22.5 C
Bengaluru
Sunday, January 19, 2020

ಏಕತೆಗಾಗಿ 370ರ ವಿಧಿ ರದ್ದು

Latest News

ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ: ಜಿಲ್ಲಾಧಿಕಾರಿ ಪಾಟೀಲ ಅಭಿಮತ

ವಿಜಯಪುರ : ಸರ್ಕಾರಿ ನೌಕರರು ಮತ್ತು ಶಾಲಾ ಕಾಲೇಜುಗಳಿಗೆ ಮಕ್ಕಳನ್ನು ಬಿಡಲು ಬರುವ ಪಾಲಕರು, ಕಾಲೇಜು ವಿದ್ಯಾರ್ಥಿಗಳು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವ ಕುರಿತಂತೆ...

ಪೋಲಿಯೋ ಲಸಿಕಾ ಕಾರ್ಯಕ್ರಮ

ರಾಣೆಬೆನ್ನೂರ: ಪೋಲಿಯೋ ಮುಕ್ತ ಭಾರತವನ್ನಾಗಿ ಮಾಡುವ ಉದ್ದೇಶದಿಂದ ಸಾರ್ವಜನಿಕರು ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸಬೇಕು. ಮಕ್ಕಳಿಗೆ ತಪ್ಪದೇ ಪೋಲಿಯೋ ಲಸಿಕೆ ಹಾಕಿಸಬೇಕು ಎಂದು...

ಇಬ್ಬರು ಮನೆಗಳ್ಳರು ಖಾಕಿ ಬಲೆಗೆ

ಗದಗ: ಮನೆ ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಬಂಧಿಸುವಲ್ಲಿ ಗದಗ ಗ್ರಾಮೀಣ ಪೊಲೀಸರು ಯಶಸ್ವಿಯಾಗಿದ್ದಾರೆ. ನಗರದ ಸೆಟ್ಲಮೆಂಟ್ ನಿವಾಸಿಗಳಾದ ಸುರೇಶ...

ಕಾಲನಲ್ಲಿ ಲೀನವಾದ ‘ಪ್ರಳಯ’

ಅಕ್ಕಿಆಲೂರ: ಹೋರಿ ಬೆದರಿಸುವ ಕಾರ್ಯಕ್ರಮದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದ ಸಮೀಪದ ಮಲಗುಂದ ಗ್ರಾಮದ ಪ್ರಳಯ ಎಂಬ ಹೆಸರಿನ ಹೋರಿ ಶನಿವಾರ ಅನಾರೊಗ್ಯದಿಂದ ಅಸುನಿಗಿದ್ದು,...

ನೇತ್ರಾವತಿ ನದಿಯಲ್ಲಿ ದೋಣಿ ಮಗುಚಿ ಯುವತಿ ಸಾವು: ಐವರ ರಕ್ಷಣೆ, ಓರ್ವಳ ಸ್ಥಿತಿ ಗಂಭೀರ

ಮಂಗಳೂರು: ದೋಣಿ ದುರಂತದಲ್ಲಿ ಓರ್ವ ಯುವತಿ ನೀರುಪಾಲಾಗಿರುವ ಘಟನೆ ಭಾನುವಾರ ಸಂಜೆ ಉಳ್ಳಾಲ ಬಳಿಯ ನೇತ್ರಾವತಿ ನದಿಯಲ್ಲಿ ಸಂಭವಿಸಿದೆ. ಐವರು ಯುವತಿಯರನ್ನು ರಕ್ಷಿಸಲಾಗಿದ್ದು,...

ರಾಮನಗರ: ಕಾಶ್ಮೀರದಲ್ಲಿ ಭಯೋತ್ಪಾದನೆ ಬೆಳೆಸುವ ಬದಲು, ಭಾರತೀಯತೆ ಬೆಳೆಸುವ ಹಾಗೂ ದೇಶಕ್ಕೆ ಒಂದೇ ಕಾನೂನು ಜಾರಿಗೆ ತರುವ ಉದ್ದೇಶದಿಂದ 370ರ ವಿಧಿಯ ಪ್ರಕಾರ ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದೆ ಎಂದು ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಬಿಡದಿ ಪಟ್ಟಣದ ಅಮೃತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾಶ್ಮೀರಕ್ಕೆ ವಿಶೇಷ ಮಾನ್ಯತೆ ನೀಡಲಾಗಿದ್ದ ವಿಧಿ 370, 35ಎ ವಿಶೇಷ ಸ್ಥಾನಮಾನ ರದ್ದತಿ ಹಾಗೂ ರಾಷ್ಟ್ರೀಯ ಐಕ್ಯತಾ ಅಭಿಯಾನ ಕುರಿತು ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಕಾಶ್ಮೀರ ನಾವು ಪೂಜಿಸುವ ಶಾರದೆ ತವರು ಮನೆ, ಕಶ್ಯಪ ಋಷಿಯ ತಪಸ್ಸಿನ ತಾಣ, ಕಲ್ಹಣನು ಆಡಳಿತ ನಡೆಸಿದ ರಾಜ್ಯವಾಗಿದೆ. ಇಲ್ಲಿ 12ನೇ ಶತಮಾನದವರೆಗೂ ನಮ್ಮ ದೇಶದ ಸಂಸ್ಕೃತಿಯಿದ್ದು, ನಂತರ ಆಗಮಿಸಿದ ದಾಳಿಕೋರರಿಂದ ಅಲ್ಲಿನ ಸಂಸ್ಕೃತಿ ನಾಶವಾಗಿದೆ. ಸಹಸ್ರಾರು ವರ್ಷಗಳಿಂದ ಜ್ಞಾನದ ಲೋಕ, ಭೂಲೋಕದ ಸ್ವರ್ಗವಾಗಿದ್ದ ಕಾಶ್ಮೀರ, ಸ್ವಾತಂತ್ರ ನಂತರವೂ ಕಾಂಗ್ರೆಸ್ ಸರ್ಕಾರ ಮಾಡಿದ ತಪ್ಪಿನಿಂದಾಗಿ ಪ್ರತ್ಯೇಕತಾ ರಾಜ್ಯವಾಗಿ ಉಗ್ರವಾದಿಗಳ ತಾಣವಾಗಿ ಮಾರ್ಪಟ್ಟಿತು ಎಂದರು.

