್ರ ತುಂಬಿಸಿಕೊಳ್ಳಬೇಕು. ರೈತರಿಗೆ ಮತ್ತೆ ಅವಶ್ಯವಿದ್ದರೆ ಸಾಲ ಮಾಡಿಕೊಡಬೇಕು. ಆದರೆ, ಬ್ಯಾಂಕ್​ನ ವ್ಯವಸ್ಥಾಪಕರು ಪೂರ್ತಿ ಸಾಲದ ಹಣ ಮರುಪಾವತಿಸುವಂತೆ ಒತ್ತಡ ಹೇರುತ್ತಿದ್ದಾರೆ. ‘ನೀವು ಸಾಲ ಮರುಪಾವತಿಸಿದರೆ ಸರ್ಕಾರದ ಸಾಲ ಮನ್ನಾ ಯೋಜನೆಯಡಿ ಜಮೆಯಾದ ಹಣ ವಾಪಸ್ ನೀಡುತ್ತೇವೆ’ ಎಂದು ನಂಬಿಸಿ ಕೆಲ ರೈತರ ಪೂರ್ತಿ ಹಣ ತುಂಬಿಸಿಕೊಂಡು ಸಾಲ ನವೀಕರಣ ಮಾಡಿಕೊಟ್ಟರೆ, ಇನ್ನು ಕೆಲ ರೈತರಿಂದ ಸಾಲದ ಮೇಲಿನ ಬಡ್ಡಿ ತುಂಬಿಸಿಕೊಂಡು ನವೀಕರಣ ಮಾಡಿದ್ದಾರೆ.

ಕೆವಿಜಿಯಲ್ಲಿ ಹೀಗಿಲ್ಲ: ಡಂಬಳ ಗ್ರಾಮದ ಕೆವಿಜಿ ಬ್ಯಾಂಕ್​ನಲ್ಲಿ ಬೆಳೆ ಸಾಲ ಖಾತೆಗೆ ಸರ್ಕಾರದಿಂದ ಜಮೆಯಾದ ಹಣದ ಕುರಿತು ರೈತರಿಗೆ ನೋಟಿಸ್ ಮೂಲಕ ಮಾಹಿತಿ ನೀಡಿದ್ದಾರೆ. ಬೆಳೆ ಸಾಲದ ಖಾತೆಗೆ ಜಮೆಯಾದ ಹಣ ವಜಾ ಮಾಡಿ ಇನ್ನುಳಿದ ಸಾಲದ ಮೊತ್ತ ಮಾತ್ರ ತುಂಬಿಸಿಕೊಂಡು ಮರು ಸಾಲ ನೀಡಿದ್ದಾರೆ. ಆದರೆ, ಬ್ಯಾಂಕ್ ಆಫ್ ಇಂಡಿಯಾದಲ್ಲಿ ಬೆಳೆ ಸಾಲ ಖಾತೆಗೆ ಜಮೆಯಾದ ಹಣದ ಬಗ್ಗೆ ಮಾಹಿತಿ ನೀಡದೆ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ರುದ್ರಪ್ಪ ಕೊರ್ಲಗಟ್ಟಿ, ಸಿದ್ದಪ್ಪ ನಂಜಪ್ಪನವರ, ಯಲ್ಲಪ್ಪ ಬಾವಿ, ಮತ್ತಿತರರು ದೂರಿದ್ದಾರೆ. 5 ರಿಂದ 20 ಸಾವಿರ ರೂ.ವರೆಗೂ ಬೆಳೆ ವಿಮೆ ಹಣವನ್ನು ಬ್ಯಾಂಕ್​ಗೆ ತುಂಬಲಾಗಿದೆ. ಆದರೆ, ಬ್ಯಾಂಕ್​ನವರು ಬೆಳೆ ವಿಮೆ ಕಂಪನಿಗೆ ತುಂಬದೆ, ತಮ್ಮಲ್ಲೇ ಇರಿಸಿಕೊಂಡಿದ್ದಾರೆ. ಈ ಬಗ್ಗೆ ಕೇಳಿದರೆ ಹಾರಿಕೆ ಉತ್ತರ ನೀಡುತ್ತಾರೆ. ಸರ್ಕಾರದಿಂದ ಸಿಗುವಂತಹ ಸೌಲಭ್ಯಗಳಿಂದ ನಮ್ಮನ್ನು ವಂಚಿತರನ್ನಾಗಿ ಮಾಡುತ್ತಿದ್ದಾರೆ ಎಂದು ರೈತರು ಆರೋಪಿಸಿದರು.

