ಏ.17ರಂದು ಕ್ರೀಡಾ ವಸತಿ ಶಾಲೆ,ನಿಲಯಗಳ ಪ್ರವೇಶಕ್ಕೆ ವಿಶೇಷ ಆಯ್ಕೆ ಶಿಬಿರ

blank

ಚಿತ್ರದುರ್ಗ: ಕ್ರೀಡಾ ಇಲಾಖೆಯ ಕ್ರೀಡಾ ವಸತಿ ಶಾಲೆ,ನಿಲಯಗಳ ಪ್ರವೇಶಕ್ಕಾಗಿ ಗ್ರಾಮೀಣ ಬಾಲಕ,ಬಾಲಕಿಯರಿಗೆ ಪ್ರಸಕ್ತ ಸಾಲಿನ ವಿಶೇಷ ಆ ಯ್ಕೆ ಶಿಬಿರವನ್ನು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಏ.17ರಂದು ಆಯೋಜಿಸಲು ಉದ್ದೇಶಿಸಲಾಗಿದೆ.
ಇಲಾಖೆ ರಾಜ್ಯಾದ್ಯಂತ 2 ಕ್ರೀಡಾ ವಸತಿ ಶಾಲೆ ಹಾಗೂ 32 ಕ್ರೀಡಾ ವಸತಿ ನಿಲಯಗಳನ್ನು ಹೊಂದಿದೆ. ವಸತಿ ಶಾಲೆ,ನಿಲಯಗಳಿಗೆ 5ನೇ ತರಗತಿ,8ನೇ ತರಗತಿ ಮತ್ತು ಪ್ರಥಮ ಪಿಯುಸಿ ಹಂತದ ಕ್ರೀಡಾಪಟುಗಳಿಗೆ ಪ್ರವೇಶಾವಕಾಶವಿದೆ. ಉಚಿತ ಊಟೋಪಹಾರ,ವಸತಿ,ವೈಜ್ಞಾನಿಕ ಕ್ರೀಡಾ ತರಬೇತಿ,ಕ್ರೀಡಾ ಸಲಕರಣೆಗಳು,ಕ್ರೀಡಾ ಸಮವಸ್ತ್ರ, ಕ್ರೀಡಾಕೂಟಗಳಲ್ಲಿ ಭಾಗವಹಿಸಲು ದಿನ,ಪ್ರಯಾಣ ಭತ್ಯೆ ಇತ್ಯಾದಿ ಒದಗಿಸಲಾಗುತ್ತಿದೆ.
ರಾಜ್ಯದ ಯಾವುದೇ ಭಾಗದ ಕ್ರೀಡಾಪಟುಗಳು ಯಾವುದೇ ಸ್ಥಳದ ಆಯ್ಕೆ ಶಿಬಿರದಲ್ಲಿ ಭಾಗವಹಿಸಲು ಮುಕ್ತ ಅವಕಾಶವಿದೆ. 2025-26ನೇ ಸಾಲಿನ ಪ್ರವೇಶಕ್ಕೆ ಈಗಾಗಲೇ ಆಯೋಜಿಸಿದ್ದ ಆಯ್ಕೆ ಶಿಬಿರಗಳಲ್ಲಿ ಭಾಗವಹಿಸದ ಅಭ್ಯರ್ಥಿಗಳು ಮತ್ತೆ ಇದರಲ್ಲಿ ಭಾಗವಹಿಸ ಬಹುದು.
ಈಗಾಗಲೇ ಆಯ್ಕೆ ಶಿಬಿರಗಳಲ್ಲಿ ಭಾಗಿ ಆದರೆ,ರಾಜ್ಯಮಟ್ಟದ ಆಯ್ಕೆ ಶಿಬಿರಕ್ಕೆ ಆಯ್ಕೆಯಾಗದ ಅಭ್ಯರ್ಥಿಗಳು ತಮ್ಮ ಪ್ರದರ್ಶನ ಉತ್ತ ಮಪಡಿಸಿಕೊಳ್ಳಲು ಉದ್ದೇಶಿಸಿದಲ್ಲಿ,ಈ ಬಗ್ಗೆ ಅರ್ಜಿಯಲ್ಲಿ ಕಡ್ಡಾಯವಾಗಿ ದಾಖಲಿಸಿ,ಭಾಗವಹಿಸಬಹುದು. ರಾಜ್ಯಮಟ್ಟದ ಆಯ್ಕೆ ಶಿಬಿ ರಕ್ಕೆ ಈಗಾಗಲೇ ಆಯ್ಕೆಯಾಗಿರುವವರು ಇದರಲ್ಲಿ ಭಾಗವಹಿಸುವ ಅವಶ್ಯಕತೆ ಇಲ್ಲ.
ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವವರು ಆಯಾ ಸ್ಥಳಗಳಲ್ಲಿ ಬೆಳಗ್ಗೆ 9 ಗಂಟೆಗೆ ವರದಿ ಮಾಡಿಕೊಳ್ಳತಕ್ಕದ್ದು. ವಾಲಿಬಾಲ್ ಮತ್ತು ಬಾಸ್ಕೆಟ್ಬಾಲ್ ಹೊರತುಪಡಿಸಿ,ಇತರೆ ಕ್ರೀಡೆಗಳಲ್ಲಿ ಅಸಾಧಾರಣ ಸಾಧನೆ ತೋರುವ ಕ್ರೀಡಾಪಟುಗಳಿಗೆ ಎತ್ತರದ ಅರ್ಹತಾ ಮಾನ ದಂ ಡದಲ್ಲಿ ಸಡಿಲಿಕೆ ಇರುತ್ತದೆ.
ಈ ವಿಶೇಷ ಶಿಬಿರಗಳಲ್ಲಿ ಭಾಗವಹಿಸಿ ಆಯ್ಕೆಯಾದ ಕ್ರೀಡಾಪಟುಗಳು ರಾಜ್ಯಮಟ್ಟದ ಆಯ್ಕೆ ತರಬೇತಿ ಶಿಬಿರಗಳಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗುವುದು ಹಾಗೂ ಅರ್ಹರಾದಲ್ಲಿ,ಕ್ರೀಡಾ ವಸತಿ ಶಾಲೆ, ನಿಲಯಗಳಿಗೆ ಪ್ರವೇಶ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಖ್ಯೆ 155265 ಅಥವಾ ಆಯಾ ಜಿಲ್ಲೆಯಲ್ಲಿರುವ ಇಲಾಖೆಯ ಉಪ/ಸಹಾಯಕ ನಿ ರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು.

