ಏಜೆಂಟರ ಹಾವಳಿ ತಪ್ಪಿಸಲು ಆನ್‌ಲೈನ್ ಸೇವೆ

blank

ಬಾಗಲಕೋಟೆ: ಏಜೆಂಟರುಗಳ ಹಾವಳಿ ತಪ್ಪಿಸುವ ಸಲುವಾಗಿ ಸಾರಿಗೆ ಇಲಾಖೆಯಲ್ಲಿ ಆನ್‌ಲೈನ್ ಸೇವೆಗಳನ್ನು ಪ್ರಾರಂಭಿಸಲಾಗಿದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

blank

ತಾಲೂಕಿನ ಸೀಮಿಕೇರಿ ಕ್ರಾಸ್ ಬಳಿ ನಿರ್ಮಾಣವಾಗುತ್ತಿರುವ ನೂತನ ಸ್ವಯಂ ಚಾಲಿತ ಚಾಲನಾ ಪರೀಕ್ಷಾಪಥ ಕಾಮಗಾರಿ ಬುಧವಾರ ಪರಿಶೀಲಿಸಿ ಮಾತನಾಡಿದ ಅವರು, ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿನ ಸೇವೆಗಳನ್ನು ಪಡೆಯುವಲ್ಲಿ ಏಜೆಂಟರ ಹಾವಳಿ ಇದ್ದ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿರುವ ಹಿನ್ನಲೆಯಲ್ಲಿ ಈ ಹಾವಳಿ ತಪ್ಪಿಸಲು ೩೪ ಸೇವೆಗಳನ್ನು ಆನ್‌ಲೈನ್ ಮೂಲಕ ನೀಡಲಾಗುತ್ತಿದೆ. ಹಂತ ಹಂತವಾಗಿ ಎಲ್ಲ ಸೇವೆಗಳನ್ನು ಆನ್‌ಲೈನ್ ಮೂಲಕ ಮಾಡಲಾಗುತ್ತಿದ್ದು, ಅಽಕೃತವಾಗಿ ದೂರುಗಳು ಬಂದಲ್ಲಿ ಆ ಭಾಗದ ಪ್ರಾದೇಶಿಕ ಸಾರಿಗೆ ಅಽಕಾರಿಗಳ ಮೇಲೆ ಶಿಸ್ತು ಕ್ರಮಕ್ಕೆ ಮುಂದಾಗುವುದಾಗಿ ತಿಳಿಸಿದರು.

ಬಾಗಲಕೋಟೆ ಸೀಮಿಕೇರಿ ಬಳಿ ೧೨ ಎಕರೆ ಜಮೀನಿನಲ್ಲಿ ೬ ಎಕರೆ ಜಮೀನು ಬಳಸಿಕೊಂಡು ನೂತನ ಸ್ವಯಂ ಚಾಲಿತ ಚಾಲನಾ ಪರೀಕ್ಷಾಪಥ ನಿರ್ಮಿಸಲಾಗುತ್ತಿದೆ. ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಸೆನ್ಸಾರ್ ಕೆಲಸಕ್ಕೆ ನೀಡಲಾದ ಟೆಂಡರ್‌ರನ್ನು ರದ್ದುಪಡಿಸಲಾಗಿದೆ. ಕಾರಣ ಇತ್ತೀಚಿನ ನೂತನ ಮಾದರಿಯ ಸೆನ್ಸಾರ್ ಬಂದಿದ್ದು, ಅದಕ್ಕಾಗಿ ಹೊಸ ಟೆಂಡರ್‌ರನ್ನು ಕರೆಯಾಗಿದೆ. ಪರೀಕ್ಷಾಪಥದ ರಸ್ತೆ ನಿರ್ಮಾಣ ಹಾಗೂ ಪಾದಚಾರಿ ರಸ್ತೆ ಕಾಮಗಾರಿ ಆಗಬೇಕಿದೆ. ಸೆನ್ಸಾರ್ ಹೊರತುಪಡಿಸಿ ಇದಕ್ಕಾಗಿ ೯ ಕೋಟಿ ರೂ.ಗಳ ವೆಚ್ಚ ಮಾಡಲಾಗುತ್ತಿದೆ. ಇನ್ನು ೩ ರಿಂದ ೪ ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, ಶೀಘ್ರದಲ್ಲಿಯೇ ಲೋಕಾರ್ಪಣೆಗೊಳಿಸಲಾಗುವುದು ಎಂದರು.

