ರಾಜ್ಯ ಸರ್ಕಾರ ಘೋಷಿಸಿರುವ ಕಟ್ಟುನಿಟ್ಟಿನ ಮರಳು ನೀತಿ ಅನುಷ್ಠಾನಕ್ಕೆ ತರಬೇಕು: ಈ.ರಾ.ದುರ್ಗಪ್ರಸಾದ್

ಮಡಿಕೇರಿ: ಸರ್ಕಾರ ಘೋಷಿಸಿರುವ ಮರಳು ನೀತಿಯನ್ನು ಜಿಲ್ಲಾಡಳಿತ ಕಟ್ಟುನಿಟ್ಟಾಗಿ ಜಿಲ್ಲೆಯಲ್ಲಿ ಅನುಷ್ಠಾನಕ್ಕೆ ತರಬೇಕು ಎಂದು ಭಾರತ ಕಮ್ಯುನಿಷ್ಟ್ ಪಕ್ಷದ (ಮಾರ್ಕ್ಸ್‌ವಾದಿ) ಪ್ರಧಾನ ಕಾರ್ಯದರ್ಶಿ ಈ.ರಾ.ದುರ್ಗಪ್ರಸಾದ್ ಆಗ್ರಹಿಸಿದ್ದಾರೆ.

ಎಚ್​.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಿದ್ದರೂ ಮರಳಿಗಾಗಿ ಜನರು ಭವಣೆ ಪಡುವಂತಾಗಿದೆ. ಮತ್ತೊಂದೆಡೆ ಸರ್ಕಾರ ಸಕ್ರಮ ಎಂದು ಘೋಷಿಸಿರುವ ಮಾರ್ಗದಲ್ಲಿ ಇಂದು ಮರಳು ಸಿಗುತ್ತಿಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ತತ್ಪರಿಣಾಮ ಜನರು ತಾವೇ ಮರಳನ್ನು ಸಂಗ್ರಹಿಸಲು ಮುಂದಾದ ಸಂದರ್ಭಗಳು ಅನೇಕ ಇವೆ. ಆಗೆಲ್ಲ ಅಧಿಕಾರಿಗಳು ಅಕ್ರಮ ಮರಳುಗಾರಿಕೆ ಎಂಬ ಆರೋಪದಲ್ಲಿ ಜನರನ್ನು ವಶಕ್ಕೆ ಪಡೆಯುತ್ತಿದ್ದಾರೆ. ಲಂಚ ಕೊಟ್ಟರೆ ಮಾತ್ರ ಬಿಡುತ್ತಾರೆ. ಇವುಗಳಿಗೆ ಕಡಿವಾಣ ಹಾಕಲು ಸರ್ಕಾರ ಘೋಷಿಸಿರುವ ಮರಳು ನೀತಿಯನ್ನು ಜಿಲ್ಲಾಡಳಿತ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು. ಸದಸ್ಯರಾದ ಎ.ಸಿ. ಸಾಬು, ಎಚ್.ಪಿ. ರಮೇಶ್ ಇದ್ದರು.

Leave a Reply

Your email address will not be published. Required fields are marked *