ಈ ಎಲ್ಲ ಸಮಸ್ಯೆಗಳ ಕುರಿತು ರೈತರು ಹಲವು ಬಾರಿ ಬ್ಯಾಂಕ್ ವ್ಯವಸ್ಥಾಪಕರ ಜೊತೆಗೆ ರ್ಚಚಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೆ. 13ರಂದು ಬ್ಯಾಂಕ್​ನಲ್ಲಿ ಲೀಡ್ ಬ್ಯಾಂಕ್ ವ್ಯವಸ್ಥಾಪಕರು, ತಹಸೀಲ್ದಾರ್ ಡಾ. ವೆಂಕಟೇಶ ನಾಯಕ ಮತ್ತು ಬ್ಯಾಂಕ್ ಆಫ್ ಇಂಡಿಯಾ ಮೇಲಧಿಕಾರಿಗಳು ರೈತರೊಂದಿಗೆ ಸಭೆ ಕೂಡ ನಡೆಸಿದ್ದಾರೆ. ರೈತರಿಗಾಗಿರುವ ಸಮಸ್ಯೆ ಬಗೆಹರಿಸಲಾಗುವುದು ಎಂದು ತಹಸೀಲ್ದಾರ್ ನಾಯಕ ಮತ್ತು ಬ್ಯಾಂಕ್ ಅಧಿಕಾರಿಗಳು ರೈತರಿಗೆ ಭರವಸೆ ನೀಡಿದ್ದಾರೆ.

ಸಾಲ ಮನ್ನಾ ಯೋಜನೆಯಡಿ ರೈತರ ಬೆಳೆ ಸಾಲದ ಖಾತೆಗೆ ಜಮೆಯಾದ ಹಣ ರೈತರಿಗೆ ಮುಟ್ಟಬೇಕು. ಈ ಬಗ್ಗೆ ಬ್ಯಾಂಕ್ ಆಫ್ ಇಂಡಿಯಾ ಮೇಲಧಿಕಾರಿ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದೇವೆ. ಸಾಲ ಮನ್ನಾ ಯೋಜನೆಯಡಿ ಯಾವ ರೈತರು ಒಳಪಟ್ಟಿದ್ದಾರೆ ಎನ್ನುವ ಕುರಿತು ನೋಟಿಸ್ ಬೋರ್ಡ್​ಗೆ ಹಚ್ಚಬೇಕು.

| ಡಾ. ವೆಂಕಟೇಶ ನಾಯಕ ತಹಸೀಲ್ದಾರ್

ಸರ್ಕಾರದಿಂದ ಬೆಳೆ ಸಾಲ ಖಾತೆಗೆ ಜಮೆಯಾದ ಹಣದ ಬಗ್ಗೆ ಮಾಹಿತಿ ನೀಡುತ್ತಿಲ್ಲ. ಸಾಲದ ಹಣ ಇಡಿಯಾಗಿ ತುಂಬಿಸಿಕೊಂಡು ರಿನಿವಲ್ ಮಾಡಿ ಮೋಸ ಮಾಡುತ್ತಿದ್ದಾರೆ. ಬೆಳೆ ಸಾಲ ಖಾತೆಗೆ ಜಮೆಯಾದ ಹಣ ರೈತರಿಗೆ ನೀಡದಿದ್ದರೆ ಉಗ್ರ ಪ್ರತಿಭಟನೆ ಮಾಡುತ್ತೇವೆ.

| ಗವಿಸಿದ್ದಪ್ಪ ಹಾದಿಮನಿ ಬೆಳೆ ಸಾಲ ಪಡೆದ ರೈತ

2017 ಡಿ. 31ರ ಒಳಗೆ ಬೆಳೆ ಸಾಲ ಪಡೆದ ರೈತರ ಸಾಲ ರಿನಿವಲ್ ಮಾಡಿದರೂ ಅವರು ಹಿಂದೆ ಪಡೆದಂತಹ ಹಳೇ ದಿನಾಂಕಕ್ಕೆ ಒಳಪಡುತ್ತಾರೆ. ಬೆಳೆ ಸಾಲದ ಖಾತೆಗೆ ಹಣ ಜಮೆಯಾದ ಹಣದ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಸ್ಯೆ ಸರಿಪಡಿಸುತ್ತೇವೆ. ರೈತರು ತುಂಬಿದ ಬೆಳೆ ವಿಮೆ ಹಣ ವಿಮೆ ಕಂಪನಿಗೆ ತುಂಬಿದ್ದೇವೆ.