ಮಹಾತ್ಮ ಗಾಂಧೀಜಿ, ಸರ್ದಾರ್ ವಲ್ಲಭಭಾಯಿ ಪಟೇಲ್, ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶದ ವಿಭಜನೆ ವಿರೋಧಿಸಿದರೂ, ಬ್ರಿಟಿಷರು ಸ್ವಾತಂತ್ರ ನೀಡುವ ಮೊದಲು ದೇಶ ವಿಭಜನೆ ಮಾಡಿದರು. ನಂತರ ಅಂದಿನ ಪ್ರಧಾನಮಂತ್ರಿ ಜವಾಹರಲಾಲ್ ನೆಹರು ಸರ್ವಾಧಿಕಾರದ ಮೂಲಕ ಕಾಶ್ಮೀರಕ್ಕೆ ತಾತ್ಕಾಲಿಕವಾಗಿ ಪ್ರತ್ಯೇಕ ಸಂವಿಧಾನ ನೀಡಿದರು. ಆದರೆ ತಾತ್ಕಾಲಿಕ ಪ್ರತ್ಯೇಕತೆ ಸರಿಪಡಿಸಲಾಗದ ಕಾಂಗ್ರೆಸ್ ಪಕ್ಷ 70 ವರ್ಷಗಳವರೆಗೂ ಅದನ್ನು ಮುಂದುವರಿಸಿ, ಅಲ್ಲಿನ ಜನರು ಭಾರತವನ್ನು ವಿರೋಧಿಸುವ ವಾತಾವರಣ ಬೆಳೆಯುವಂತೆ ಮಾಡಿದ್ದಾರೆ ಎಂದರು.

ಪ್ರತ್ಯೇಕ ಸಂವಿಧಾನ ಹೊಂದಿದ ಕಾಶ್ಮೀರದಲ್ಲಿ ದಲಿತರಿಗೆ, ಹಿಂದುಳಿದವರಿಗೆ ಮೀಸಲಾತಿ ಇರಲಿಲ್ಲ. ಅಭಿವೃದ್ಧಿ ಮರೀಚಿಕೆಯಾಗಿ ಮೂರು ಕುಟುಂಬಗಳಿಗೆ ಹಣ ಸೇರುತ್ತಿತ್ತು. ದೇಶದ ಇತರೆ ರಾಜ್ಯಗಳಿಗೆ ನೀಡುವ
ಅನುದಾನಕ್ಕಿಂತ 4 ಪಟ್ಟು ಹೆಚ್ಚು ಅನುದಾನ ಕೊಟ್ಟರೂ ಅದು ಅಭಿವೃದ್ಧಿಯಾಗಲಿಲ್ಲ. ಉದ್ಯೋಗ, ಅಭಿವೃದ್ಧಿ ಕೊರತೆಯಿಂದ ಕಂಗೆಟ್ಟ ಜನರು ಉಗ್ರರಾದರು. ಉಗ್ರರ ಹಾವಳಿಗೆ 4 ಲಕ್ಷಕ್ಕೂ ಹೆಚ್ಚಿನ ಕುಟುಂಬಗಳು ನಿರಾಶ್ರಿತರಾಗುತ್ತಾರೆ. 370ನೇ ವಿಧಿಯ ವಿಶೇಷ ಸ್ಥಾನಮಾನ ರದ್ದತಿಯಿಂದ ಕಾಶ್ಮೀರದಲ್ಲಿ ವಿಫುಲ ಅವಕಾಶಗಳು ಲಭ್ಯವಾಗುತ್ತಿದೆ ಎಂದರು.

