ಒಗ್ಗಟ್ಟಿದ್ದರೆ ಗ್ರಾಮಾಭಿವೃದ್ಧಿ ಸುಲಭ

ತೂಬಗೆರೆ: ಗ್ರಾಮಗಳಿಗೆ ಅಗತ್ಯ ಶೌಚಗೃಹ, ಸಮುದಾಯ ಭವನ, ನೀರಿನ ವ್ಯವಸ್ಥೆ ಸೇರಿ ಇತರೆ ಮೂಲ ಸೌಕರ್ಯ ನೀಡುವ ಹಂತದಲ್ಲಿ ಸ್ಥಳೀಯ ಮುಖಂಡರು ಸಹಕಾರ ನೀಡಿದರೆ ತೂಬಗೆರೆ ಹೋಬಳಿ ಮತ್ತಷ್ಟು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.

ಹೋಬಳಿಯ ದೊಡ್ಡತಿಮ್ಮನಹಳ್ಳಿಯಲ್ಲಿ ಮಂಗಳವಾರ ಬಗರ್ ಹುಕುಂನಲ್ಲಿ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಮಾಡಿ ಮಾತನಾಡಿದರು.

ಹೋಬಳಿಯ ಪತ್ರಿ ಗ್ರಾಮದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಸಿಂಮೆಟ್ ರಸ್ತೆ ನಿರ್ವಿುಸಲಾಗಿದೆ. ಬೃಹತ್ ನೀರಾವರಿ ಯೋಜನೆಯಡಿ ಹೋಬಳಿಯಲ್ಲಿ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ವಣಕ್ಕೆ ಅನುದಾನ ಬಿಡುಗಡೆಗೊಂಡಿದೆ. ಈ ಪೈಕಿ ಕಂಚಿಗನಾಳ, ಊದನಹಳ್ಳಿ, ಎದ್ದಲಹಳ್ಳಿ, ಲಗುಮೇನಹಳ್ಳಿ, ಕಾವಲಹಳ್ಳಿ, ಗಂಟಿಗಾನಹಳ್ಳಿ, ಬೀಡಿಕೆರೆ, ಭೂಮೇನಹಳ್ಳಿ, ದೊಡ್ಡರಾಯಪ್ಪನಹಳ್ಳಿಗೆ ತಲಾ 20 ಲಕ್ಷ ರೂ. ಹಾಗೂ ಚನ್ನಾಪುರಕ್ಕೆ 30 ಲಕ್ಷ ರೂ. ಹಿರೇಮುದ್ದೇನಹಳ್ಳಿ 10 ಲಕ್ಷ ರೂ. ಹಂಚಿಕೆ ಮಾಡಲಾಗಿದೆ ಎಂದರು.

29 ಸಾಗುವಳಿದಾರರಿಗೆ ಹಕ್ಕು ಪತ್ರ ಮತ್ತು 94 ಸಿ ಅಕ್ರಮ ಸಕ್ರಮದಡಿ 100 ಮಂದಿಗೆ ಮನೆಗಳ ಹಕ್ಕು ಪತ್ರ ವಿತರಣೆ ಮಾಡಲಾಯಿತು.

ಜಿಪಂ ಸದಸ್ಯ ಎಚ್.ಅಪ್ಪಯ್ಯಣ್ಣ, ಜಿಪಂ ಮಾಜಿ ಸದಸ್ಯ ನರಸಿಂಹಯ್ಯ, ತಹಸೀಲ್ದಾರ್ ರಮೇಶ್, ತೂಬಗೆರೆ ಉಪತಹಸೀಲ್ದಾರ್ ನಾರಾಯಣಸ್ವಾಮಿ, ಬಿಡಿಸಿಸಿ ನಿರ್ದೇಶಕ ವೆಂಕಟೇಶ್ ಬಾಬು, ತೂಬಗೆರೆ ಹೋಬಳಿ ಜೆಡಿಎಸ್ ಅಧ್ಯಕ್ಷ ದೇವರಾಜ್, ಹಾಡೋನಹಳ್ಳಿ ಗ್ರಾಪಂ ಅಧ್ಯಕ್ಷ ನಾರಾಯಣಪ್ಪ, ಮಾಜಿ ಅಧ್ಯಕ್ಷ ಮುದ್ದುಕೃಷ್ಣಪ್ಪ, ತೂಬಗೆರೆ ಗ್ರಾಪಂ ಸದಸ್ಯರಾದ ಮಂಜುನಾಥ, ವೆಂಕಟೇಶ್, ಸುಬ್ರಮಣ್ಯ, ಶ್ರೀರಾಮ್ ಪಿಡಿಒ ವೆಂಕಟೇಶ್ ಇನಾಂದರ್ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *