ಮುಂಡರಗಿ: ರಾಷ್ಟ್ರೀಯ ಏಕತಾ ದಿನೋತ್ಸವ ಸಮಿತಿ ಹಾಗೂ ಬಿಜೆಪಿ ಮುಂಡರಗಿ ಮಂಡಳ ವತಿಯಿಂದ ಸರ್ದಾರ್ ವಲ್ಲಭಭಾಯಿ ಪಟೇಲರ ಜಯಂತಿ ನಿಮಿತ್ತ ಬುಧವಾರ ಏರ್ಪಡಿಸಿದ್ದ ಏಕತೆಗಾಗಿ ಓಟಕ್ಕೆ ಬಿಜೆಪಿ ಮುಖಂಡ ಕರಬಸಪ್ಪ ಹಂಚಿನಾಳ ಚಾಲನೆ ನೀಡಿದರು.
ಪಟ್ಟಣದ ಕೋಟೆ ಭಾಗದ ಶ್ರೀ ಆಂಜನೇಯ ದೇವಸ್ಥಾನದಿಂದ ಹೊರಟ ಏಕತೆಗಾಗಿ ಓಟ ಸರ್ ಕಂಬಳಿ ಸಿದ್ದಪ್ಪ ವೃತ್ತ, ಜಾಗೃತ್ ವೃತ್ತ, ಗಾಂಧಿ ವೃತ್ತದ ಮೂಲಕ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನ ಮಠ ತಲುಪಿತು.
ಈ ವೇಳೆ ಮುಖಂಡ ಕರಬಸಪ್ಪ ಹಂಚಿನಾಳ ಮಾತನಾಡಿ, ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸರ್ದಾರ ವಲ್ಲಭಭಾಯಿ ಪಟೇಲರು ಪ್ರಮುಖ ಪಾತ್ರ ವಹಿಸಿದ್ದರು. ರಾಜರ ಆಳ್ವಿಕೆಯ 550 ಸಂಸ್ಥಾನಗಳನ್ನು ಒಗ್ಗೂಡಿಕೊಂಡು ಭಾರತ ರಾಷ್ಟ್ರ ನಿರ್ವಣಕ್ಕೆ ಪಟೇಲರು ಶ್ರಮಿಸಿದ ಮಹಾನ್ ನಾಯಕರು ಎಂದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಹೇಮಗಿರೀಶ ಹಾವಿನಾಳ ಮಾತನಾಡಿ, ಪಟೇಲರು ದೇಶದ ಒಗ್ಗೂಡಿಕೆಯ ಜೊತೆಗೆ ಬಡವರ, ರೈತರ ಕಲ್ಯಾಣಕ್ಕಾಗಿ ಬದ್ಧರಾಗಿದ್ದರು ಎಂದರು.
ಮುಂಡರಗಿ ಬಿಜೆಪಿ ಮಂಡಳ ಅಧ್ಯಕ್ಷ ದೇವಪ್ಪ ಕಂಬಳಿ, ಮುಖಂಡರಾದ ರವೀಂದ್ರ ಉಪ್ಪಿನಬೆಟಗೇರಿ, ಎಸ್.ವಿ. ಪಾಟಿಲ, ಮಂಜುನಾಥ ಇಟಗಿ, ಟಿ.ಬಿ. ದಂಡಿನ, ವೀರೇಶ ಸಜ್ಜನರ, ಪರುಶುರಾಮ ಕರಡಿಕೊಳ್ಳ, ಯಲ್ಲಪ್ಪ ಗಣಾಚಾರಿ, ಲಿಂಗರಾಜಗೌಡ ಪಾಟೀಲ, ಸುಭಾಷ ಗಡಿಮನಿ, ಶಿವು ನವಲಗುಂದ, ಪ್ರಶಾಂತ ಗುಡದಪ್ಪನವರ, ಎಚ್.ಎಂ. ಹೊಸಗಾಣಿಗೇರ, ಪ್ರಕಾಶಗೌಡ ಪಾಟೀಲ, ಶಿವು ನಾಡಗೌಡ್ರ, ಅಂದಪ್ಪ ಉಳ್ಳಾಗಡ್ಡಿ, ಮಹಾಂತೇಶ ಕೊರಡಕೇರಿ, ಮುತ್ತು ಅಳವಂಡಿ, ನಾಗರಾಜ ಮುಖ್ಯ, ಬುಟ್ಟು ಹೊಸಮನಿ, ವಿದ್ಯಾರ್ಥಿಗಳು ಭಾಗಿಯಾಗಿದ್ದರು.