blank

(ಏ.17ರಂದು ನಡೆಯುವ ವಿಶೇಷ ಆಯ್ಕೆ ಶಿಬಿರ ವಿವರ)

ಯಾವ ಜಿಲ್ಲೆ-ಎಲ್ಲಿ?-ಯಾವ ಕ್ರೀಡೆಗಳ ವಿಶೇಷ ಆಯ್ಕೆ ಶಿಬಿರ?

ಕಲಬುರಗಿ-ಜಿಲ್ಲಾ ಕ್ರೀಡಾಂಗಣ-ಅಥ್ಲೆಟಿಕ್ಸ್,ವಾಲಿಬಾಲ್
ಉಡುಪಿ-ಜಿಲ್ಲಾ ಕ್ರೀಡಾಂಗಣ ಅಥ್ಲೆಟಿಕ್ಸ್, ಬಾಸ್ಕೆಟ್‌ಬಾಲ್, ವಾಲಿಬಾಲ್, ಕಬಡ್ಡಿ.
ಬೀದರ್-ಜಿಲ್ಲಾ ಕ್ರೀಡಾಂಗಣ- ಸೈಕ್ಲಿಂಗ್.
ಬಳ್ಳಾರಿ-ಫುಟ್ಬಾಲ್ ಕ್ರೀಡಾಂಗಣ-ಪುಟ್ಬಾಲ್.
ಗದಗ-ಜಿಲ್ಲಾ ಕ್ರೀಡಾಂಗಣ- ಹಾಕಿ.
ಚಿಕ್ಕಮಗಳೂರು-ಜಿಲ್ಲಾ ಕ್ರೀಡಾಂಗಣ-ಜುಡೋ
—-

Share This Article

ದೇಹದ ಈ ಭಾಗಗಳ ಮೇಲೆ ಅಪ್ಪಿತಪ್ಪಿಯೂ ಟ್ಯಾಟೂ ಹಾಕಿಸಬೇಡಿ..ಅಪಾಯ ಖಂಡಿತ! Tattoo

Tattoo: ಇತ್ತೀಚಿನ ದಿನಗಳಲ್ಲಿ ಟ್ಯಾಟೂ ಹಾಕಿಸಿಕೊಳ್ಳುವುದು ಫ್ಯಾಷನ್  ಆಗಿದೆ. ಹುಡುಗರಿಂದ ಹಿಡಿದು ಹುಡುಗಿಯರವರೆಗೆ ಎಲ್ಲರೂ ತಮ್ಮ…

ಕಂಕುಳಲ್ಲಿರುವ ಕಪ್ಪು ಕಲೆ ಕಡಿಮೆಯಾಗಲು ಏನು ಮಾಡಬೇಕು? underarms

underarms: ಅನೇಕ ಹುಡುಗಿಯರು ಕಂಕುಳಲ್ಲಿನ ಕಪ್ಪು ಕಲೆಗಳನ್ನು ಹೋಗಲಾಡಿಸಲು  ಅನೇಕ ಪ್ರಯತ್ನ ಮಾಡುತ್ತಾರೆ. ಇದಕ್ಕಾಗಿ ಅವರು…

ಪ್ರತಿದಿನ ಒಂದು ಕಪ್ ಅರಿಶಿನ ಶುಂಠಿ ಚಹಾ ಕುಡಿದು ಈ ಎಲ್ಲಾ ಸಮಸ್ಯೆಗಳಿಗೆ ಗುಡ್​​ ಬಾಯ್​​ ಹೇಳಿ | Immunity

Immunity: ನಿಮ್ಮ ದೇಹದ ರೋಗನಿರೋಧಕ ಶಕ್ತಿ ಕಡಿಮೆಯಾಗಿದ್ದರೆ, ಅಡುಗೆಮನೆಯಲ್ಲಿರುವ ಅರಿಶಿನ ಮತ್ತು ಶುಂಠಿ ಪದಾರ್ಥಗಳು ಅದನ್ನು…