ಕಗ್ಗಂಟಾದ ಎಸ್​ಟಿಪಿ ಕಡ್ಡಾಯ ನಿಯಮ: ದೆಹಲಿ ಮಾದರಿ ಜಾರಿಗೆ ಚಿಂತನೆ

<< ಜಲಮಂಡಳಿ ಸೇವೆ ಇಲ್ಲದ ಪ್ರದೇಶದಲ್ಲಿವೆ ಹೆಚ್ಚು ಕಟ್ಟಡ >>

ಬೆಂಗಳೂರು: ನಗರದ ವಸತಿ ಸಮುಚ್ಚಯಗಳಲ್ಲಿ ತ್ಯಾಜ್ಯ ನೀರು ಸಂಸ್ಕರಣಾ (ಎಸ್​ಟಿಪಿ) ಘಟಕಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳುವ ನಿಯಮ ಕಗ್ಗಂಟಾಗಿಯೇ ಮುಂದುವರಿದಿದೆ.

ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಲ್ಲಿ ಜಲಮಂಡಳಿ ಸೇವೆ ಇಲ್ಲದಿರುವುದರಿಂದ ಆ ಪ್ರದೇಶಗಳಲ್ಲಿ ಎಸ್​ಟಿಪಿ ಕಡ್ಡಾಯದ ನಿಯಮ ಅನ್ವಯಿಸದಿರುವುದು ಒಂದೆಡೆಯಾದರೆ, ನಗರದ ಇತರ ಪ್ರದೇಶಗಳಲ್ಲಿ 2016ರ ಪೂರ್ವದಲ್ಲಿ ನಿರ್ವಣಗೊಂಡಿರುವ ಕಟ್ಟಡಗಳಿಗೂ ನಿಯಮ ಅನ್ವಯಿಸುತ್ತಿಲ್ಲ. ಹಳೆಯ ಕಟ್ಟಡಗಳಿಗೂ ನಿಯಮ ಜಾರಿಗೊಳಿಸಲು ಮಂಡಳಿ ಮುಂದಾಗಿತ್ತಾದರೂ ಸಾರ್ವಜನಿಕರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ತನ್ನ ಆದೇಶವನ್ನು 3-4 ಬಾರಿ ಬದಲಾಯಿಸಿತ್ತು. ನಂತರದಲ್ಲಿಯೂ ಎಸ್​ಟಿಪಿಗಳ ಕುರಿತಾಗಿ ಸ್ಪಷ್ಟ ನಿಲುವು ತಾಳಲು ಜಲಮಂಡಳಿಗೆ ಸಾಧ್ಯವಾಗಿಲ್ಲ.

ಕಾವೇರಿ ಐದನೇ ಹಂತದ ವಿಸ್ತರಣೆ ಬೆಂಗಳೂರಿನ ಪಾಲಿಗೆ ಕೊನೆಯ ಅವಕಾಶವಾಗಿದೆ. ನಂತರದಲ್ಲಿ ನೀರಿನ ಮರುಬಳಕೆ ಮಾಡಿದಲ್ಲಿ ಮಾತ್ರವೇ ರಾಜಧಾನಿ ಜನರಿಗೆ ನೀರು ದೊರೆಯಲಿದೆ. ಈ ಹಿನ್ನೆಲೆಯಲ್ಲಿ ಎಸ್​ಟಿಪಿಗಳು ಮಹತ್ವ ಪಡೆಯಲಿದ್ದು, ಈ ಕುರಿತಾಗಿ ಸ್ಪಷ್ಟ ನಿಯಮ ಜಾರಿಗೆ ಬರುವುದು ಅಗತ್ಯವಿದೆ.

ನಿಯಮ ಏನಿದೆ?: ಪ್ರಸ್ತುತ 2016ರ ನಂತರ ನಿರ್ವಣಗೊಂಡಿರುವ 50ಕ್ಕೂ ಹೆಚ್ಚು ಮನೆಗಳನ್ನು ಹೊಂದಿರುವ ವಸತಿ ಸಮುಚ್ಚಯ ಅಥವಾ 2 ಸಾವಿರ ಚದರ ಅಡಿಗಿಂತ ಮೇಲ್ಪಟ್ಟಿರುವ ಕಟ್ಟಡಗಳಲ್ಲಿ ಎಸ್​ಟಿಪಿ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ.