ನAತರ ನವನಗರದ ಪ್ರಾದೇಶಿಕ ಸಾರಿಗೆ ಕಚೇರಿಗೆ ಭೇಟಿ ನೀಡಿದ ಸಚಿವರು ಕಡತಗಳನ್ನು ಪರಿಶೀಲನೆ ಮಾಡಿದರು. ಈ ಬಗ್ಗೆ ಪ್ರಾದೇಶಿಕ ಸಾರಿಗೆ ಅಽಕಾರಿ ಆರ್.ಎಲ್.ಹೊಸಮನಿ ವಿವರಣೆ ನೀಡುತ್ತಾ, ಕಳೆದ ೨೦೨೩-೨೪ನೇ ಸಾಲಿಗೆ ರಾಜಸ್ತ ಸಂಗ್ರಹಣೆ ಶೇ.೯೧.೭೦ ರಷ್ಟು ಆದರೆ ೨೦೨೪-೨೫ನೇ ಸಾಲಿಗೆ ಶೇ.೯೧.೬೬ ಹಾಗೂ ಪ್ರಸಕ್ತ ೨೦೨೫-೨೬ನೇ ಸಾಲಿನ ಎಪ್ರೀಲ್ ಮಾಹೆಯವರೆಗೆ ಶೇ.೮೫.೭೫ ರಷ್ಟು ಆಗಿದೆ. ಮಾರ್ಚ ೨೦೨೪ರ ಅಂತ್ಯಕ್ಕೆ ೮೩೯೦ ವಾಹನಗಳನ್ನು ತಪಾಸಣೆ ಮಾಡಲಾಗಿದ್ದು, ಅದರಲ್ಲಿ ೨೭೮೩ ಪ್ರಕರಣಗಳನ್ನು ದಾಖಲಿಸಲಾಗಿದೆ. ತೆರಿಗೆ ಮತ್ತು ದಂಡ ಸೇರಿ ಒಟ್ಟು ೨.೨೨ ಕೋಟಿ ರೂ. ಸಂಗ್ರಹವಾಗಿದೆ ಎಂದು ಹೇಳಿದರು.

ಕಳೆದ ೨೦೨೪-೨೫ನೇ ಸಾಲಿಗೆ ರಸ್ತೆ ಸುರಕ್ಷತಾಗೆ ನೀಡಿದ ಗುರಿಗೆ ಶೇ.೧೦೦.೧೭ ರಷ್ಟು ಪ್ರಗತಿ ಸಾಽಸಲಾಗಿದೆ. ಮಾರ್ಚ ೨೦೨೫ರ ಅಂತ್ಯಕ್ಕೆ ೪೪ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಅದರಲ್ಲಿ ೯ ವಾಹನಗಳನ್ನು ಬಹಿರಂಗ ಹರಾಜಿನಲ್ಲಿ ವಿಲೇವಾರಿ ಮಾಡಲಾಗಿದೆ. ಎಪ್ರೀಲ್ ಅಂತ್ಯಕ್ಕೆ ೩೫ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕಚೇರಿಯ ವ್ಯಾಪ್ತಿಯಲ್ಲಿ ೨೦ ವಾಹನ ತರಬೇತಿ ಶಾಲೆಗಳು ನೋಂದಣಿಯಾಗಿದ್ದು, ೧೫ ವಾಯು ಮಾಲಿನ್ಯ ತಪಾಸಣಾ ಕೇಂದ್ರಗಳು ಇರುವುದಾಗಿ ತಿಳಿಸಿದರು.
ಸಚಿವರ ಭೇಟಿ ಸಮಯದಲ್ಲಿ ಅಪರ ಸಾರಿಗೆ ಆಯುಕ್ತ ಕೆ.ಟಿ.ಹಾಲಸ್ವಾಮಿ, ಉಪವಿಭಾಗಾಽಕಾರಿ ಸಂತೋಷ ಜಗಲಾಸರ, ಸಾರಿಗೆ ಇನ್ಸಪೆಕ್ಟರಗಳಾದ ವಾಗೀಶ ಹಿರೇಮಠ, ಅಶ್ವಿನಿ ಬಡಿಗೇರ, ರೇಖಾ ಭಜಂತ್ರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Share This Article
blank

ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಈ ದೇಸಿ ಸೂಪರ್‌ಫುಡ್‌ ತಿನ್ನಿ | Immunity

Immunity: ಮಳೆಗಾಲ ಬಂತೆಂದರೆ ಸೋಂಕುಗಳು ಬರುವುದು ಸಹ ಸಹಜ. ತಂಪಾದ ಗಾಳಿಗೆ ಮನೆಗಳ ಸುತ್ತಲು ಬ್ಯಾಕ್ಟೀರಿಯಾ…

ಮಳೆಗಾಲದಲ್ಲಿ ಕಲುಷಿತ ಆಹಾರ, ನೀರಿನ ಮೂಲಕ ವೈರಸ್! ಎಚ್ಚರ ತಪ್ಪಿದರೆ ಅನಾರೋಗ್ಯ…monsoon

monsoon : ಮಳೆಗಾಲ  ಹವಾಮಾನದಲ್ಲಿನ ಬದಲಾವಣೆಗಳು  ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ.  ಸೇವಿಸುವ ಆಹಾರ ಮತ್ತು…

blank