More

    ಏಕಾಗ್ರತೆ ಸಾಧಿಸುವ ಕೌಶಲ್ಯ ಕಲಿಯಬೇಕು

    ಬಳ್ಳಾರಿ : ಪ್ರಶಿಕ್ಷಣಾರ್ಥಿಗಳು ತರಗತಿಯಲ್ಲಿ ವಿದ್ಯಾರ್ಥಿಗಳ ಮನಸ್ಸಿನ ಏಕಾಗ್ರತೆ ಸಾಧಿಸುವ ಕೌಶಲ್ಯ ಕಲಿಯಬೇಕು ಎಂದು ಹೇಮಕೂಟ ಶೂನ್ಯ ಸಿಂಹಾಸನಾಧೀಶ್ವರ ಕೊಟ್ಟೂರು ಬಸವಲಿಂಗ ಮಹಾಸ್ವಾಮೀಜಿ ಹೇಳಿದರು.
    ಗರದ ವೀರಶೈವ ವಿದ್ಯಾವರ್ಧಕ ಸಂಘದ ಕೊಟ್ಟೂರುಸ್ವಾಮಿ ಕಾಲೇಜಿನಲ್ಲಿ ಶನಿವಾರ ನಡೆದ ದಾನಿಗಳ ದಿನಾಚರಣೆ ಹಾಗೂ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳ ಸ್ವಾಗತ ಮತ್ತು ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿದರು. ಭವಿಷ್ಯಕ್ಕೆ ಬೇಕಾಗಿರುವ ಗುಣಮಟ್ಟದ ಶಿಕ್ಷಣ ಬೋಧನೆಗೆ ಪ್ರಶಿಕ್ಷಣಾರ್ಥಿಗಳು ತಾಳ್ಮೆ, ಸಂಯಮದ ಜತೆಯಲ್ಲಿ ದೇಶಕಟ್ಟುವ ಜವಾಬ್ದಾರಿಯನ್ನು ನಿರ್ವಹಣೆ ಮಾಡಬೇಕು ಎಂದರು. ಸ್ವಾತಂತ್ರ್ಯಪೂರ್ವದಿಂದಲೂ ಜಾತ್ಯಾತೀತವಾಗಿ ಶಿಕ್ಷಣ ಸೇವೆ ಸಲ್ಲಿಸಿ, ದೇಶವನ್ನು ನಿರ್ಮಾಣ ಮಾಡುವ ಜವಾಬ್ದಾರಿಯನ್ನು ವೀರಶೈವ ವಿದ್ಯಾವರ್ಧಕ ಸಂಘ ಮತ್ತು ವೀರಶೈವ ಮಠಗಳು ಹಾಗೂ ಸಂಸ್ಥೆಗಳು ಸಮರ್ಥವಾಗಿ ನಿರ್ವಹಿಸುತ್ತವೆ ಎಂದು ಹೇಳಿದರು.
    ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಮಾತನಾಡಿ, ಗುಣಮಟ್ಟದ ಶಿಕ್ಷಣ ಬೋಧನೆಗೆ ಆದ್ಯತೆ ನೀಡಿ ದೇಶದ ಅಭಿವೃದ್ಧಿಗೆ ಶ್ರಮಿಸಬೇಕು. ದೇಶದಲ್ಲಿ ಗುಣಮಟ್ಟದ ಶಿಕ್ಷಣದ ಕೊರತೆ ಇದೆ. ಈ ಕೊರತೆಯ ನಿವಾರಣೆ ಮಾಡುವ ಜವಾಬ್ದಾರಿ ಭವಿಷ್ಯದ ಶಿಕ್ಷಕರ ಮೇಲಿದೆ. ಪ್ರಶಿಕ್ಷಣಾರ್ಥಿಗಳು ಗುಣಮಟ್ಟದ ಶಿಕ್ಷಣವನ್ನು ಬೋಧಿಸಲು ಆದ್ಯತೆ ನೀಡಬೇಕು. ಅಲ್ಲದೇ, ಸಮಾಜಕ್ಕೆ ಉತ್ತಮ ವ್ಯಕ್ತಿಗಳನ್ನು ನೀಡಬೇಕು ಎಂದು ಸಲಹೆ ನೀಡಿದರು. ವೀರಶೈವ ವಿದ್ಯಾವರ್ಧಕ ಸಂಘದ ಬೆಳವಣಿಗೆಯಲ್ಲಿ ದಾನಿಗಳ ಪಾತ್ರ ದೊಡ್ಡದು. ದಾನಿಗಳ ದಾನವು ಅರ್ಥಪೂರ್ಣವಾಗಿ ಉಪಯೋಗ ಆಗಬೇಕು. ದಾನದ ಆಸ್ತಿಪಾಸ್ತಿಗಳನ್ನು ಸಂರಕ್ಷಣೆ ಮಾಡಬೇಕು, ಈ ನಿಟ್ಟಿನಲ್ಲಿ ಸಂಘ ನೀಡುವ ಜವಾಬ್ದಾರಿಗಳನ್ನು ನಿರ್ವಹಿಸುವೆ ಎಂದು ಕಿವಿ ಮಾತು ಹೇಳಿದರು.
    ವೀ.ವಿ. ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ ಮಾತನಾಡಿ, ದಾನಿಗಳು ನೀಡಿರುವ ದಾನವನ್ನು ಸಂರಕ್ಷಣೆ ಮಾಡಲು ಆದ್ಯತೆ ನೀಡಿ, ಶಿಕ್ಷಣ ಕ್ಷೇತ್ರಕ್ಕೆ ಸಮರ್ಪಣೆ ಮಾಡಿ ದಾನವನ್ನು ಅರ್ಥಪೂರ್ಣವಾಗಿ ಸ್ಮರಿಸಲಾಗುತ್ತದೆ ಎಂದರು. ದಾನಿಗಳ ದಾನದ ಕುರಿತು ಭವಿಷ್ಯದ ಪೀಳಿಗೆ ತಿಳಿಯಬೇಕು. ಈ ನಿಟ್ಟಿನಲ್ಲಿ ದಾನಿಗಳ ದಿನಾಚರಣೆ ಅರ್ಥಪೂರ್ಣ ಆಚರಿಸಲಾಗುತ್ತಿದೆ ಎಂದರು.
    ವೀ.ವಿ. ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಟಿ. ಕೊಟ್ರಪ್ಪ, ದರೂರು ಶಾಂತನಗೌಡ, ಸಂಘದ ಕಾರ್ಯದರ್ಶಿ ಡಾ. ಆರವಿಂದ್ ಪಾಟೀಲ್ ಮಾತನಾಡಿದರು.
    ಪ್ರಮುಖರಾದ ಕೊಟ್ಟೂರುಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಎ. ಸತೀಶ್ ಹಿರೇಮಠ, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಎಂ. ಶರಣಬಸವನಗೌಡ ಇದ್ದರು.

    See also  ಗಣಿಪ್ರದೇಶಗಳ ಗಡಿ ಪರಿಶೀಲನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts