ಒಳಚರಂಡಿ ಕಾಮಗಾರಿಗೆ ಜನರ ವಿರೋಧ

ಕುಮಟಾ: ತಾಲೂಕಿನ ಬಗ್ಗೋಣದ ಮೂವತ್ತುಗುಂಡಿ ಬಳಿ ಒಳಚರಂಡಿ ಯೋಜನೆಯ ಶುದ್ಧೀಕರಣ ಘಟಕ ನಿರ್ವಣಕ್ಕೆ ಸ್ಥಳೀಯರು ಭಾನುವಾರ ವಿರೋಧ ವ್ಯಕ್ತಪಡಿಸಿದರು.

ಮೂವತ್ತುಗುಂಡಿ ಬಳಿಯ ಜಟಗ ಮಂದಿರದ ಆವಾರದಲ್ಲಿ ಎಲ್ಲ ಸಮಾಜದವರು ಜಮಾಯಿಸಿ ಸರ್ಕಾರದ ವಿರುದ್ಧ ಘೊಷಣೆ ಕೂಗಿದರು. ಕಾಮಗಾರಿ ನಡೆಸಲು ಮುಂದಾದರೆ ಜಿಲ್ಲೆಯ ಪರಿಶಿಷ್ಟ ಸಮಾಜ, ಸಂಘಟನೆಗಳ ನೇತೃತ್ವದಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಮಾತನಾಡಿ, ಒಳಚರಂಡಿ ಘಟಕವನ್ನು ಮೂವತ್ತುಗುಂಡಿಯಲ್ಲಿ ನಿರ್ವಿುಸಬಾರದು ಎಂದು ಸುತ್ತಲಿನ ಸಾರ್ವಜನಿಕರು ಹೋರಾಟ ನಡೆಸುತ್ತ ಬಂದಿದ್ದಾರೆ. ಹಿಂದುಳಿದ ವರ್ಗದವರೇ ಹೆಚ್ಚಾಗಿ ವಾಸವಿರುವ ಸ್ಥಳದಲ್ಲಿ ಘಟಕ ನಿರ್ವಿುಸುವುದನ್ನು ಕರವೇ ತೀವ್ರವಾಗಿ ಖಂಡಿಸುತ್ತದೆ. ಸುತ್ತಮುತ್ತ 2 ಸಾವಿರ ಮನೆಗಳಿವೆ. ಘಟಕ ನಿರ್ವಿುಸಿದರೆ ನಿವಾಸಿಗಳು ಇನ್ನೆಲ್ಲಿ ಬದುಕು ಕಟ್ಟಿಕೊಳ್ಳಬೇಕೆಂಬ ಗಂಭೀರ ಸ್ಥಿತಿ ನಿರ್ವಣವಾಗುತ್ತಿದೆ ಎಂದರು. ಬಗ್ಗೋಣ ಗಣೇಶ ಭಟ್ಟ ಮಾತನಾಡಿ, ಶುದ್ಧೀಕರಣ ಘಟಕ ಸ್ಥಾಪಿಸಲಿರುವ ಜಾಗದಲ್ಲಿ ದೇವಾಲಯವಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪರಿಶಿಷ್ಟ ಸಮಾಜದವರಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಾಲೂಕಿಗೆ ಆಗಮಿಸಿದ ಸಂದರ್ಭದಲ್ಲಿ ಮನವಿ ಸಲ್ಲಿಸಿದ್ದು, ಘಟಕವನ್ನು ಸ್ಥಳಾಂತರಿಸುವ ಭರವಸೆ ನೀಡಿದ್ದಾರೆ ಎಂದರು. ಪುರಸಭೆ ಮಾಜಿ ಉಪಾಧ್ಯಕ್ಷೆ ಗಂಗು ಮುಕ್ರಿ ಮಾತನಾಡಿ, ಘಟಕ ಸ್ಥಾಪನೆಯಿಂದ ಇಲ್ಲಿಯ ಪರಿಸರ ಕಲುಷಿತವಾಗಲಿದೆ. ಜನರು ರೋಗಕ್ಕೆ ತುತ್ತಾಗಲಿದ್ದಾರೆ. ನಿವಾಸಿಗಳೆಲ್ಲ ಊರು ಬಿಡಬೇಕಾಗುತ್ತದೆ ಎಂದು ಆರೋಪಿಸಿದರು.

Leave a Reply

Your email address will not be published. Required fields are marked *