ಕಣ್ಣಿದ್ದರೆ ಪ್ರಾಪಂಚಿಕ ಅರಿವು ಸಾಧ್ಯ

ತ್ಯಾಮಗೊಂಡ್ಲು: ಕಣ್ಣಿದ್ದರೆ ಮಾತ್ರ ಪ್ರಪಂಚದ ಅರಿವು ಉಂಟಾಗಲು ಸಾಧ್ಯ ಎಂದು ಹಸಿರುವಳ್ಳಿ ಗ್ರಾಪಂ ಅಧ್ಯಕ್ಷ ಡಿ.ನರಸಿಂಹಮೂರ್ತಿ ಅಭಿಪ್ರಾಯಪಟ್ಟರು.

ಹಸಿರುವಳ್ಳಿಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಗ್ರಾಪಂ, ಶಂಕರ ಕಣ್ಣಿನ ಆಸ್ಪತ್ರೆ, ಒನ್ ಗುಡ್ ಸ್ಟೆಪ್ ಸ್ವಯಂ ಸೇವಾ ಸಂಸ್ಥೆ ಮತ್ತು ವಿಕಲಚೇತನ ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕಣ್ಣಿನ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ರಾಷ್ಟ್ರೀಯ ಅಂಧತ್ವ ನಿವಾರಣಾ ಕಾರ್ಯಕ್ರಮದ ಮೂಲ ಉದ್ದೇಶ 2020ರ ವೇಳೆಗೆ ಭಾರತದಲ್ಲಿ ಕುರುಡುತನ ನಿಮೂಲನೆ ಮಾಡುವುದು. ಮೂಢನಂಬಿಕೆಯಿಂದ ಎಷ್ಟೋ ಜನರು ಈಗಲೂ ದೃಷ್ಟಿ ಕಳೆದುಕೊಳ್ಳುತ್ತಿರುವುದು ವಿಪರ್ಯಾಸ. ಎಲ್ಲ ಆರೋಗ್ಯ ಕೇಂದ್ರಗಳಲ್ಲೂ ನೇತ್ರ ತಜ್ಞರಿದ್ದು, ನಿಯಮಿತವಾಗಿ ಕಣ್ಣು ತಪಾಸಣಾ ಶಿಬಿರ ನಡೆಯುತ್ತಿರುತ್ತದೆ ಎಂದರು.

ಪಿಡಿಒ ರಾಮಕೃಷ್ಣಯ್ಯ ಮಾತನಾಡಿ, ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಶಿಬಿರದಲ್ಲಿ 195 ಮಂದಿ ತಪಾಸಣೆ ಮಾಡಿಕೊಂಡಿದ್ದು, 47 ಜನರಿಗೆ ಉಚಿತ ಕನ್ನಡಕ ವಿತರಿಸಲಾಯಿತು. 22 ಜನರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಲು ತಿಳಿಸಲಾಯಿತು.

ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಮಾನಸಾ, ಗ್ರಾಪಂ ಸದಸ್ಯ ಅಶ್ವತ್ಥಯ್ಯ, ಆನಂದ್, ತಿಮ್ಮೇಗೌಡ, ಶಂಕರ ಕಣ್ಣಿನ ಆಸ್ಪತ್ರೆಯ ಯೋಜನೆ ಸಂಯೋಜಕ ಕುಮಾರ್, ಡಾ.ಮೋನಿಶಾ, ತಂತ್ರಜ್ಞೆ ದಿವ್ಯಾ, ಆನ್ನಿ, ವೆಂಕಟೇಶ್, ಅಂಗವಿಕಲರ ಪುರ್ನವಸತಿ ಸೇವಾ ಯೋಜನೆಯ ಮುನಿರಾಜು, ಜ್ಯೋತಿ, ಪ್ರಾ.ಆ.ಕೇಂದ್ರದ ಸಿಬ್ಬಂದಿ ವನಜಾಕ್ಷಿ, ಗ್ರಾಪಂ ಸಿಬ್ಬಂದಿ ಕೆಂಪರಾಜು ಇದ್ದರು.

Leave a Reply

Your email address will not be published. Required fields are marked *