ಚಿತ್ರದುರ್ಗ: ಎಸ್ಸಿ ಸಮುದಾಯಗಳಲ್ಲಿನ ಅಸ್ಪಶ್ಯರಿಗೆ ಒಳಮೀಸಲಾತಿ ನೀಡುವ ಅಧಿಕಾರ ಆಯಾ ರಾಜ್ಯ ಸರ್ಕಾರಕ್ಕಿದೆ ಎಂದು ಸುಪ್ರೀಂ ಕೋರ್ಟ್ ನೀಡಿದ ಐತಿಹಾಸಿಕ ತೀರ್ಪನ್ನು ಸ್ವಾಗತಿಸಿ ಮಾದಿಗ ಮಹಾಸಭಾದ ಕಾರ್ಯಕರ್ತರು ಚಿತ್ರದುರ್ಗದಲ್ಲಿ ಶುಕ್ರವಾರ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಸಂಭ್ರಮಿಸಿದರು.
ಮಹಾಸಭಾ ಅಧ್ಯಕ್ಷ ಹನುಮಂತಪ್ಪ ದುರ್ಗ, ದೇವರಾಜ್ ನಗರಂಗೆರೆ, ಜಿಪಂ ಮಾಜಿ ಸದಸ್ಯ ಎಂ.ಲಕ್ಷ್ಮಣ್, ವಕೀಲರಾದ ಆರ್.ನಿಂಗಪ್ಪ, ಸುರೇಶ್ ಭಂಜಿಗೆರೆ, ಪಪಂ ಮಾಜಿ ಅಧ್ಯಕ್ಷ ನಾಕಿಕೆರೆ ಹನುಮಂತಪ್ಪ, ಸೋಮಣ್ಣ, ವೆಂಕಟೇಶ್, ನಾಗೇಂದ್ರಪ್ಪ, ಹೆಗ್ಗೆರೆ ಶಂಕರ್ ಇತರರಿದ್ದರು.