| ಭರಣಿ ವ್ಯವಸ್ಥಾಪಕ, ಬ್ಯಾಂಕ್ ಆಫ್ ಇಂಡಿಯಾ, ಡಂಬಳ ಶಾಖೆ

Stay connected

278,741FansLike
587FollowersFollow
624,000SubscribersSubscribe

ವಿಡಿಯೋ ನ್ಯೂಸ್

VIDEO| ಇಸ್ರೋದಿಂದ ರಿಸ್ಯಾಟ್​-2ಬಿಆರ್​1 ಹೆಸರಿನ ಮತ್ತೊಂದು ಬೇಹುಗಾರಿಕಾ ಉಪಗ್ರಹ ಯಶಸ್ವಿ...

ನವದೆಹಲಿ: ಪಿಎಸ್​ಎಲ್​ವಿ-ಸಿ48 ಉಡಾವಣಾ ವಾಹಕ ಹೊತ್ತ ರಿಸ್ಯಾಟ್​-2ಬಿಆರ್​1 ಹೆಸರಿನ ಉಪಗ್ರಹವನ್ನು ಇಸ್ರೋ ಶ್ರೀಹರಿಕೋಟದಲ್ಲಿರುವ ಸತೀಶ್​ ಧವನ್​ ಉಡಾವಣಾ ಕೇಂದ್ರದಿಂದ ಬುಧವಾರ ಮಧ್ಯಾಹ್ನ ಯಶಸ್ವಿಯಾಗಿ ಉಡಾವಣೆಗೊಳಿಸಿತು. ರಿಸ್ಯಾಟ್​-2ಬಿಆರ್​1 ಉಪ್ರಗಹದ ಜೊತೆಗೆ 9 ಗ್ರಾಹಕ...

VIDEO| ವಿಜಯವಾಣಿ-ದಿಗ್ವಿಜಯ ನ್ಯೂಸ್​ ಸಹಯೋಗದಲ್ಲಿ ಫೋನ್​ ಇನ್​ ಪ್ರೋಗ್ರಾಮ್​: ಮಹಿಳಾ...

ಬೆಂಗಳೂರು: ದಿಶಾ ಅತ್ಯಾಚಾರ ಮತ್ತು ಕೊಲೆ ಹಾಗೂ ಉನ್ನಾವೋ ಅತ್ಯಾಚಾರ ಪ್ರಕರಣಗಳಂತಹ ಪೈಶಾಚಿಕ ಕೃತ್ಯಗಳು ಜನರ ಮನಸ್ಸಿನಲ್ಲಿನ್ನೂ ಮಾಸಿಲ್ಲ. ಈ ಎರಡು ಪ್ರಕರಣಗಳಿಂದ ದೇಶದೆಲ್ಲೆಡೆ ಮಹಿಳಾ ಸುರಕ್ಷಾ ಪ್ರಶ್ನೆಯನ್ನು ಎಬ್ಬಿಸಿದೆ....

VIDEO: ಮರದ ಮೇಲಿದ್ದ ಹಾವನ್ನು ಜಂಪ್​ ಮಾಡಿದ ಹಿಡಿದ ಮುಂಗುಸಿ;...

ಬಳ್ಳಾರಿ: ಹಾವು-ಮುಂಗುಸಿ ಫೈಟ್​ ಹೊಸದಲ್ಲ. ಈಗಾಗಲೇ ಅದೆಷ್ಟೋ ದೃಶ್ಯಗಳನ್ನು ನೋಡಿರುತ್ತೇವೆ. ಆದರೆ ಇಲ್ಲೊಂದು ಮುಂಗುಸಿ ಹಾವನ್ನು ಹಿಡಿದ ಪರಿ ನೋಡಿದರೆ ಒಂದು ಕ್ಷಣ ಮೈ ಜುಂ ಎನ್ನುತ್ತದೆ. ಹಾವಿನ ಮೇಲೆ ಸುಮ್ಮನೆ ಕುಳಿತಿದ್ದ ಮಾರುದ್ದ...

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...