ಕೊಳ್ಳೇಗಾಲ: ಕೊಳ್ಳೇಗಾಲ ಕ್ಷೇತ್ರದ ಅಭ್ಯರ್ಥಿ ಎ.ಆರ್.ಕೃಷ್ಣಮೂರ್ತಿ 1 ಲಕ್ಷ ಮತ ಪಡೆಯುವ ಮೂಲಕ ದಾಖಲೆ ಗೆಲುವು ಸಾಧಿಸಲಿದ್ದಾರೆ ಎಂದು ಮಾಜಿ ಶಾಸಕ ಎಸ್.ಜಯಣ್ಣ ಭವಿಷ್ಯ ನುಡಿದರು.
ಬುಧವಾರ ನಡೆದ ಮತದಾನದ ಬಳಿಕ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಬಳಿ ಮಾಹಿತಿ ತಿಳಿದಿದ್ದೇವೆ. ಎದುರಾಳಿ ಅಭ್ಯರ್ಥಿಯ ವಿರುದ್ಧ 40 ರಿಂದ 50 ಸಾವಿರ ಮತಗಳ ಅಂತರದಲ್ಲಿ ಕಾಂಗ್ರೆಸ್ ಜಯ ಗಳಿಸಲಿದೆ ಎಂದು ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ತಿಳಿಸಿದರು.
ಕ್ಷೇತ್ರದಲ್ಲಿ ಎ.ಆರ್.ಕೃಷ್ಣಮೂರ್ತಿ ಮತ ಪಡೆದು ಗೆಲ್ಲುವುದು ಜಿಲ್ಲೆಯಲ್ಲೇ ದಾಖಲೆ ಆಗಲಿದೆ. ಮೇ 13ರ ರಂದು ಕ್ಷೇತ್ರದ ಜನರ ಕುತೂಹಲಕ್ಕೆ ಉತ್ತರ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಿಮ್ಮರಾಜೀಪುರದ ಮಾಜಿ ಗ್ರಾ.ಪಂ. ಅಧ್ಯಕ್ಷ ರಾಜು, ನಗರಸಭಾ ಮಾಜಿ ಸದಸ್ಯ ರಂಗರಾಜು, ಮುಖಂಡ ನಾಗರಾಜು, ಕೃಷ್ಣಮೂರ್ತಿ ಇತರರು ಇದ್ದರು.