ಚಿಕ್ಕಮಗಳೂರು: ಉಗ್ರರ ಅಡಗÀÄತಾಣಗಳನ್ನು ದ್ವಂಸಗೊಳಿಸಿ ನಾರಿಯರ ಸಿಂದೂರಕ್ಕೆ ಪ್ರತಿ ಕಾರ ತೀರಿಸಿಕೊಂಡ ವೀರ ಯೋಧರ ಸೇವಾ ಕಾರ್ಯ ಶ್ಲಾಘಿಸಿ ಗುರುವಾರ ಜಿಲ್ಲಾ ಕನ್ನಡಸೇನೆ ಕಾರ್ಯಕರ್ತರು ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಸಿಹಿಹಂಚಿ ಸಂಭ್ರಮಾಚರಣೆ ನಡೆಸಿದರು.

ಈ ಕುರಿತು ಮಾತನಾಡಿದ ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ, ಜೀವನದ ಸಂತೋಷವನ್ನು ಕಳೆಯಲು ಆಗಮಿಸಿದ ಪ್ರವಾಸಿಗರ ಮೇಲೆ ಹೀನಕೃತ್ಯ ಎಸಗಿದ ಉಗ್ರಗ್ರಾಮಿಗಳನ್ನು ಮಟ್ಟಹಾಕಲು ಕೇಂದ್ರ ಸರ್ಕಾರದ ದಿಟ್ಟನಿರ್ಧಾರಕ್ಕೆ ಕೈಜೋಡಿಸಿದ ಸೈನಿಕರು ಉಗ್ರತಾಣಗಳನ್ನು ಪುಡಿಪುಡಿಗೊಳಿಸಿ ತಕ್ಕಉತ್ತರ ನೀಡಿರುವುದು ಹೆಮ್ಮೆಯ ಸಂಗತಿ ಎಂದರು.
ಪ್ರತಿ ಸಾರಿಯು ಭಾರತದ ಮೇಲೆ ಸುಳ್ಳು ಆರೋಪ, ಏಕಾಏಕಿ ದಾಳಿ ನಡೆಸುವ ಪಾಕಿಸ್ತಾನಕ್ಕೆ ಭಾರತೀಯರು ಯೋಧರು ಆಪರೇಷನ್ ಸಿಂಧೂರದ ಮೂಲಕ ಮುಟ್ಟಿಕೊಳ್ಳಲಾರಂಥ ಪಾಠಕಲಿಸಿ ನೊಂದವರಿಗೆ ನ್ಯಾಯ ಒದಗಿಸಿದ್ದಾರೆ. ಭಾರತೀಯರು ಶಾಂತಿಪ್ರಿಯರು. ಕೆಣಕಿದರೆ ಸಿಡಿದೇಳಲಿz್ದೆÃವೆ ಎಂಬುವುದನ್ನು ಈ ಯುದ್ಧದಲ್ಲಿ ಸಾಬೀತುಪಡಿಸಿದೆ ಎಂದು ಹೇಳಿದರು.
ಪ್ರಪಂಚದ ಬಲಾಡ್ಯ ರಾಷ್ಟçಗಳು ಭಾರತ ಕೈಗೊಂಡ ಆಪರೇಷನ್ ಸಿಂಧೂರ್ ಯುದ್ಧದಿಂದ ಮೆಚ್ಚುಗೆ ವ್ಯಕ್ತಪಡಿಸಿದಲ್ಲದೇ, ಭಾರತದ ಪರವಾಗಿ ನಿಂತುಕೊಳ್ಳಲು ಪ್ರಧಾನಿಗಳ ಶಕ್ತಿಯೇ ಮೂಲ ಕಾರಣ. ಅಮಾಯಕರನ್ನು ಕೊಲ್ಲುವ ಸಂಸ್ಕೃತಿ ಬೆಳೆಸಿಕೊಂಡಿರುವ ಪಾಪಿ ಪಾಕಿಸ್ತಾನದ ಉಗ್ರ ನೆಲೆಗಳನ್ನು ಹುಡುಕಿ ಧ್ವಂಸ ಮಾಡಿರುವ ಯೋಧರಿಗೆ ದೊಡ್ಡದೊಂದು ನಮನ ಎಂದು ತಿಳಿಸಿದರು.
ಸದೃಢ ರಾಷ್ಟç ನಿರ್ಮಾಣಗೊಳಿಸಲು ಕನ್ನಡಸೇನೆ ಕಾರ್ಯಕರ್ತರು ಶತೃದೇಶದ ವಿರುದ್ಧ ಎದೆಗುಂದದೇ ಭಾರತಾಂಬೆಯ ರಕ್ಷಣೆಗೆ ಸದಾಸಿದ್ದರಾಗಿz್ದÉÃವೆ. ಭಾರತೀಯರಿಗೆ ನೆಮ್ಮದಿ ಬದುಕು ಹಾಗೂ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಯಾವುದೇ ಕ್ಷಣದಲ್ಲೂ ಹೋರಾಟಕ್ಕೆ ಕಾರ್ಯಕರ್ತರು ಮುಂದಾಗುತ್ತೇವೆ ಎಂದು ಹೇಳಿದರು.
ಕನ್ನಡಸೇನೆ ವಕ್ತಾರ ಹುಣಸೇಮಕ್ಕಿ ಲಕ್ಷö್ಮಣ್ ಮಾತನಾಡಿ, ಆಪರೇಷನ್ ಸಿಂದೂರ್ ಯುದ್ಧದಲ್ಲಿ ಕೇಂದ್ರ ಸರ್ಕಾರ ಸ್ತಿçÃಯರ ನೇತೃತ್ವದಲ್ಲಿ ಭಾರತೀಯ ನಾರಿಯರಿಗೆ ನ್ಯಾಯ ಒದಗಿಸಿರುವುದು ಹೆಮ್ಮೆಯ ವಿಚಾರ. ಇನ್ನು ಮುಂದೆ ಪಾಕಿಸ್ತಾನವು ಭಾರತದ ತಂಟೆಗೆ ಬಂದರೆ ಭೂಪಟದಲ್ಲಿ ಆ ದೇಶದ ನಕ್ಷೆಯೇ ಮರೆಯಾಗಲಿದೆ ಎಂಬುದನ್ನು ಈ ಯುದ್ಧದಲ್ಲಿ ನೈಜವಾಗಿ ತಿಳಿಸಿದೆ ಎಂದರು.
ಈ ಸಂದರ್ಭದಲ್ಲಿ ಕನ್ನಡಸೇನೆ ಮುಖಂಡರಾದ ಅನ್ವರ್, ಜಯಪ್ರಕಾಶ್, ಶಂಕರೇಗೌಡ, ಪಾಲಾಕ್ಷಿ, ಜೀವನ್, ನವೀನ್‌ಕುಮಾರ್, ಅನಿಲ್‌ಆನಂದ್, ಮೋಹನ್, ಟೋನಿ, ಭಾರತಿ, ದೇವರಾಜ್, ನಿಲೇಶ್ ಮತ್ತಿತರರು ಹಾಜರಿದ್ದರು.