More

  ಓದುಗರನ್ನು ಹಿಡಿದಿಟ್ಟುಕೊಳ್ಳಲು ಶಬ್ದಗಳು ಮುಖ್ಯ

  ಹೊನ್ನಾವರ: ಶಬ್ದಗಳ ಮೂಲಕ ಓದುಗರನ್ನು ಹಿಡಿದಿಟ್ಟುಕೊಳ್ಳುವಿಕೆ ಸಾಹಿತಿಗಳಿಂದ ಮಾತ್ರ ಸಾಧ್ಯ. ನಾರಾಯಣ ಯಾಜಿ ‘ನೈದಿಲೆಯ ಒಡಲು’ ಕಥಾ ಸಂಕಲನದ ಮೂಲಕ ಇದರಲ್ಲಿ ಯಶ್ವಸಿಯಾಗಿದ್ದಾರೆ ಎಂದು ಸಾಹಿತಿ ಡಾ. ಶ್ರೀಧರ ಬಳಗಾರ ಅಭಿಪ್ರಾಯಪಟ್ಟರು.

  ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ಶನಿವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ, ಪತ್ರಿಕಾ ವೇದಿಕೆ ಸಹಯೋಗದಲ್ಲಿ ಸಾಹಿತಿ ನಾರಾಯಣ ಯಾಜಿ ಅವರ ‘ನೈದಿಲೆಯ ಒಡಲು’ ಕಥಾ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು.

  ಕೃತಿ ಪರಿಚಯ ನೆರವೇರಿಸಿದ ಪತ್ರಕರ್ತ ಕೃಷ್ಣಮೂರ್ತಿ ಹೆಬ್ಬಾರ ಮಾತನಾಡಿ, ಸಮಾಜದಲ್ಲಿ ಒಳಿತು ಕೆಡುಕನ್ನು ಬೆಳಕಿಗೆ ತರುವ ನೈದಿಲೆಯ ಒಡಲು ಪುಸ್ತಕ 112 ಪುಟಗಳನ್ನು ಒಳಗೊಂಡಿದ್ದು, 9 ಕಥೆಗಳಿಂದ ಕೂಡಿದೆ ಎಂದು ಕೃತಿಯ ಬಗ್ಗೆ ವಿವರಿಸಿದರು.

  ಕೃತಿಕಾರ ನಾರಾಯಣ ಯಾಜಿ ಮಾತನಾಡಿ, ನನ್ನಲ್ಲಿ ಸಾಹಿತ್ಯದ ಆಸಕ್ತಿ ಮೂಡಲು ಹಲವು ಕಾರಣಗಳಿವೆ. ವಿಶೇಷವಾಗಿ ನನ್ನ ಕುಟುಂಬದ ಸಹಕಾರ ಬಹಳಿಷ್ಟಿದೆ. ಹಲವು ಏಳು-ಬೀಳುಗಳ ಮಧ್ಯೆ ಹೊರ ಬಂದ ಈ ಕೃತಿ ನಿಮ್ಮ ಮುಂದೆ ಇಡುತ್ತಿದ್ದು ಅದನ್ನು ನೀವು ಒಪ್ಪಿಕೊಳ್ಳುತ್ತಿರಿ ಎನ್ನುವ ಆಶಾಭಾವನೆ ನನ್ನದು ಎಂದರು.

  ಹಿರಿಯ ಜಾನಪದ ವಿದ್ವಾಂಸ ಡಾ. ಎನ್.ಆರ್. ನಾಯಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬರಹಗಾರ ಸಚ್ಚಿದಾನಂದ ಹೆಗಡೆ ಉಪಸ್ಥಿತರಿದ್ದರು. ಗೌರವ ಕಾರ್ಯದರ್ಶಿ ಭವಾನಿಶಂಕರ ಸ್ವಾಗತಿಸಿದರು. ಶಂಕರ ಗೌಡ ವಂದಿಸಿದರು. ಪ್ರಶಾಂತ ಮೂಡಲಮನೆ ನಿರ್ವಹಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts