Friday, 16th November 2018  

Vijayavani

ಕೋರ್​​ ಕಮಿಟಿ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಫೈಟ್- ಶೋಭಾಗೆ ಸ್ಥಾನ ನೀಡಲು ಹೆಗಡೆ ಜತೆ ಬಿಎಸ್​ವೈ ಪೈಪೋಟಿ        ಮೈಸೂರು ಪಾಲಿಕೆ ಮೇಯರ್​, ಉಪ ಮೇಯರ್​ ಸ್ಥಾನಕ್ಕಿಂದು ಚುನಾವಣೆ: ಮೇಯರ್​ ಗಾದಿಗಾಗಿ ದೋಸ್ತಿಗಳ ಫೈಟ್​        ಅಯ್ಯಪ್ಪನ ದರ್ಶನಕ್ಕಾಗಿ ಕೇರಳದ ಕೊಚ್ಚಿಗೆ ಬಂದಿಳಿದ ಹೋರಾಟಗಾರ್ತಿ ತೃಪ್ತಿ ದೇಸಾಯಿಗೆ ಪ್ರತಿಭಟನೆ ಬಿಸಿ        ಗಜ ಚಂಡಮಾರುತ ಅಬ್ಬರ: ತಮಿಳುನಾಡಿನ ಕರಾವಳಿವಳಿಯಲ್ಲಿ ಜನ ತತ್ತರ, ರಾಜ್ಯದ ದಕ್ಷಿಣ ಒಳನಾಡಿನಲ್ಲೂ ಮಳೆ ಸಾಧ್ಯತೆ        ಕಬ್ಬಿಗೆ ಸಮರ್ಪಕ ಬೆಲೆ ನೀಡುವಂತೆ ಆಗ್ರಹಿಸಿ ಮುಧೋಳದಲ್ಲಿ ರೈತರ ಬೃಹತ್​ ಹೋರಾಟ       
Breaking News

ಒಗ್ಗಟ್ಟಿರಲಿ, ಒಡಕಿನ ಮಾತು ಬೇಡ

Tuesday, 24.10.2017, 3:04 AM       No Comments

| ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು, ಕಾಶಿ ಜಗದ್ಗುರುಗಳು

‘ಲಿಂಗಾಯತ ಸ್ವತಂತ್ರ ಧರ್ಮವಾಗಬೇಕು, ಲಿಂಗಾಯತರು ಹಿಂದುಗಳಲ್ಲ’ ಎಂಬ ವಾದಗಳನ್ನು ಆಲಿಸಿ ಜ್ಞಾನವೃದ್ಧರೂ ತಪೋವೃದ್ಧರೂ ಆದ ಪೇಜಾವರ ಸ್ವಾಮೀಜಿ ಅವರು ಇತ್ತೀಚೆಗೆ ಸಹೃದಯ ಭಾವದಿಂದ ಕೆಲ ಸಲಹೆಯನ್ನು ಮನವಿರೂಪದಲ್ಲಿ ನೀಡಿದ್ದಾರೆ. ‘ಸಮಾಜದಲ್ಲಿ ಸಂಘಟನೆಗೆ ಒತ್ತು ನೀಡಬೇಕು, ಅಂದಾಗ ಸರ್ಕಾರಿ ಆಡಳಿತದಲ್ಲಿ ಕಾರ್ಯ ಸಿದ್ಧಿಸಲು ಸಾಧ್ಯ’ ಎಂದು ವಿವರಿಸಿದ್ದಾರೆ. ಜೊತೆಗೆ ಧಾರ್ವಿುಕವಾಗಿಯೂ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅದೇನೆಂದರೆ ಶಿವನ ಉಪಾಸಕರೆಲ್ಲ ಹಿಂದುಗಳಾಗಿದ್ದು; ಅದರಂತೆ ಲಿಂಗಾಯತರು ಸಹ ಶಿವೋಪಾಸಕರಾದ್ದರಿಂದ ಅವರೂ ಸಹ ಹಿಂದುಗಳೇ ಎಂದು ಸಂಘಟನಾ ದೃಷ್ಟಿಯಿಂದ ಹೇಳಿದ್ದು ಅರ್ಥಪೂರ್ಣವಾಗಿದ್ದು, ಪಂಚಪೀಠಗಳ ಪರವಾಗಿ ನಾನು ಇದನ್ನು ಸ್ವಾಗತಿಸುತ್ತೇನೆ. ಆದರೆ, ಅವರ ಸಲಹೆಯನ್ನು ಸೂಕ್ತವಾಗಿ ಅರ್ಥೈಸಿಕೊಳ್ಳದೆ ವಾದಕ್ಕೆ ಆಹ್ವಾನಿಸುವುದು ಸೂಕ್ತವಲ್ಲ. ನಾವು ಹಿಂದುಗಳಲ್ಲ ಎಂದು ಹೇಳುವ ಲಿಂಗಾಯತರು ಮೊದಲು ಹಿಂದು ಅಲ್ಲ ಎಂಬ ಬಗ್ಗೆ ಸೂಕ್ತ ದಾಖಲಾತಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿ ನಂತರ ಮಾತನಾಡಿದರೆ ಅದಕ್ಕೆ ಅರ್ಥ ಬರಬಹುದು.

ಇನ್ನು ವೀರಶೈವ ಲಿಂಗಾಯತ ಧರ್ಮದ ಸರ್ವ ಅನುಯಾಯಿಗಳು ಇಷ್ಟಲಿಂಗ ಪೂಜಕರೇ ಇದರಲ್ಲಿ ಎರಡು ಮಾತಿಲ್ಲ. ಆದರೆ ಇದರ ಜೊತೆಗೆ ಪ್ರತಿಯೊಬ್ಬರೂ ಒಂದಲ್ಲ ಒಂದು ದೇವರನ್ನು ತಮ್ಮ ಮನೆದೇವರನ್ನಾಗಿ ಪೂಜಿಸುವವರಿದ್ದಾರೆ. ಹಬ್ಬ-ಹರಿದಿನಗಳಲ್ಲಿ ಜಾತ್ರೆಗಳಲ್ಲಿ ಮನೆದೇವರಿಗೆ ಹೋಗಿ ಅಭಿಷೇಕಾದಿಗಳನ್ನು ಮಾಡಿಸಿಕೊಂಡು ಬರುತ್ತಾರೆ. ನಮ್ಮ ದೇಶ ತೀರ್ಥಕ್ಷೇತ್ರಗಳ ತವರು. ಆದ್ದರಿಂದ ಪ್ರತಿಯೊಬ್ಬರೂ ತೀರ್ಥಯಾತ್ರೆಯನ್ನು ಮಾಡುತ್ತಲೇ ಬಂದಿದ್ದಾರೆ. ಕಾಶಿಗೆ ದಿನಾಲು ಲಕ್ಷಾಂತರ ಜನರು ಬರುವುದನ್ನು ನಾವೇ ನೊಡುತ್ತಿದ್ದೇವೆ. ಅದರಲ್ಲಿ ಲಿಂಗಾಯತರು ಹೊರತಲ್ಲ.

