ಕನಕದಾಸರ ಹೊಳೆಯುವ ನಕ್ಷತ್ರವಿದ್ದಂತೆ

ವಿಜಯವಾಣಿ ಸುದ್ದಿಜಾಲ ಯಾದಗಿರಿ
ಸಮಾಜ ಮತ್ತು ಧರ್ಮ ಅಧೋಗತಿಗಿಳಿದಾಗ ಒಬ್ಬೊಬ್ಬ ಮಹಾಪುರುಷರು ಅವತರಿಸಿ ಸಮಾಜವನ್ನು ಉದ್ಧರಿಸುತ್ತಾರೆಂಬುದು ಬಹುಜನರ ಅಭಿಮತ. ಅಂತೆಯೇ ಕನ್ನಡ ನಾಡಿನಲ್ಲಿ ಅನೇಕ ಮಹಾನ್ ಸಮಾಜ ಸುಧಾರಕರನ್ನು ಧರ್ಮ ದೀಕ್ಷೆ ನೀಡಿದವರನ್ನು ಕಾಣುತ್ತೇವೆ ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ್ ತಿಳಿಸಿದರು.

ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಗುರುವಾರ ಜಿಲ್ಲಾಡಳಿತದಿಂದ ಹಮ್ಮಿಕೊಂಡ ಭಕ್ತಶ್ರೇಷ್ಠ ಕನಕದಾಸರ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದಾಸ ಪರಂಪರೆಯಲ್ಲಿ ವಿಶಿಷ್ಟ ಸ್ಥಾನ ಪಡೆದ ಕನಕದಾಸರು ಹೊಳೆಯುವ ನಕ್ಷತ್ರವಿದ್ದಂತೆ ಎಂದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ದೇವಿಂದ್ರಪ್ಪ ಹಳಿಮನಿ ಉಪನ್ಯಾಸ ನೀಡಿ, ಕನಕದಾಸರು ಭೂಮಿಯನ್ನು ಉಳುಮೆ ಮಾಡುತ್ತಿರುವಾಗ ಬಂಗಾರದ ಹಂಡೆಗಳು ಸಿಕ್ಕಾಗ, ಸಂಸಾರದ ವ್ಯಾಮೋಹ ತೊರೆದು ಅದೆಲ್ಲವನ್ನು ಸಮಾಜದ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಿಸಿದರು. ಅಂದಿನಿಂದ ಕನಕ ಎಂದು ಹೆಸರಾದರು ಎಂದು ತಿಳಿಸುತ್ತಾ, ಕನಕದಾಸರ ಹಲವು ಪವಾಡಗಳನ್ನು ವಿವರಿಸಿದರು.

ಕನಕ ಸಾಹಿತ್ಯ ಲೋಕ ಪ್ರಬಂಧ ಸ್ಪಧರ್ೆಯಲ್ಲಿ ವಿಜೇತ ಮಕ್ಕಳಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು. ರಾಮಸಮುದ್ರ ಸಕರ್ಾರಿ ಪ್ರೌಢಶಾಲೆ ವಿದ್ಯಾಥರ್ಿ ರಾಜು, ದೋರನಹಳ್ಳಿ ಸಕರ್ಾರಿ ಪ್ರೌಢಶಾಲೆ ಮಾಳಪ್ಪ, ಗುರುಮಠಕಲ್ ಸರ್ಕಾರಿ ಪ್ರೌಢಶಾಲೆ ಮನಿಶಾ ಅವರಿಗೆ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನವನ್ನು ವಿತರಿಸಲಾಯಿತು. ತಾರಾಶ್ರೀ, ಮಲ್ಲಿಕಾಜರ್ುನ, ಕರೆಪ್ಪ ಅವರು ಸಮಾಧಾನಕರ ಬಹುಮಾನ ಪಡೆದರು.

ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ವಿಠ್ಠಲ್ ಮದ್ನೂರ್, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಗುರುನಾಥ ಗೌಡಪ್ಪನೋರ್, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷರಾದ ವಿಶ್ವನಾಥ ನೀಲಹಳ್ಳಿ, ಡಯಟ್ನ ಉಪನ್ಯಾಸಕ ಶಿವಪ್ಪ ಅವರು ಉಪಸ್ಥಿತರಿದ್ದರು.

ಕರ್ನಾಟಕದಲ್ಲಿ 15 ಮತ್ತು 16ನೇ ಶತಮಾನದಲ್ಲಿ ಕಾಣಿಸಿಕೊಂಡ ದಾಸಪಂಥದಲ್ಲಿ ಸರಿಸುಮಾರು 250ಕ್ಕೂ ಹೆಚ್ಚಿನ ಹರಿದಾಸರಲ್ಲಿ ಇವರೊಬ್ಬರೇ ಕನ್ನಡ ಭಾಷೆಯ ಸುಪ್ರಸಿದ್ಧ ಕೀರ್ತನಕಾರರು. ಹಲವು ಜಾತಿ ಪಂಥಗಳಿಂದ ಕೂಡಿದ ಸಮಾಜದ ಏಳ್ಗೆಗಾಗಿ ಕೀರ್ತನೆಗಳನ್ನು ಬರೆದ ಶ್ರೇಷ್ಠ ಸಂತ ಹಾಗೂ ಅಪಾರ ಜನಪ್ರಿಯತೆಯನ್ನು ಪಡೆದ ಕವಿಯಾಗಿದ್ದರು.
| ಪ್ರಕಾಶ ರಜಪೂತ್
ಅಪರ ಜಿಲ್ಲಾಧಿಕಾರಿ