ಐಐಎಫ್​ಎಲ್ ವೆಲ್ತ್ ಸೂಚ್ಯಂಕ ಪ್ರಕಟ

ಬೆಂಗಳೂರು: ಮುಂದಿನ 5 ವರ್ಷಗಳಲ್ಲಿ ಭಾರತದ ಸಂಪತ್ತು ಶೇ. 87 ಏರಿಕೆಯಾಗಲಿದೆ ಎಂದು ಐಐಎಫ್​ಎಲ್ ವೆಲ್ತ್ ಸೂಚ್ಯಂಕ 2018 ತಿಳಿಸಿದೆ.

ಕಳೆದ 5 ವರ್ಷಗಳಲ್ಲಿ ಭಾರತ ವಿಶ್ವದ ಬೇರೆಲ್ಲ ರಾಷ್ಟ್ರಗಳಿಗಿಂತ ಉತ್ತಮ ಬೆಳವಣಿಗೆ ಕಂಡಿದೆ. ಸಂಪನ್ಮೂಲ ಹೆಚ್ಚಳದಲ್ಲಿ ಶೇ. 40 ಏರಿಕೆಯಾಗಿದೆ. ಅದೇ ಆಧಾರದಲ್ಲಿ ಮುಂದಿನ 5 ವರ್ಷಗಳಲ್ಲಿ ಸಂಪತ್ತು ಶೇ.87

ಹೆಚ್ಚಳವಾಗುವ ನಿರೀಕ್ಷೆ ಹೊಂದಲಾಗಿದೆ ಎಂದು ಐಐಎಫ್​ಎಲ್ ವೆಲ್ತ್ ಮ್ಯಾನೇಜ್​ವೆುಂಟ್​ನ ವ್ಯವಸ್ಥಾಪಕ ಪಾಲುದಾರ ಶಾಜಿಕುಮಾರ್ ದೇವಕರ್ ತಿಳಿಸಿದ್ದಾರೆ.

ಕಳೆದ 5 ವರ್ಷಗಳಲ್ಲಿ ಭಾರತದ ಹೆಚ್ಚಿನ ವ್ಯಕ್ತಿಗಳ ನಿವ್ವಳ ಮೌಲ್ಯ (ಎಚ್​ಎನ್​ಡಬ್ಲ್ಯೂ) ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಆಮೂಲಕ ವಿಶ್ವದ ಇತರ ಆರ್ಥಿಕತೆಯಲ್ಲಿ ಪ್ರತಿಸ್ಪರ್ಧಿ ರಾಷ್ಟ್ರಗಳನ್ನು ಭಾರತ ಹಿಂದಿಕ್ಕಿದೆ.

ಜಾಗತಿಕ ಎಚ್​ಎನ್​ಡಬ್ಲ್ಯೂ ಶೇ. 3.2ರಿಂದ 4.2 ಇದೆ. ಕ್ವಾಂಟಮ್ ಲೀಪ್, ಹೂಡಿಕೆದಾರರ ಅನಿಸಿಕೆ, ಸಂಪತ್ತುಗಳ ಮೌಲ್ಯವನ್ನಾಧರಿಸಿ ಸೂಚ್ಯಂಕ ಸಿದ್ಧಪಡಿಸ ಲಾಗಿದೆ ಎಂದು ಹೇಳಿದ್ದಾರೆ. ಐಐಎಫ್​ಎಲ್​ನ ಅಧ್ಯಯನ, ಸೂಚ್ಯಂಕ ವರದಿ ವೀಕ್ಷಿಸಲು ಸಾರ್ವಜನಿಕರು www.iiflwealth.com/wealth-x-2018 ರಲ್ಲಿ ವೀಕ್ಷಿಸಬಹುದು ಮತ್ತು ಡೌನ್​ಲೋಡ್ ಮಾಡಬಹುದು ಎಂದು ಶಾಜಿಕುಮಾರ್ ದೇವಕರ್ ಹೇಳಿದ್ದಾರೆ.