ಕಂಬಾರರ ಸಾಹಿತ್ಯ ನವನವೋನ್ಮೇಷಶಾಲಿನಿ

ಧಾರವಾಡ (ಅಂಬಿಕಾತನಯದತ್ತ ಪ್ರಧಾನ ವೇದಿಕೆ): 84ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿರುವ ಡಾ. ಚಂದ್ರಶೇಖರ ಕಂಬಾರ ಅವರ ಸಾಹಿತ್ಯ, ಕೃತಿಗಳು, ನಾಟಕಗಳು, ಆಡಳಿತ ವೈಖರಿ, ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಸಲ್ಲಿಸುತ್ತಿರುವ ಸೇವೆಯನ್ನು ತೆರೆದಿಡುವಲ್ಲಿ ಸಮ್ಮೇಳನದ ಗೋಷ್ಠಿ ಯಶಸ್ವಿಯಾಯಿತು.

ಕೃಷಿ ವಿವಿ ಮೈದಾನದ ಅಂಬಿಕಾತನಢದತ್ತ ಪ್ರಧಾನ ವೇದಿಕೆಯಲ್ಲಿ ಶನಿವಾರ ಜರುಗಿದ ದ್ವಿತೀಯ ಗೋಷ್ಠಿಯಲ್ಲಿ ಹಿರಿಯ ವಿಮರ್ಶಕ ಡಾ. ಸಿ.ಎನ್. ರಾಮಚಂದ್ರನ್ ಅವರು, ಕಂಬಾರರ ಸಮಗ್ರ ಸಾಹಿತ್ಯ ಕೃಷಿಯ ಮೇಲೆ ಬೆಳಕು ಚೆಲ್ಲಿದರು.

ಕಂಬಾರರ ಸಾಹಿತ್ಯ ಕೃಷಿ ಹೇಳತೇನ ಕೇಳ: ಕಂಬಾರರೆಂದರೆ ವಿಸ್ಮಯ. ಅವರದು ಅರ್ಥೈಸಲಾಗದ ಕಾರ್ಯ, ಕಾರಣ ತರ್ಕದಿಂದ ವಿವರಿಸಲಾಗದ ವಿಸ್ಮಯ. ಇದಕ್ಕೆ ಕಾರಣಗಳು ಅನೇಕ… ಎಂದು ಮಾತು ಆರಂಭಿಸಿದ ಡಾ. ರಾಮಚಂದ್ರನ್, ಕಂಬಾರರನ್ನು ಕವಿ ಎನ್ನಬೇಕೆ? ನಾಟಕಕಾರ, ವಿಮರ್ಶಕ ಅಥವಾ ಆಡಳಿತಗಾರ,- ಶಾಸಕ ಎನ್ನಬೇಕೆ? ಪ್ರತಿಯೊಂದು ಪದವೂ ಸತ್ಯ. ಅವರ 8 ಕಾವ್ಯ ಸಂಕಲನಗಳು, 30 ನಾಟಕಗಳು, 6 ಕಥೆ- ಕಾದಂಬರಿಗಳು, 14 ವೈಚಾರಿಕ- ಸಂಶೋಧನಾತ್ಮಕ ಕೃತಿಗಳು ಅವರ ಸಾಹಿತ್ಯ ಕೃಷಿಗೆ ಸಾಕ್ಷಿ. 1958ರಿಂದ ಆರಂಭವಾದ ಅವರ ವಾšಯ ಸೃಷ್ಟಿ, 6 ದಶಕಗಳಾದರೂ ಅದೇ ಸದ್ಯೋಜಾತ ಪ್ರತಿಭೆ ಉಳಿಸಿಕೊಂಡಿದೆ ಎಂದರು.

ಕಂಬಾರರ ಕಾವ್ಯ: ನವ್ಯ ಕವಿಗಳ ಪ್ರತಿಮಾಬದ್ಧತೆ, ನಾಟ್ಯೀಕರಣಗಳನ್ನು ತ್ಯಜಿಸಿ, ಮೌಖಿಕ ಪರಂಪರೆಯ ಗೇಯತೆ, ಕಥನ ಇತ್ಯಾದಿಗಳು ದುಡಿಸಿಕೊಂಡರು.

ನಾಟಕ: ಅಸಂಗತ ನಾಟಕಗಳಿಂದ ಆರಂಭವಾದ ಕಂಬಾರರ ನಾಟಕ ರಚನೆ, ಊಳಿಗಮಾನ್ಯ ವ್ಯವಸ್ಥೆ ಹಾಗೂ ಕಲುಷಿತ ರಾಜಕೀಯದ ಮೇಲೆ ಬೆಳಕು ಚೆಲ್ಲಿದ್ದಾರೆ. 1999ರಲ್ಲಿ ಪ್ರಕಟವಾದ ಮಹಾಮಾಯಿಯಿಚಿದ ವಿಧಿ ಹಾಗೂ ಶಿವರಾತ್ರಿ, ಶರಣ ಚಳವಳಿಯ ಅಲಕ್ಷಿತ ಸಮುದಾಯದ ದೃಷ್ಟಿಕೋನದಿಂದ ವ್ಯಾಖ್ಯಾನಿಸಿದ್ದಾರೆ.

ಕಂಬಾರರ ಸಾಹಿತ್ಯದಲ್ಲಿ ಲೈಂಗಿಕತೆಯ ಅಂಶ ಅವರ ಗೀಳಾಗಿದೆ ಎಂದು ವಿಮರ್ಶಕರು ವ್ಯಾಖ್ಯಾನಿಸಿದ್ದಾರೆ. ಆದರೆ, ಅವರು ಲೈಂಗಿಕತೆಯ ವಿಜೃಂಬನೆಯನ್ನು ವಿಶೇಷ ಉದ್ದೇಶ ಸಾರಲು ಹಾಗೂ ಸೃಜನಶೀಲತೆಯೊಂದಿಗೆ ಸಮೀಕರಿಸಿದ್ದು ವಿಶೇಷ. ಉದಾಹರಣೆಗೆ ಅವರ ಕಾಡುಕುದುರೆ ಎಂದು ರಾಮಚಂದ್ರನ್ ವಿವರಿಸಿದರು.

ಸರ್ವಾಧ್ಯಕ್ಷ ಡಾ. ಚಂದ್ರಶೇಖರ ಕಂಬಾರ ವೇದಿಕೆಯಲ್ಲಿದ್ದರು. ನಾಗಾನಂದ ಕೆಂಪರಾಜ ನಿರೂಪಿಸಿದರು. ಡಾ. ಎಸ್.ಪಿ. ಗೌಡರ ಸ್ವಾಗತಿಸಿದರು. ಸಿದ್ದಪ್ಪ ಎಸ್. ಹೊಟ್ಟಿ ನಿರ್ವಹಿಸಿದರು.