ಹಳೆಯದಾಗಿರುವ ಕಟ್ಟಡಗಳಲ್ಲಿ ಎಸ್​ಟಿಪಿ ಅಳವಡಿಕೆ ಕಷ್ಟಕರ ಎಂಬುದನ್ನು ಅಪಾರ್ಟ್​ವೆುಂಟ್ ನಿವಾಸಿಗಳು ಮನದಟ್ಟು ಮಾಡಿರುವ ಹಿನ್ನೆಲೆಯಲ್ಲಿ ಸರ್ಕಾರ ತಾತ್ಕಾಲಿಕ ವಿನಾಯಿತಿ ನೀಡಿತ್ತಾದರೂ, ನಂತರದಲ್ಲಿ ಯಾವುದೇ ಸ್ಪಷ್ಟ ನಿಲುವು ಕೈಗೊಳ್ಳಲು ಸಾಧ್ಯವಾಗಿಲ್ಲ.

ನಗರದಲ್ಲಿ ಪ್ರತಿದಿನ 1,510 ದಶಲಕ್ಷ ಲೀಟರ್ ತ್ಯಾಜ್ಯ ನೀರು ಉತ್ಪತ್ತಿಯಾಗುತ್ತಿದ್ದು, ಜಲಮಂಡಳಿಯಿಂದ ನಿರ್ವಿುಸಲಾಗಿರುವ ಸಾರ್ವಜನಿಕ ಎಸ್​ಟಿಪಿಗಳಿಗೆ ಪೂರ್ಣ ಪ್ರಮಾಣದಲ್ಲಿ ತ್ಯಾಜ್ಯ ನೀರು ಹರಿದುಬರುತ್ತಿಲ್ಲ.

ಅಲ್ಲದೆ ಈ ಎಸ್​ಟಿಪಿಗಳು ದಿನಕ್ಕೆ ಒಂದು ಸಾವಿರ ದಶಲಕ್ಷ ಲೀಟರ್ ನೀರನ್ನು ಸಂಸ್ಕರಿಸುವ ಸಾಮರ್ಥ್ಯ ಮಾತ್ರ ಹೊಂದಿವೆ. ಜಲಮಂಡಳಿಯು ಬೃಹತ್ ಎಸ್​ಟಿಪಿಗಳ ಸಾಮರ್ಥ್ಯವನ್ನು ಮಾತ್ರವೇ ತಿಳಿಸಿದ್ದು, ಎಷ್ಟು ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ ಹಾಗೂ ಎಷ್ಟು ಸಂಸ್ಕರಿಸಲಾಗುತ್ತಿದೆ ಎಂಬುದನ್ನು ಗೌಪ್ಯವಾಗಿಯೇ ಇಟ್ಟಿದೆ. ಹೀಗಾಗಿ ನೀರು ಸಂಸ್ಕರಿಸಿ ಮರುಬಳಕೆಗೆ ಒತ್ತು ನೀಡುವ ವಿಚಾರದಲ್ಲಿ ಮಂಡಳಿ ಗಟ್ಟಿ ತೀರ್ವನಗಳನ್ನು ಕೈಗೊಳ್ಳುತ್ತಿಲ್ಲ ಎಂಬ ಆರೋಪವೂ ಪರಿಸರವಾದಿಗಳಿಂದ ವ್ಯಕ್ತವಾಗಿದೆ.

ಆದರೆ, ಈ ವಿಚಾರದಲ್ಲಿ ಮಂಡಳಿ ಅಧಿಕಾರಿಗಳು ಅಸಹಾಯಕತೆ ತೋಡಿಕೊಂಡಿದ್ದಾರೆ. ಸೇವೆ ಇಲ್ಲದ ಕಡೆಗಳಲ್ಲಿ ಮಂಡಳಿ ಯಾವುದೇ ದಂಡ ವಿಧಿಸಲು ಸಾಧ್ಯವಿಲ್ಲ. ಈ ಹಿಂದೆ ವಿಧಿಸಿದ್ದ ದಂಡದ ಮೊತ್ತವನ್ನೂ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಮಂಡಳಿ ವಾಪಸ್ ಪಾವತಿಸಿದೆ. ಪೂರ್ಣ ಪ್ರಮಾಣದಲ್ಲಿ ನಿಯಮ ರೂಪಗೊಂಡಲ್ಲಿ ಮಾತ್ರವೇ ನಿರ್ಧಾರ ಸಾಧ್ಯ ಎಂದು ಹೇಳುತ್ತಾರೆ.

ಎಸ್​ಟಿಪಿ ಇದ್ದರೂ ಬಳಕೆ ಇಲ್ಲ!

ಜಲಮಂಡಳಿ ವ್ಯಾಪ್ತಿಯಲ್ಲಿ ಎಸ್​ಟಿಪಿ ಕಡ್ಡಾಯ ನಿಯಮದ ವ್ಯಾಪ್ತಿಗೆ ಒಳಪಡುವ 1,060ಕ್ಕೂ ಅಧಿಕ ಅಪಾರ್ಟ್​ವೆುಂಟ್​ಗಳಿವೆ. ಈ ಪೈಕಿ 2007ಕ್ಕೂ ಮೊದಲು ನಿರ್ವಣಗೊಂಡಿರುವ 344 ಅಪಾರ್ಟ್

ಮೆಂಟ್​ಗಳಿವೆ. ಜಲಮಂಡಳಿ ಸೇವೆ ಇಲ್ಲದ 110 ಹಳ್ಳಿಗಳ ವ್ಯಾಪ್ತಿಯಲ್ಲಿ 3 ಸಾವಿರಕ್ಕೂ ಅಧಿಕ ಅಪಾರ್ಟ್​ವೆುಂಟ್​ಗಳಿರುವ ಅಂದಾಜಿದೆ. ಹೀಗಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿನ ಅಪಾರ್ಟ್​ವೆುಂಟ್​ಗಳಿಗೆ ಎಸ್​ಟಿಪಿ ಕಡ್ಡಾಯಗೊಳ್ಳಬೇಕೆಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ. ಈಗಾಗಲೇ ಅನೇಕ ಅಪಾರ್ಟ್​ವೆುಂಟ್​ಗಳಲ್ಲಿ ಎಸ್​ಟಿಪಿ ಅಳವಡಿಸಲಾಗಿದೆಯಾದರೂ ಪೂರ್ಣ ಬಳಕೆಯಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಜತೆಗೂಡಿ ಪರಿಶೀಲನೆ ನಡೆಸಲು ಜಲಮಂಡಳಿ ತಿಳಿಸಿದೆ.

ದೆಹಲಿಯಲ್ಲಿ ಎಸ್​ಟಿಪಿಗಳ ಕುರಿತಾಗಿ ನಿಯಮವಿದೆ ಎಂಬ ಮಾಹಿತಿಯಿದ್ದು, ಅದರ ಬಗ್ಗೆ ವಿಷಯ ಕಲೆಹಾಕಲಾಗುತ್ತಿದೆ. ಅಲ್ಲಿ ನಿಯಮವಿರುವುದು ಸ್ಪಷ್ಟವಾದಲ್ಲಿ ಅಲ್ಲಿನ ಸರ್ಕಾರಕ್ಕೆ ಪತ್ರ ಬರೆದು ಮಾಹಿತಿ ಪಡೆಯಲಾಗುವುದು. ಬೆಂಗಳೂರಿಗೆ ಅದು ಸೂಕ್ತವಾದಲ್ಲಿ ಸಂಬಂಧಪಟ್ಟ ಇಲಾಖೆಗಳೊಂದಿಗೆ ರ್ಚಚಿಸಿ ತೀರ್ವನಿಸಲಾಗುವುದು.
| ಕೆಂಪರಾಮಯ್ಯ ಜಲಮಂಡಳಿ ಪ್ರಧಾನ ಅಭಿಯಂತರ