ಒಂದೇ ಸೂರಿನಡಿ ಎಲ್ಲ ಸರ್ಕಾರಿ ಕಚೇರಿ

ಶ್ರೀನಿವಾಸಪುರ: ಅನುದಾನ ಬಿಡುಗಡೆಯಾಗಿರುವ ಕಚೇರಿಗಳ ಕಾಮಗಾರಿ ಪ್ರಾರಂಭಿಸಲು ಅವಕಾಶ ಕಲ್ಪಿಸಿಕೊಡುವಂತೆ ತಹಸೀಲ್ದಾರ್ ಬಿ.ಎಸ್.ರಾಜೀವ್​ಗೆ ಸ್ಪೀಕರ್ ಕೆ.ಆರ್.ರಮೇಶ್​ಕುಮಾರ್ ಸೂಚನೆ ನೀಡಿದರು.

ಅಮಾನಿಕೆರೆ ಅಂಗಳದಲ್ಲಿ 100 ಕೋಟಿ ರೂ. ವೆಚ್ಚದಲ್ಲಿ 40 ಎಕರೆ ವಿಸ್ತೀರ್ಣ ಪ್ರದೇಶಲ್ಲಿ ಮಿನಿವಿಧಾನಸೌಧ ಸೇರಿ ತಾಲೂಕಿನ ಎಲ್ಲ ಸರ್ಕಾರಿ ಕಚೇರಿ ಹಾಗೂ ಸಮುದಾಯ ಭವನಗಳನ್ನು ಒಂದೇ ಸೂರಿನಡಿಯಲ್ಲಿ ನಿರ್ವಿುಸಲು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ವಿಧಾನ ಪರಿಷತ್ ಮುಖ್ಯ ಸಚೇತಕ ಆರ್.ಚೌಡರೆಡ್ಡಿ ಅವರೊಂದಿಗೆ ಗುರುವಾರ ಭೂಮಿಪೂಜೆ ನೇರವೇರಿಸಿ ಮಾತನಾಡಿದರು.

ಕೋಲಾರದ ಉಪವಿಭಾಗಾಧಿಕಾರಿಗಳ ಬಳಿ ಕುಳಿತು ಇಲಾಖಾವಾರು ನಕ್ಷೆ ತಯಾರಿಸಿ ವಿಶಾಲವಾದ ರಸ್ತೆಗಳಿಗೆ ಜಾಗ ಗುರುತಿಸಿ ಆಯಾ ಇಲಾಖೆಗೆ ಸಂಬಂಧಪಟ್ಟ ಜಾಗಕ್ಕೆ ಹದ್ದುಬಸ್ತು ಗುರುತಿಸಲಾಗುವುದು ಎಂದರು.

ಎಲ್ಲ ಸಮುದಾಯ ಭವನ ನಿರ್ವಣಕ್ಕೂ ಜಾಗ ನೀಡುವಂತೆ ಸೂಚಿಸಿದಲ್ಲದೆ, ಬೈರಪಲ್ಲಿ ಗ್ರಾಮದ ಸರ್ವೆ ನಂಬರ್ 31 ಮತ್ತು ಕೊಳ್ಳೂರು ಗ್ರಾಮದ ಸರ್ವೆ ನಂಬರ್ 106ರ ಕೆರೆಯಂಗಳದಲ್ಲಿ ಸರ್ಕಾರ ಜಮೀನು ಮಂಜೂರು ಮಾಡಿರುವ ಕಾಮಗಾರಿಗಳ ವಿವರ ನೀಡಿದರು.

ವಿಧಾನ ಪರಿಷತ್ ವೈ.ಎ.ನಾರಾಯಣಸ್ವಾಮಿ ಮಾತನಾಡಿ. ಶ್ರೀನಿವಾಸಪುರವನ್ನು ಮಾದರಿ ನಗರ ಮಾಡುವ ಉದ್ದೇಶದಿಂದ ಎಲ್ಲ ಸರ್ಕಾರಿ ಕಚೇರಿಗಳನ್ನು ಒಂದೇ ಕಡೆ ನಿರ್ವಿುಸಲಾಗುತ್ತಿದೆ. ಅಧಿಕಾರಿಗಳಿಗೆ ಕೆಲಸ ಮಾಡಲು ಮೂಲಸೌಲಭ್ಯ ಒದಗಿಸಿಕೊಟ್ಟಲ್ಲಿ ಉತ್ತಮ ಆಡಳಿತ ನೀಡಲು ಸಾಧ್ಯವಾಗುತ್ತದೆ ಹಾಗೂ ಇಲಾಖೆಗಳು ಒಂದೆಡೆ ಇದ್ದರೆ ನಾಗರಿಕರಿಗೆ ಸಹಕಾರಿಯಾಗುತ್ತದೆ ಎಂದರು.

ಅಭಿವೃದ್ಧಿಗೆ ನನ್ನ ಸಹಮತ ಇದೆ. ಕ್ಷೇತ್ರ, ತಾಲೂಕು, ಪಟ್ಟಣದಲ್ಲಿ ಯಾವುದೇ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ತರುವುದು ಶೋಭೆಯಲ್ಲ. ಸ್ಪೀಕರ್ ರಮೇಶ್​ಕುಮಾರ್ ಕೈಗೊಂಡಿರುವ ಅಭಿವೃದ್ಧಿ ವಿಚಾರದಲ್ಲಿ ಪಕ್ಷಪಾತವಿಲ್ಲ.

| ತೂಪಲ್ಲಿ ಆರ್. ಚೌಡರೆಡ್ಡಿ, ಸರ್ಕಾರಿ ಮುಖ್ಯ ಸಚೇತಕ, ವಿಧಾನ ಪರಿಷತ್

Leave a Reply

Your email address will not be published. Required fields are marked *