ಒಳ್ಳೆಯ ನಿರ್ಧಾರ ಸಾಧ್ಯತೆ

ಕಲಬುರಗಿ: ವಿಶ್ವಾಸಮತ ಯಾಚನೆಗೆ ಸಂಬಂಧಿಸಿದಂತೆ ವಿಧಾನಸಭೆ ಸ್ಪೀಕರ್ ರಮೇಶಕುಮಾರ್ ಒಳ್ಳೆಯ ನಿಧರ್ಾರ ಪ್ರಕಟಿಸುವ ವಿಶ್ವಾಸವಿದೆ ಎಂದು ಸಂಸದ ಡಾ.ಉಮೇಶ ಜಾಧವ್ ಹೇಳಿದರು.
ಅಧಿವೇಶನದಲ್ಲಿ ವಿಶ್ವಾಸಮತ ಯಾಚನೆ ಕುರಿತು ಚರ್ಚೆ ನಡೆದಿದೆ. ಏನೇ ಆದರೂ, ಅಲ್ಪಮತಕ್ಕೆ ಕುಸಿದಿರುವ ಸಮ್ಮಿಶ್ರ ಸರ್ಕಾರ ಇರೋದಿಲ್ಲ. ಮುಂದೆ ಯಾವ ಪಕ್ಷ ಸರ್ಕಾರ ರಚನೆ ಮಾಡುತ್ತೆ ಗೊತ್ತಿಲ್ಲ ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೂವರು ಸಚಿವರು ರಾಜೀನಾಮೆ ನೀಡಿದ್ದು, ಈ ಸರ್ಕಾರದಿಂದ ಕೆಲಸ ಆಗ್ತಿಲ್ಲ ಅಂತ ದೂರಿ ಅನೇಕರು ಹೊರಬರುತ್ತಿದ್ದಾರೆ. ಕುಮಾರಸ್ವಾಮಿ ತಕ್ಷಣ ವಿಶ್ವಾಸಮತ ಯಾಚನೆ ಮಾಡಬೇಕು ಎಂದು ಒತ್ತಾಯಿಸಿದ ಅವರು, ಸ್ಪೀಕರ್ ನಡೆ ತೃಪ್ತಿ ತಂದಿಲ್ಲ. ಆದರೆ ಒಳ್ಳೆಯ ಸ್ಪೀಕರ್ ಆಗಿ ನಿರ್ಣಯ ಕೊಡುತ್ತಾರೆಂಬ ವಿಶ್ವಾಸವಿದೆ ಎಂದರು.
ನಾನು ಕೂಡ 50 ಕೋಟಿ ಹಣಕ್ಕೆ ಮಾರಾಟ ಆಗಿದ್ದೇನೆ ಎಂದು ಸುದ್ದಿ ಹಬ್ಬಿಸಿದ್ದರು. ಆದರೆ ಜನ ತುಂಬ ಜಾಣರು ಎಂಬುದಕ್ಕೆ ನನ್ನನ್ನು ಒಂದು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿದ್ದೇ ಸಾಕ್ಷಿ. ಮುಂಬಯಿಗೆ ಹೋದವರಾರೂ ಹಣಕ್ಕಾಗಿ ಹೋಗಿಲ್ಲ. ಅವರೆಲ್ಲರೂ ಹಣವಂತರು. ಎಂಟಿಬಿ ನಾಗರಾಜ್ಗೆ ಏನು ಕಡಿಮೆ ಆಗಿದೆ ಎಂದು ಹೋಗಿದ್ದಾರೆ? ಜೆಡಿಎಸ್-ಕಾಂಗ್ರೆಸ್ನವರು ಇಲ್ಲಸಲ್ಲದ ಸುದ್ದಿ ಹಬ್ಬಿಸುವ ಮೂಲಕ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಟೀಕಿಸಿದರು.
ಮುಂಬಯಿನಲ್ಲಿರುವ ಶಾಸಕರನ್ನು ಭೇಟಿಯಾಗಿ ಚರ್ಚಿಸಿದ್ದು, ನಿಮಗೆ ನ್ಯಾಯ ಸಿಗುತ್ತೆ ಎಂದು ಹೇಳಿದ್ದೇನೆ. ನನಗೆ ಬೇರೆ ಬೇರೆ ಕಾರಣಗಳಿದ್ದವು. ಹೀಗಾಗಿ ರಾಜೀನಾಮೆ ನೀಡಿ ಪಾರ್ಲಿಮೆಂಟ್ ಚುನಾವಣೆಗೆ ಸ್ಪರ್ಧಿಸಿದೆ ಎಂದು ಸಂಸದರು ಸಮರ್ಥಿಸಿಕೊಂಡರು. 

Leave a Reply

Your email address will not be published. Required fields are marked *