Friday, 14th December 2018  

Vijayavani

ಚಾಮರಾಜನಗರದಲ್ಲಿ ವಿಷವಾದ ಮಾರಮ್ಮನ ಪ್ರಸಾದ- ನಾಲ್ವರ ಸಾವು-40ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ, ಜಿಲ್ಲಾಧಿಕಾರಿ ಭೇಟಿ        ರಾಜಸ್ಥಾನ ಸಿಎಂ ಆಗಿ ಆಶೋಕ್ ಗೆಹ್ಲೋಟ್, ಯುವ ನಾಯಕ ಸಚಿನ್ ಪೈಲಟ್​​ಗೆ ಡಿಸಿಎಂ ಪಟ್ಟ- ಕಾಂಗ್ರೆಸ್​ನಿಂದ ಅಧಿಕೃತ ಘೋಷಣೆ        ಚೆನ್ನೈನ ರೇಲಾ ಆಸ್ಪತ್ರೆಗೆ ಭೇಟಿ ನೀಡಿ ಸಿದ್ಧಗಂಗಾ ಶ್ರೀಗಳ ಆರೋಗ್ಯ ವಿಚಾರಿಸಿದ ಬಿಎಸ್​ವೈ- ಸಿಎಂ ಎಚ್​ಡಿಕೆ ಚೆನ್ನೈಗೆ ಪ್ರಯಾಣ        ಭದ್ರತೆಗಾಗಿ ರಫೇಲ್ ಖರೀದಿ-ಸುಪ್ರೀಂಕೋರ್ಟ್ ತೀರ್ಪಿನಿಂದ ಭ್ರಮನಿರಸನ-ರಾಗಾ ವಿರುದ್ಧ ಹಾಲಿ ಮಾಜಿ ರಕ್ಷಣಾ ಸಚಿವರ ಕಿಡಿ        ನಾಲ್ಕು ದಿನದಲ್ಲಿ ಎಲ್ಲ ಸರಿಹೋಗುತ್ತೆ-ಪ್ರಯಾಣಿಕರಿಗೆ ಯಾವುದೇ ಆತಂಕ ಬೇಡ-ಪಿಲ್ಲರ್ ಬಿರುಕಿಗೆ BMRCL ಎಂಡಿ ಸ್ಪಷ್ಟನೆ        ನನಗೂ ಸಚಿವೆಯಾಗುವ ಆಸೆ ಇದೆ- ಅಂತರಂಗ ತೆರೆದಿಟ್ಟ ಲಕ್ಷ್ಮೀ ಹೆಬ್ಬಾಳ್ಕರ್- ಕೈ ಸಚಿವಾಕಾಂಕ್ಷಿಗಳ ಪಟ್ಟಿಗೆ ಈಗ ಹೊಸ ಸೇರ್ಪಡೆ       
Breaking News

ಕತ್ತಲ ಕೋಣೆಯಲ್ಲಿ ಪತ್ರಕರ್ತ!

