ಕಚ್ಚಾ ನೂಲು ಪೂರೈಕೆಗೆ ನೇಕಾರರ ಆಗ್ರಹ

ಬೆಟಗೇರಿ: ಕಚ್ಚಾ ನೂಲು ಪೂರೈಸುವಂತೆ ಆಗ್ರಹಿಸಿ ಕೈಮಗ್ಗ ನೇಕಾರರು ನಗರದ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ನಿಯಮಿತ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ನಿಯಮಿತವು ಜಕಾರ್ಡ್ ಮಗ್ಗ, ಟರ್ಕಿ ಟವಲ್ ಹಾಗೂ ಎರಡು ಕಾಲ್ಪಡಿ ಮಗ್ಗಗಳ ಕಚ್ಚಾ ನೂಲನ್ನು ಕಳೆದ ಎರಡು ತಿಂಗಳಿನಿಂದ ಪೂರೈಸದ ಹಿನ್ನೆಲೆಯಲ್ಲಿ ಕಾರ್ವಿುಕರು ಪ್ರತಿಭಟನೆ ನಡೆಸಿದರು.

ಕಳೆದ 1998ರಿಂದ ಜಕಾರ್ಡ್ ಬೆಡ್​ಶೀಟ್, ಟರ್ಕಿ ಟವಲ್ ಹಾಗೂ ಇನ್ನಿತರೆ ಬೆಡ್​ಶೀಟ್​ಗಳನ್ನು ನೇಯುತ್ತಿದ್ದೇವೆ. ಅದರಿಂದ ನಿತ್ಯ ತಲಾ 200 ರೂ. ಉಳಿಯುತ್ತಿತ್ತು. ಇತ್ತೀಚೆಗೆ ಹಿಂದಿನ ದಾಸ್ತಾನು ಖಾಲಿಯಾಗಿಲ್ಲ ಎಂಬ ಕಾರಣದಿಂದ ಜಕಾರ್ಡ್, ಟರ್ಕಿ ಟವಲ್​ಗಳ ಉತ್ಪಾದನೆ ಸ್ಥಗಿತಗೊಳಿಸಿರುವುದು ಸರಿಯಲ್ಲ. ಇದರಿಂದ ನಿತ್ಯ ಜೀವನ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಎಂದು ಅಳಲು ತೋಡಿಕೊಂಡರು.

ನೇಕಾರ ಕಾರ್ವಿುಕರಾದ ನಾರಾಯಣ ಮದಗುಂಡಿ, ಹುಚ್ಚಪ್ಪ ಬಾರಾಟಕ್ಕೆ, ಶ್ರೀನಿವಾಸ ಗಣಪ, ಜಗನ್ನಾಥ ವನ್ನಾಲ, ಆನಂದ ದಿವತೆ, ಶಂಬು ಗಂಜಿ, ರಾಜು ಶ್ಯಾವಿ, ಬಸ್ಸಪ್ಪ ಗಣಪಾ, ರಂಗಪ್ಪ ಮದಗುಂಡಿ, ಮಂಜು ಬೇಲೇರಿ, ಗಿಡ್ಡಯ್ಯ ಬಂಡಾ ಭಾಗವಹಿಸಿದ್ದರು.