ಮೀಸಲಾತಿ ಎಲ್ಲರಿಗೂ ಲಭ್ಯ: ದಲಿತರು, ಹಿಂದುಳಿದ ವರ್ಗಗಳಿಗೆ ಮೀಸಲಾತಿ, ದೇಶದ ಯಾವುದೇ ವ್ಯಕ್ತಿ ಆಸ್ತಿ ಖರೀದಿ ಮಾಡುವ ಸ್ವಾತಂತ್ರೃ, ಉದ್ಯಮ ಆರಂಭಿಸುವ, ಅವಕಾಶ ಸಿಕ್ಕರೆ ಅಲ್ಲಿನ ಮಹಿಳೆ ಅಥವಾ ಪುರುಷರೊಂದಿಗೆ ದೇಶದ ಯಾವುದೇ ಜನರು ವಿವಾಹವಾಗುವ ಅವಕಾಶ ಲಭಿಸಿದೆ ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರುದ್ರೇಶ್, ಪಕ್ಷದ ರಾಜ್ಯ ಘಟಕದ ವಕ್ತಾರ ಅಶ್ವತ್ಥನಾರಾಯಣ, ಮುಖಂಡರಾದ ಛಲವಾದಿ ನಾರಾಯಣಸ್ವಾಮಿ, ಮಲ್ಲಪ್ಪ, ದೇವರಾಜ ಜಾಧವ, ಜಯಣ್ಣ, ದೇವರಾಜು, ಶಿವಮಾದು, ಎಸ್.ಆರ್. ನಾಗರಾಜು, ಪದ್ಮನಾಭ, ಮುರಳೀಧರ್, ಸಿದ್ದೇಗೌಡ, ಅಮೃತಾ ಕಾಲೇಜಿನ ಪ್ರಾಚಾರ್ಯ ಕೆ.ವಿ.ಮಹೇಂದ್ರ ಇದ್ದರು.

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವತಿಯಿಂದ ಕಾಶ್ಮೀರದಲ್ಲಿ ಒಂದು ಕೇಂದ್ರ ತೆರೆಯಲು ಯೋಜಿಸಲಾಗಿದ್ದು, ಕೇಂದ್ರ ಸರ್ಕಾರದ ಬಳಿ ಚರ್ಚಿಸಿ ಸ್ಥಳ ಒದಗಿಸುವಂತೆ ಕೇಳಿದ್ದೇವೆ. ರಾಜ್ಯದಿಂದ ಹೋಗುವ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಲಾಗುವುದು. ಇನ್ನು ಮುಂದೆ ಕಾಶ್ಮೀರವನ್ನು ಪ್ರವಾಸೋದ್ಯಮದ ಸ್ವರ್ಗವನ್ನಾಗಿ ಜಗತ್ತಿಗೆ ಪರಿಚಯ ಮಾಡಲು ಯೋಜನೆ ರೂಪಿಸಲಾಗುತ್ತಿದೆ.
ಸಿ.ಟಿ.ರವಿ ಪ್ರವಾಸೋದ್ಯಮ ಸಚಿವ

ವಿಡಿಯೋ ನ್ಯೂಸ್

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...

VIDEO| ಉಪಮುಖ್ಯಮಂತ್ರಿಗಳ ಕೈಬಿಡುವ ವಿಚಾರ ವರಿಷ್ಠರಿಗೆ ಬಿಟ್ಟದ್ದು, ಸಿಎಂ ವಾಪಸ್​...

ಬೆಂಗಳೂರು: ಹಾಲಿ ಇರುವ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಕೈ ಬಿಟ್ಟು ಹೊಸ ಡಿಸಿಎಂಗಳ ನೇಮಕ ವಿಚಾರವಾಗಿ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಡಿಸಿಎಂ ಡಾ. ಅಶ್ವತ್ಥ...

VIDEO| ವಂದೇ ಮಾತರಂ ಹೇಳದವರಿಗೆ ಭಾರತದಲ್ಲಿ ಬದುಕುವುದಕ್ಕೆ ಹಕ್ಕಿಲ್ಲ: ಕೇಂದ್ರ...

ಅಹಮದಾಬಾದ್​: ಒಂದೊಮ್ಮೆ ನೀವು ವಂದೇಮಾತರಂ ಹೇಳುವುದಿಲ್ಲ ಎಂದಾದರೆ ಭಾರತದಲ್ಲಿ ಬದುಕುವ ಹಕ್ಕು ಇರುವುದಿಲ್ಲ ಎಂದು ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಸೂರತ್​ನಲ್ಲಿ ಹೇಳಿದ್ದು ಈಗ ವಿವಾದಕ್ಕೀಡಾಗಿದೆ.    ಅವರು ಶನಿವಾರ ಪೌರತ್ವ...

VIDEO| ಜಮ್ಮು-ಕಾಶ್ಮೀರದ ಉಧಂಪುರದಲ್ಲೊಂದು ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ !

ಉಧಂಪುರ: ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಇದೇ ಮೊದಲ ಬಾರಿಗೆ ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ ಕಾರ್ಯಾಚರಣೆ ಆರಂಭಿಸಿದೆ. ಈ ವಿಶೇಷ ಜುವೆನಿಲ್ ಪೊಲೀಸ್ ಘಟಕವನ್ನು ಭಾನುವಾರ ಉದ್ಘಾಟಿಸಲಾಗಿದೆ. ಮಕ್ಕಳಲ್ಲಿ ಪೊಲೀಸ್ ಠಾಣೆ...

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...