ಕಡಲಂಚಿನ ರಸ್ತೆಗಿಲ್ಲ ತಡೆಗೋಡೆ

ಅಂಕೋಲಾ: ತಾಲೂಕಿನ ಬೆಳಂಬಾರದ ಹಂದಗೋಡ ಮಜರೆಗೆ ಸಾಗುವ ರಸ್ತೆಯನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಮಣ್ಣಿನಿಂದ ನಿರ್ವಿುಸಲಾಗಿದೆ. ಇನ್ನು ತಡೆಗೋಡೆ ನಿರ್ವಣಕ್ಕೆ ಗ್ರಾಪಂನಿಂದ ಜಿಲ್ಲಾಡಳಿತಕ್ಕೆ ಮಂಜೂರಾತಿಗಾಗಿ ಪ್ರಸ್ತಾವನೆ ಸಲ್ಲಿಸ ಲಾಗಿದ್ದರೂ ಆದೇಶ ಬಾರದಿರುವುದರಿಂದ ತಡೆಗೋಡೆ ಕಾಮಗಾರಿ ಆರಂಭಗೊಂಡಿಲ್ಲ. ಇದು ಸಮುದ್ರ ತೀರದಲ್ಲಿ ಇರುವುದರಿಂದ ತಡೆಗೋಡೆ ನಿರ್ವಣಗೊಳ್ಳದಿದ್ದರೆ ಮಳೆಗಾಲದಲ್ಲಿ ರಸ್ತೆ ಕೂಡ ನೀರು ಪಾಲಾಗುವ ಸಾಧ್ಯತೆ ಇದೆ.

ಹಂದಗೋಡ ಮಜರೆಯಲ್ಲಿ ಹಾಲಕ್ಕಿ ಸಮುದಾಯದ 600ರಷ್ಟು ಜನಸಂಖ್ಯೆಯಿದ್ದು, ಅವರಿಗೆ ಕಾಲುದಾರಿ ಹೊರತುಪಡಿಸಿದರೆ ಯಾವುದೇ ದಾರಿ ಇದ್ದಿರಲಿಲ್ಲ. ಗ್ರಾಪಂನಿಂದ ಉದ್ಯೋಗ ಖಾತ್ರಿ ಯೋಜನೆಯಡಿ 700 ಮೀ. ಮಣ್ಣಿನಿಂದ ರಸ್ತೆ ನಿರ್ವಿುಸಲಾಗಿದೆ. ತಡೆ ಗೋಡೆಗಾಗಿ 2 ಲಕ್ಷ ರೂ. ಸೇರಿಸಲಾಗಿದೆ. ಒಟ್ಟು 37 ಲಕ್ಷ ರೂ. ವೆಚ್ಚದ ವಿವಿಧ ಕಾಮಗಾರಿಗಳ ಕಡತವನ್ನು ಜಿಲ್ಲಾಧಿಕಾರಿಗೆ ಕಳುಹಿಸಲಾಗಿದೆ. ಮಳೆಗಾಲ ದಲ್ಲಿ ಕಡಲಬ್ಬರದಿಂದಾಗಿ ಈಗ ನಿರ್ವಿುಸಿರುವ ರಸ್ತೆಯೂ ಕೊಚ್ಚಿ ಹೋಗುವ ಸಾಧ್ಯತೆಯಿದ್ದು, ಆದಷ್ಟು ಶೀಘ್ರ ತಡೆಗೋಡೆ ವ್ಯವಸ್ಥೆ ಮಾಡಬೇಕಾಗಿದೆ. ಆದರೆ, ಈಗ ನೀತಿ ಸಂಹಿತೆ ಇರುವುದರಿಂದ ಉಳಿದ ಕಾಮಗಾರಿಗಳಿಗೆ ಅನುಮೋದನೆ ನೀಡದಿದ್ದರೂ ಇದು ತೀರಾ ಅನಿವಾರ್ಯ ಇರುವುದರಿಂದ ಮುಂದಾಗುವ ಅನಾಹುತ ತಪ್ಪಿಸುವುದಕ್ಕಾಗಿ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯವಿದೆ.

ಒಟ್ಟು 37 ಲಕ್ಷ ರೂ. ವೆಚ್ಚದ ವಿವಿಧ ಕಾಮಗಾರಿಯ ಮಂಜೂರಾತಿಗಾಗಿ ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗಿದೆ. ಆದೇಶ ಬಂದ ನಂತರವೇ ಕಾಮಗಾರಿ ಕೈಗೊಳ್ಳಬೇಕಾಗಿದೆ. ಇಲ್ಲಿಯ ಸಮಸ್ಯೆಗಳ ಕುರಿತು ನಮಗೆ ಅರಿವಿದ್ದರೂ ಮೇಲಧಿಕಾರಿಗಳ ಆದೇಶ ಬರುವವರೆಗೆ ನಾವು ಯಾವುದೇ ಯೋಜನೆಯನ್ನು ಅನುಷ್ಠಾನಗೊಳಿಸಲು ಸಾಧ್ಯವಾಗುತ್ತಿಲ್ಲ. | ಹಸ್ಮತ್ ಖಾನ್ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬೆಳಂಬಾರ

ಬೆಳಂಬಾರ ಗ್ರಾಮದ ಹಂದಗೋಡ ಮಜರೆಯಲ್ಲಿ ಇನ್ನುವರೆಗೂ ರಸ್ತೆ ನಿರ್ವಣವಾಗದಿದ್ದರಿಂದಾಗಿ ಜನರು ಪರಿತಪಿಸುತ್ತಿದ್ದರು. ಇಲ್ಲಿ ಬಡ ಹಾಲಕ್ಕಿ ಕುಟುಂಬದವರೇ ವಾಸವಾಗಿದ್ದು, 600 ರಷ್ಟು ಜನಸಂಖ್ಯೆ ಇದೆ. ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಕೂಡಲೆ ಪಿಚ್ಚಿಂಗ್ ತಡೆಗೋಡೆಗೆ ಅನುಮತಿ ನೀಡುವ ಮೂಲಕ ರಸ್ತೆಯನ್ನು ಉಳಿಸಬೇಕಾಗಿದೆ.
| ಹನುಮಂತ ಬೊಮ್ಮು ಗೌಡ ಅಧ್ಯಕ್ಷರು, ಉತ್ತರ ಕನ್ನಡ ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘ

Leave a Reply

Your email address will not be published. Required fields are marked *