More

  ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಸಮಾಜಮುಖಿ ಕಾರ್ಯ

  ಮದ್ದೂರು: ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ತಾಲೂಕಿನಲ್ಲಿ ಹಲವಾರು ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗುತ್ತಿದೆ ಎಂದು ಟ್ರಸ್ಟ್ ಅಧ್ಯಕ್ಷ ಹಾಗೂ ಸಮಾಜ ಸೇವಕ ಕದಲೂರು ಉದಯ್ ತಿಳಿಸಿದರು.

  ಪಟ್ಟಣದ 8ನೇ ವಾರ್ಡ್‌ನ ಸ್ವಾಮಿ ವಿವೇಕಾನಂದ ನಗರದಲ್ಲಿರುವ ಗಂಗಾ ಸಮುದಾಯ ಭವನಕ್ಕೆ ಅಡುಗೆ ಸಾಮಗ್ರಿಗಳನ್ನು (ಪಾತ್ರೆಗಳು) ಉಚಿತವಾಗಿ ವಿತರಿಸಿ ಮಾತನಾಡಿದರು.

  ಟ್ರಸ್ಟ್ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ, ಆರೋಗ್ಯ ಶಿಬಿರ, ಆರ್ಥಿಕವಾಗಿ ಹಿಂದುಳಿದವರಿಗೆ ಆಹಾರ ಕಿಟ್ ವಿತರಣೆ, ದೇಗುಲಗಳ ನಿರ್ಮಾಣ, ಅನಾರೋಗ್ಯಕ್ಕೆ ಒಳಾಗದವರಿಗೆ ಆರ್ಥಿಕ ಸಹಾಯ, ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್, ಪಠ್ಯ ಪರಿಕರ ವಿತರಣೆ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸೇರಿದಂತೆ ಹಲವಾರು ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ ಎಂದರು.

  ಗಂಗಾ ಸಮುದಾಯ ಭವನದಲ್ಲಿ ಆರ್ಥಿಕವಾಗಿ ಹಿಂದುಳಿದವರು ಮದುವೆ ಹಾಗೂ ಇನ್ನಿತರರ ಶುಭ ಕಾರ್ಯಕ್ರಮಗಳನ್ನು ಮಾಡಲು ಅಡುಗೆ ಪಾತ್ರೆಗಳನ್ನು ಬಾಡಿಗೆಗೆ ತರಬೇಕಿತ್ತು. ಇದರಿಂದ ಆರ್ಥಿಕವಾಗಿ ಹೊರೆಯಾಗುತಿತ್ತು. ಈ ಬಗ್ಗೆ ಟ್ರಸ್ಟ್ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಉಚಿತವಾಗಿ ಅಡುಗೆ ಪಾತ್ರೆಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.

  ಗಂಗಾಮತಸ್ಥ ಮುಖಂಡರು ಸಮಾಜ ಸೇವಕ ಕದಲೂರು ಉದಯ್ ಅವರನ್ನು ಸನ್ಮಾನಿಸಿದರು. ಗ್ರಾಪಂ ಸದಸ್ಯ ತಮ್ಮೇಗೌಡ, ಗಂಗಾಮತಸ್ಥ ಮುಖಂಡರಾದ ಎಚ್.ಕೃಷ್ಣಪ್ಪ, ಕೆಂಪ ಅರಸಯ್ಯ, ಟಿ.ಸಿದ್ದಯ್ಯ, ಧನಂಜಯ, ಮಂಚಯ್ಯ, ಚೆಲುವಮ್ಮ, ಸವಡೆ ಸಿದ್ದಯ್ಯ, ಮಹೇಶ, ಚಂದ್ರು, ಉಮೇಶ್, ಸೆಲ್ವಿಮುರಗೇಶ್, ಯರಗನಹಳ್ಳಿ ಹರೀಶ್, ಕದಲೂರು ರವಿ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts