ಕನ್ನಡಿಗ ಎಸ್​ವಿ ಸುನೀಲ್​ಗೆ ಸ್ಥಾನ

ನವದೆಹಲಿ: ಫೆ.18ರಿಂದ ಬೆಂಗಳೂರಿನ ಸಾಯ್ ಕೇಂದ್ರದಲ್ಲಿ ನಡೆಯಲಿರುವ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಎಸ್​ವಿ ಸುನೀಲ್ ಒಳಗೊಂಡಂತೆ 34 ಸಂಭಾವ್ಯ ಆಟಗಾರರ ಭಾರತ ಹಾಕಿ ತಂಡ ಆಯ್ಕೆ ಮಾಡಲಾಗಿದೆ. ಸುಲ್ತಾನ್ ಅಜ್ಲಾನ್ ಷಾ ಹಾಕಿ ಟೂರ್ನಿ ಸಿದ್ಧತೆಗಾಗಿ ರಾಷ್ಟ್ರೀಯ ಶಿಬಿರ ಮಾರ್ಚ್ 18ರವರೆಗೆ ನಡೆಯಲಿದೆ. ಮಾ.23ರಿಂದ ಮಲೇಷ್ಯಾದ ಇಪೋದಲ್ಲಿ ಟೂರ್ನಿ ನಡೆಯಲಿದೆ. ಕಳೆದ ಡಿಸೆಂಬರ್​ನಲ್ಲಿ ಭುವನೇಶ್ವರದಲ್ಲಿ ನಡೆದ ವಿಶ್ವಕಪ್​ನಲ್ಲಿ ಆಡಿದ್ದ 18 ಆಟಗಾರರನ್ನು ತಂಡದಲ್ಲಿ ಉಳಿಸಿ ಕೊಳ್ಳಲಾಗಿದೆ. ಎಸ್​ವಿ ಸುನೀಲ್ ಗಾಯದಿಂದ ವಿಶ್ವಕಪ್ ತಂಡದಿಂದ ಹೊರಗುಳಿದಿದ್ದರು.