ಹನ್ನೆರಡನೇ ಶತಮಾನದ ಶರಣರಲ್ಲಿ ಬಸವಣ್ಣನವರು ಕೂಡಲಸಂಗಮಕ್ಕೆ, ಅಕ್ಕಮಹಾದೇವಿ ಶ್ರೀಶೈಲಕ್ಕೆ ಚನ್ನಬಸವಣ್ಣನವರು ಉಳವಿಗೆ ಐಕ್ಯವಾಗಲು ಹೋದದ್ದೇಕೆ? ಅವರೇ ಕ್ಷೇತ್ರವನ್ನು ಅರಸಿ ಹೋಗಿರುವಾಗ ಉಳಿದವರ ಮಾತೇನು? ತೀರ್ಥಯಾತ್ರೆ ಆತ್ಮಶá-ದ್ಧಿಯ ಸುಲಭಮಾರ್ಗ. ವೀರಶೈವ ಲಿಂಗಾಯತರು ತೀರ್ಥಯಾತ್ರೆ ಮಾಡುವುದು ಪ್ರಾಚೀನ ಪದ್ಧತಿ. ತೀರ್ಥಕ್ಷೇತ್ರಗಳಲ್ಲಿ ಮಾಡುವ ಲಿಂಗಪೂಜೆ ಹೆಚ್ಚು ಫಲಕಾರಿ. ಲಿಂಗಪೂಜೆ ನಂತರ ಕ್ಷೇತ್ರನಾಥನ ದರ್ಶನ ಮಾಡುವಾಗ ತನ್ನ ಇಷ್ಟಲಿಂಗವನ್ನು ಎಡಗೈಯಿಂದ ಸ್ಪರ್ಶ ಮಾಡುತ್ತ ಬಲಗೈಯಿಂದ ಕ್ಷೇತ್ರನಾಥನನ್ನು ರ್ಸ³ಸಿ ದರ್ಶನ ಪಡೆಯಬೇಕು. ‘ಎಲ್ಲೆಲ್ಲೂ ನೀನೇ’ ಎಂಬ ಭಾವವಿರಬೇಕು. ‘ಎತ್ತ ನೋಡಿದಡತ್ತ ನೀನೇ ದೇವಾ’ ಎಂಬ ಬಸವಣ್ಣನವರ ಈ ವಚನಾಂಶ ಇಲ್ಲಿ ಸ್ಮರಣೀಯ.

ಇನ್ನು ವೀರಶೈವ ಲಿಂಗಾಯತ ಧರ್ಮದ ಮಕ್ಕಳ ಶಾಲಾ ದಾಖಲಾತಿಯಲ್ಲಿ ಹಿಂದು ಲಿಂಗಾಯತ ಮತ್ತು ಹಿಂದು ವೀರಶೈವ ಎಂದೇ ಇರುವುದರಿಂದ ವೀರಶೈವರೇ ಆಗಲಿ ಲಿಂಗಾಯತರೇ ಆಗಲಿ ನಾವು ಹಿಂದುಗಳಲ್ಲ ಎಂದು ಹೇಳುವದು ಅಸತ್ಯ ವಾದವೇ ಸರಿ.

ವೀರಶೈವ ಲಿಂಗಾಯತ ಧರ್ಮವು ಅನಾದಿ ಸಂಸಿದ್ಧವಾದ ಸನಾತನ ಧರ್ಮ. ಈ ಧರ್ಮದ ಉಗಮ ಮತ್ತು ಬೆಳವಣಿಗೆಯಲ್ಲಿ ಪಂಚಪೀಠಗಳ, ಬಸವಾದಿ ಶಿವಶರಣರ ಹಾಗೂ ನೂರೊಂದು ವಿರಕ್ತರ ಪಾತ್ರ ಬಹು ದೊಡ್ಡದು. ಲಿಂಗಾಯತ ಪದವು ವೀರಶೈವದ ಪರ್ಯಾಯ ವಾಚಕವಾಗಿ ಮೊದಲಿನಿಂದಲೂ ಬಳಕೆಯಾಗುತ್ತ ಬಂದಿದೆ. ಸಾವಿರಾರು ವರ್ಷಗಳ ಇತಿಹಾಸದಲ್ಲಿ ಗುರು ವಿರಕ್ತ ಪರಂಪರೆಯ ಯಾವ ಸ್ವಾಮೀಜಿಯೂ ಸಹ ವೀರಶೈವ ಮತ್ತು ಲಿಂಗಾಯತ ಬೇರೆ-ಬೇರೆ ಎಂಬ ವಾದ ಎಂದೂ ಮಾಡಲಿಲ್ಲ. ಧಾರ್ವಿುಕ ಹಾಗೂ ಸಾಮಾಜಿಕ ಮುಖಂಡರು ಅನೇಕ ಸಂಘಸಂಸ್ಥೆಗಳನ್ನು ಸ್ಥಾಪಿಸುವಾಗ ತಮ್ಮಿಚ್ಛೆಯಂತೆ ಕೆಲವರು ವೀರಶೈವ ಪದ, ಇನ್ನೂ ಕೆಲವರು ಲಿಂಗಾಯತ ಪದ ಬಳಸಿದರು. ಮತ್ತೆ ಕೆಲವರು ವೀರಶೈವ ಲಿಂಗಾಯತ ಎರಡೂ ಪದವನ್ನು ಬಳಸಿ ಸಂಸ್ಥೆಗೆ ನಾಮಕರಣ ಮಾಡಿದ್ದುಂಟು.