Friday, 10.08.2018, 3:02 AM       No Comments

ನೈಜಘಟನೆ ಆಧರಿಸಿ ಚಂದನವನದಲ್ಲಿ ಅನೇಕ ಚಿತ್ರಗಳು ತೆರೆಕಂಡಿವೆ. ಖಾಸಗಿ ಸುದ್ದಿ ವಾಹಿನಿ ವರದಿಗಾರ ಸಂದೇಶ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಕತ್ತಲೆಕೋಣೆ’ ಇದಕ್ಕೆ ಹೊಸ ಸೇರ್ಪಡೆ. 1993ರಲ್ಲಿ ಮಲೆನಾಡಿನಲ್ಲಿ ನಡೆದ ಘಟನೆ ಈ ಚಿತ್ರಕ್ಕೆ ಸ್ಪೂರ್ತಿಯಂತೆ. ಸೈಕಲಾಜಿಕಲ್ ಥ್ರಿಲರ್ ಶೈಲಿಯಲ್ಲಿ ಮೂಡಿಬಂದಿರುವ ಈ ಚಿತ್ರ, ಈ ವಾರ (ಆ.10) ತೆರೆಕಾಣುತ್ತಿದೆ. ಹಾಗಾಗಿ ಚಿತ್ರದ ಬಗ್ಗೆ ಮಾಹಿತಿ ನೀಡಲು ಇಡೀ ತಂಡ ಇತ್ತೀಚಿಗೆ ಮಾಧ್ಯಮಗಳ ಎದುರು ಹಾಜರಾಗಿತ್ತು. ‘ಕತ್ತಲೆ ಕೋಣೆ’ ಎಂಬುದು ಎಸ್ಟೇಟ್​ವೊಂದರ ಹೆಸರಂತೆ. ಚಿತ್ರದಲ್ಲಿ ಆ ಎಸ್ಟೇಟ್ ಪ್ರಮುಖ ಪಾತ್ರ ವಹಿಸಲಿದೆ ಎಂಬುದು ನಿರ್ದೇಶಕರ ಮಾತು. ‘ಮಾದಕವ್ಯಸನಕ್ಕೆ ತುತ್ತಾದ ಯುವಕನೊಬ್ಬನ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಸೈನಿಕನಾಗಬೇಕು ಎಂದು ಕನಸು ಕಾಣುವ ಯುವಕನೋರ್ವ ಮಾದಕ ವ್ಯಸನಕ್ಕೆ ತುತ್ತಾಗುತ್ತಾನೆ. ಆತ ಮಾದಕ ವ್ಯಸನಿಯಾಗುವುದರ ಹಿಂದೆ ಒಂದು ಗ್ಯಾಂಗ್ ಕೆಲಸ ಮಾಡಿರುತ್ತದೆ. ಈ ಪ್ರಕರಣವನ್ನು ಒಂದು ಪತ್ರಿಕೆ ಭೇದಿಸಲು ಹೊರಡುತ್ತದೆ. ಅದರ ವಿರುದ್ಧ ಸುದ್ದಿಗಳನ್ನು ಮಾಡಿದಾಗ ಯಾವ ರೀತಿ ಒತ್ತಡಗಳು ಇರುತ್ತವೆ ಎಂಬುದನ್ನು ನಾವು ತೋರಿಸುತ್ತಿದ್ದೇವೆ’ ಎಂದು ಚಿತ್ರದ ಬಗ್ಗೆ ಮಾಹಿತಿ ನೀಡುತ್ತಾರೆ ನಿರ್ದೇಶಕರು.

ಸುದ್ದಿ ಪತ್ರಿಕೆಯೊಂದರ ಸಂಪಾದಕನಾಗಿ ಸಂದೇಶ್ ಕಾಣಿಸಿಕೊಂಡಿದ್ದಾರೆ. ಚಿತ್ರದ ನಾಯಕಿ ಹನಿಕಾ ರಾವ್ ವರದಿಗಾರ್ತಿಯಾಗಿ ನಟಿಸಿದ್ದಾರೆ. ಅಂದಹಾಗೆ, ಪತ್ರಕರ್ತರು ನಿತ್ಯ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ‘ಕತ್ತಲೆ ಕೋಣೆ’ ಬೆಳಕು ಚೆಲ್ಲಲಿದೆಯಂತೆ. ‘ಪತ್ರಕರ್ತರು ನಿತ್ಯ ಅನೇಕರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ. ಆದರೆ ಅವರು ಎಷ್ಟು ತೊಂದರೆ ಅನುಭವಿಸುತ್ತಾರೆ ಎಂಬುದು ಅನೇಕರಿಗೆ ಗೊತ್ತಿರುವುದಿಲ್ಲ. ಆ ಎಲ್ಲ ಅಂಶಗಳನ್ನು ಚಿತ್ರದಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದೇವೆ’ ಎನ್ನುತ್ತಾರೆ ಸಂದೇಶ್. ಇನ್ನು ಅವರು ಮೂರು ದಿನಗಳ ಕಾಲ ಒಳಉಡುಪಿನಲ್ಲೇ ಶೂಟ್​ನಲ್ಲಿ ಪಾಲ್ಗೊಂಡಿದ್ದಾರಂತೆ. ಈ ದೃಶ್ಯಗಳು ಚಿತ್ರದಲ್ಲಿ ಬಹುಮುಖ್ಯ ಪಾತ್ರ ವಹಿಸಲಿದೆಯಂತೆ.

ವೈಶಾಖ್ ಅಮೀನ್, ರತಿಕ್ ಮುರುಡೇಶ್ವರ್, ಅಶ್ವತ್ಥ್ ಆಚಾರ್ಯ, ಶ್ರೀನಿವಾಸ್ ಪೈ ಮೊದಲಾದವರು ನಟಿಸಿದ್ದಾರೆ. ‘ಸರಿಗಮಪ’ ಖ್ಯಾತಿಯ ಮೆಹಬೂಬ್ ಸಾಬ್ ಒಂದು ಹಾಡಿಗೆ ಧ್ವನಿ ನೀಡಿದ್ದಾರೆ. ಪುರುಷೋತ್ತಮ್ ಅಮೀನ್ ಚಿತ್ರದ ನಿರ್ವಪಕರು.

Leave a Reply

Your email address will not be published. Required fields are marked *

Back To Top