ಐಐಎಸ್ಸಿಯಲ್ಲಿ ನಾಳೆ ಓಪನ್ ಡೇ

ಬೆಂಗಳೂರು: ವಿಜ್ಞಾನ ಕ್ಷೇತ್ರದಲ್ಲಿನ ಬೆಳವಣಿಗೆ ಬಗ್ಗೆ ಜನರಿಗೆ ತಿಳಿಸುವ ಉದ್ದೇಶದಿಂದ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಮಾ.23ರಂದು ಮುಕ್ತ ದಿನ (ಓಪನ್ ಡೇ) ಆಯೋಜಿಸಿದೆ.

ಆನ್​ಲೈನ್ ಬುಕ್ಕಿಂಗ್, ಪರಿಸರಸ್ನೇಹಿ ಮುಕ್ತದಿನ ಆಚರಣೆ ಹಾಗೂ ವೀಕ್ಷಕರ ಸಂಚಾರಕ್ಕೆ ಇ- ರಿಕ್ಷಾಗಳ ವ್ಯವಸ್ಥೆ ಮಾಡಿರುವುದು ಈ ಬಾರಿಯ ಓಪನ್ ಡೇ ವಿಶೇಷವಾಗಿದೆ ಎಂದು ಮುಕ್ತದಿನ ಸಮಿತಿ ಅಧ್ಯಕ್ಷ ವೈ. ನರಹರಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

23ರ ಬೆಳಗ್ಗೆ 9ರಿಂದ ಸಂಜೆ 5 ಗಂಟೆವರೆಗೂ ಮಲ್ಲೇಶ್ವರದಲ್ಲಿರುವ ಐಐಎಸ್ಸಿ ಆವರಣದಲ್ಲಿ ಮುಕ್ತ ದಿನ ಆಚರಣೆ ನಡೆಯಲಿದೆ. 40ಕ್ಕೂ ಹೆಚ್ಚಿನ ವಿಭಾಗಗಳ ವಿದ್ಯಾರ್ಥಿಗಳು ವಸ್ತುಪ್ರದರ್ಶನ, ಇತ್ತೀಚಿನ ಸಂಶೋಧನೆಗಳು ಹಾಗೂ ವಿವಿಧ ಪ್ರಾತ್ಯಕ್ಷಿಕೆ ಪ್ರದರ್ಶಿಸಲಿದ್ದಾರೆ. ವಿಚಾರಸಂಕಿರಣಗಳು, ಕಿಡ್ಸ್ ಕ್ವಿಜ್ ಮುಕ್ತ ದಿನದ ಪ್ರಮುಖ ಭಾಗಗಳಾಗಿವೆ. ಕಳೆದ ವರ್ಷ 35 ಸಾವಿರ ಜನರು ಭೇಟಿ ನೀಡಿದ್ದರು. ನಿಖರ ಮಾಹಿತಿಗಾಗಿ ಈ ಬಾರಿ ಆನ್​ಲೈನ್ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಈವರೆಗೆ 300 ಸಂಸ್ಥೆ ಗಳು ಹಾಗೂ 6 ಸಾವಿರಕ್ಕೂ ಹೆಚ್ಚಿನ

ಪ್ರತಿನಿಧಿಗಳು ನೋಂದಣಿ ಮಾಡಿಕೊಂಡಿ ದ್ದಾರೆ. ನೋಂದಣಿ ಉಚಿತವಾಗಿದ್ದು, ಐಐಎಸ್ಸಿ ವೆಬ್​ಸೈಟ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು ಎಂದು ತಿಳಿಸಿದರು.

ಐಐಎಸ್ಸಿಯಲ್ಲಿಯೇ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳು ಆರಂಭಿಸಿರುವ 15 ಸ್ಟಾರ್ಟ್​ಅಪ್ ಸಂಸ್ಥೆಗಳು ಕೂಡ ಪ್ರದರ್ಶನದಲ್ಲಿ ಭಾಗವಹಿಸಲಿವೆ. ಕಾರ್ಯಕ್ರಮಕ್ಕೆ ಆಗಮಿಸುವವರಿಗಾಗಿ ಮಲ್ಲೇಶ್ವರದ 18ನೇ ಅಡ್ಡರಸ್ತೆ ಮೈದಾನದಲ್ಲಿ ರ್ಪಾಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಆವರಣದೊಳಗೆ ಖಾಸಗಿ ವಾಹನಗಳನ್ನು ನಿಷೇಧಿಸಲಾಗಿದೆ. ಸಂಚಾರಕ್ಕಾಗಿ 15 ಇ- ರಿಕ್ಷಾಗಳ ವ್ಯವಸ್ಥೆ ಮಾಡಲಾಗಿದೆ. ಉಚಿತವಾಗಿ ಸಂಚರಿಸಬಹುದು ಎಂದು ನರಹರಿ ಹೇಳಿದರು.

One Reply to “ಐಐಎಸ್ಸಿಯಲ್ಲಿ ನಾಳೆ ಓಪನ್ ಡೇ”

  1. ಮಕ್ಕಳಿಗೆ ವಿಜ್ಞಾನ ಕ್ಷೇತ್ರದಲ್ಲಿನ ವಿಜ್ಞಾ ಮತ್ತು ಅದರ ಬೆಳವಳಿಗೆಯ ಬಗ್ಗೆ ಪೂರ್ಣ ಮಾಹಿತಿ ತಿಳಿಯಲು ಅವರಿಗೆ ಫ್ರೋತ್ಸಾಹಿಸಲು ಈ ರೀತಿಯ ಕಾರ್ಯಕ್ರಮಗಳು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ನಡೆಯಲಿ
    ಇದು ಹಳ್ಳಿಯ ಪ್ರತಿಭಾವಂತ ಮಕ್ಕಳವರೆಗೆ ತಲುಪುವ ಪ್ರಯತ್ನ ನಡೆದರೆ ಕಾರ್ಯಕ್ರಮ ಯಶಸ್ವಿಯಾಗುವುದು ಎಂಬುದು ನನ್ನ ವೈಯಕ್ತಿಕ ಅನಿಸಿಕೆ

Comments are closed.