ಶ್ರೀಮದ್ವೀರಶೈವ ಶಿವಯೋಗ ಮಂದಿರ ಸಂಸ್ಥೆಯಲ್ಲಿ ಸುಮಾರು 2000 ಗುರು-ವಿರಕ್ತ ಪೀಠ ಮಠಾಧೀಶರು ಹಾಗೂ 2 ಲಕ್ಷಕ್ಕೂ ಹೆಚ್ಚು ಜನಸಮುದಾಯ ಸಮಾವೇಶಗೊಂಡು ವೀರಶೈವ ಲಿಂಗಾಯತ ಒಂದೇ ಎಂಬ ನಿರ್ಣಯವನ್ನು ಘೊಷಿಸಿವೆ. ಅಲ್ಲದೆ ಶತಾಯುಷಿಗಳಾದ ಸಿದ್ಧಗಂಗಾ ಮಠದ ಪರಮ ತಪಸ್ವಿಗಳಾದ ಶಿವಕುಮಾರ ಸ್ವಾಮೀಜಿ ಅವರು ಅಖಿಲ ಭಾರತ ವೀರಶೈವ ಮಹಾಸಭಾದ ಎಲ್ಲ ಪದಾಧಿಕಾರಿಗಳಿಗೆ ‘ವೀರಶೈವ ಲಿಂಗಾಯತ ಒಂದೇ’ ಎಂಬ ತಮ್ಮ ನಿರ್ಣಯವನ್ನು ಲಿಖಿತವಾಗಿ ಕೊಟ್ಟ ವಿಷಯ ಜಗಜ್ಜಾಹೀರವಾದ ಮೇಲೂ ಸಹ ಲಿಂಗಾಯತ ವೀರಶೈವ ಪ್ರತ್ಯೇಕವೆಂದು ಹೇಳುವುದು ಹೇಗೆ ಉಚಿತವಾದೀತು?

ವೀರಶೈವ ಲಿಂಗಾಯತರು ಹೆಚ್ಚಾಗಿರುವ ಕರ್ನಾಟಕದಲ್ಲಿ ಇನ್ನು ಕೆಲವೇ ತಿಂಗಳುಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಸಂದರ್ಭದಲ್ಲಿ ಪ್ರತ್ಯೇಕ ಧರ್ಮದ ವಿಚಾರವನ್ನು ರಾಜಕೀಯ ವಿಷಯವನ್ನಾಗಿ ಬಳಸಿಕೊಳ್ಳುವ ಬದಲು; ವೀರಶೈವ ಲಿಂಗಾಯತರ ಒಳಿತಿಗಾಗಿ ಎಲ್ಲ ಭೇದಗಳನ್ನು ಬದಿಗೊತ್ತಿ ಗುರು ವಿರಕ್ತ ಪೀಠಾಚಾರ್ಯರು, ಶಿವಾಚಾರ್ಯರು, ನಿರಂಜನ ಮೂರ್ತಿಗಳು, ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಸಮಾಲೋಚನೆ ನಡೆಸಿ ನಿರ್ಣಯಕ್ಕೆ ಬರುವುದು ಸೂಕ್ತ.

Leave a Reply

Your email address will not be published. Required fields are marked *

Back To Top