ಕದ್ದುಮುಚ್ಚಿ ಓಡಾಡಿದ ಪ್ರೇಮಿಗಳು

ಹುಬ್ಬಳ್ಳಿ: ಉದ್ಯಾನಗಳಿಗೆ ನೋ ಎಂಟ್ರಿ, ಎಲ್ಲೆಡೆ ಪೊಲೀಸ್ ಬಿಗಿ ಭದ್ರತೆ ಒದಗಿಸಿದ್ದರೂ ಕೆಲ ಪ್ರೇಮಿಗಳು ಕದ್ದು ಮುಚ್ಚಿ ವಿಹರಿಸುವ ಮೂಲಕ ಪ್ರೇಮ ನಿವೇದನೆ ಹೇಳಿಕೊಂಡರು. ಆ ಮೂಲಕ ‘ಪ್ರೇಮಿಗಳ ದಿನಾಚರಣೆ’ ಆಚರಿಸಿದರು.

ನಗರದ ನೃಪತುಂಗ ಬೆಟ್ಟ, ಇಂದಿರಾ ಗಾಜಿನ ಮನೆ, ಉಣಕಲ್ ಕೆರೆ ಉದ್ಯಾನ, ಶಾಲಾ- ಕಾಲೇಜ್ ಆವರಣಗಳು, ಚಿತ್ರ ಮಂದಿರಗಳು ಸೇರಿ ಆಯಕಟ್ಟಿನ ಸ್ಥಳಗಳಲ್ಲಿ ಗುರುವಾರ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು. ಪ್ರೇಮಿಗಳ ದಿನಾಚರಣೆ ನೆಪದಲ್ಲಿ ಗದ್ದಲ ಸೃಷ್ಟಿಸುವವರ ಮೇಲೆ ಹದ್ದಿನ ಕಣ್ಣು ಇಟ್ಟಿದ್ದರು. ಉಣಕಲ್ ಕೆರೆ ಉದ್ಯಾನದಲ್ಲಿ ಪ್ರೇಮಿಗಳಿಗೆ ‘ನೋ ಎಂಟ್ರಿ’ ಎಂದು ವಾಪಸ್ ಕಳುಹಿಸುವ ದೃಶ್ಯ ಕಂಡು ಬಂತು. ಪ್ರೇಮಿಗಳು ಒಳಗೆ ಬಂದರೆ ಗದ್ದಲ ಉಂಟಾಗಬಹುದು ಎಂಬ ಕಾರಣಕ್ಕೆ ಅವರಿಗೆ ಟಿಕೆಟ್ ಕೊಡಬೇಡಿ ಎಂದು ಪೊಲೀಸರು ಅಲ್ಲಿನ ಸಿಬ್ಬಂದಿಗೆ ಸೂಚಿಸಿದ್ದರು ಎನ್ನಲಾಗಿದೆ. ನಿತ್ಯ ಉದ್ಯಾನಕ್ಕೆ 150ರಿಂದ 200 ಜನ ಆಗಮಿಸುತ್ತಿದ್ದರು. ಆದರೆ, ಪ್ರೇಮಿಗಳ ದಿನದಂದು ಕೇವಲ 50 ಜನ ಆಗಮಿಸಿದ್ದರು ಎಂದು ತಿಳಿದು ಬಂದಿದೆ.

‘ಕ್ರಾಂತಿ ಸೇನೆ’ ಬುದ್ಧಿಮಾತು

ಅಸಭ್ಯವಾಗಿ ವರ್ತಿಸುವ ಪ್ರೇಮಿಗಳಿಗೆ ಮದುವೆ ಮಾಡಿಸುವುದಾಗಿ ಹೇಳಿದ್ದ ಕ್ರಾಂತಿ ಸೇನಾ ಕಾರ್ಯಕರ್ತರು ಗುರುವಾರ ಸೀರೆ, ತಾಳಿ, ಪಂಚೆ ಹಿಡಿದು ಸಂಚರಿಸಿದರು. ಕೆಲ ಪ್ರೇಮಿಗಳಿಗೆ ಬುದ್ಧಿಮಾತು ಹೇಳಿ ಕಳುಹಿಸಿದರು. ನವಲಗುಂದ ರಸ್ತೆಯ ಹೊಲವೊಂದರಲ್ಲಿ ಎರಡು ಜೋಡಿಗಳನ್ನು ಪತ್ತೆ ಹಚ್ಚಲಾಗಿತ್ತು. ಅವರ ಪಾಲಕರನ್ನು ಕರೆಸಿ ವಿವಾಹದ ಕುರಿತು ಮಾತುಕತೆ ಮಾಡಲಾಯಿತು. ಆದರೆ,

ಅವರು ಅಂತರ ಧರ್ವಿುಯರಾಗಿದ್ದರಿಂದ ಬುದ್ಧಿಮಾತು ಹೇಳಿ ಕಳುಹಿಸಲಾಯಿತು ಎಂದು ಕ್ರಾಂತಿ ಸೇನಾ ಮುಖಂಡ ವಿಠ್ಠಲ ಪವಾರ ತಿಳಿಸಿದರು.

Leave a Reply

Your email address will not be published. Required fields are marked *