ಐದು ಜರ್ಸಿ ಆಕಳು ಸಾವು

ಮುಂಡಗೋಡ: ತಾಲೂಕಿನ ಟಿಬೆಟಿಯನ್ ಕ್ಯಾಂಪ್ ನಂ.7ರ ಸ್ಮಶಾನದ ಹತ್ತಿರ ವಿದ್ಯುತ್ ತಂತಿ ರ್ಸ³ಸಿ 5 ಜರ್ಸಿ ಆಕಳುಗಳು ಮೃತಪಟ್ಟಿಟ್ಟ ಘಟನೆ ಭಾನುವಾರ ನಡೆದಿದೆ.

ಕರ್ವ ಯಂಗಡುಪ್, ಶೆಡುಪ್ ತೆಂಜಿನ್, ಸಾಮಚೊಯಿ ಲೊಬ್ಸಾಂಗ್, ಡುಪ್ತಿ ಸಮ್​ನ್ ಮತ್ತು ಸಿರಿಂಗ್ ನೊರ್ಬು ಎಂಬುವವರಿಗೆ ಆಕಳುಗಳು ಸೇರಿದ್ದು ಎಂದು ತಿಳಿದುಬಂದಿದೆ. ಗದ್ದೆಯಲ್ಲಿ ಮೇಯತ್ತಿದ್ದ ವೇಳೆ ವಿದ್ಯುತ್ ಕಂಬದ ಹತ್ತಿರ ತುಂಡಾಗಿ ಬಿದ್ದಿದ್ದ ತಂತಿ ರ್ಸ³ಸಿ ಆಕಳುಗಳು ಸಾವನ್ನಪ್ಪಿವೆ. 3.25 ಲಕ್ಷ ರೂ. ಹಾನಿಯಾಗಿದೆ ಎಂದು ಅಂದಾಜಿಸಲಾಗಿದ್ದು, ಜಾನುವಾರುಗಳ ಸಾವಿಗೆ ಹೆಸ್ಕಾಂನವರ ನಿರ್ಲಕ್ಷ್ಯವೇ ಕಾರಣ ಎಂದು ಆಕಳುಗಳ ಮಾಲೀಕರು ಆರೋಪಿಸಿ ಭಾನುವಾರ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮಾಹಿತಿ ತಿಳಿದು ಪೊಲೀಸ್ ಸಿಬ್ಬಂದಿ ವಿನಾಯಕ ಗೌಡಾ ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ವರದಿಯನ್ನು ಮೇಲಧಿಕಾರಿಗಳಿಗೆ ಕಳಿಸಿದ್ದಾರೆ ಎನ್ನಲಾಗಿದೆ.

ಹುಲಿ ಬಾಯಿಗೆ ಮತ್ತೊಂದು ಹಸು

ಶಿರಸಿ: ತಾಲೂಕಿನ ಮತ್ತಿಘಟ್ಟ ದೇವನಮನೆ ಭಾಗದಲ್ಲಿ ಭಾನುವಾರ ಹುಲಿಗೆ ಮತ್ತೊಂದು ಹಸು ಆಹಾರವಾಗಿದೆ.

ಇದುವರೆಗೂ ಈ ಭಾಗದಲ್ಲಿ ಒಟ್ಟು 7 ಹಸುಗಳು ಹುಲಿ ಬಾಯಿಗೆ ತುತ್ತಾಗಿವೆ. ‘ಇಲ್ಲಿರುವುದು ಹುಲಿಯಲ್ಲ, ಚಿರತೆ’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ಹುಲಿಯನ್ನು ಹಿಡಿದು ಬೇರೆಡೆ ಸಾಗಿಸಬೇಕು ಎಂದು ಆಗ್ರಹಿಸಿ ಈ ಭಾಗದ ಸಾರ್ವಜನಿಕರು ಡಿಎಫ್​ಒ ಕಚೇರಿ ಎದುರು ಮಂಗಳವಾರ ಪ್ರತಿಭಟಿಸಿ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.