More

  ಎಸ್‌ಡಿಪಿಐ, ಪಿಎಫ್‌ಐ ನಿಷೇಧಿಸಿ ಧನಂಜಯ್ ದೇಸಾಯಿ ಆಗ್ರಹ 

  ದಾವಣಗೆರೆ: ಭಾರತ ಹಿಂದು ರಾಷ್ಟ್ರವಾಗಿ ಉಳಿಸುವ ನಿಟ್ಟಿನಲ್ಲಿ ಸರ್ಕಾರ ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಗಳನ್ನು ನಿಷೇಧಿಸಬೇಕಿದೆ ಎಂದು ಹಿಂದು ರಾಷ್ಟ್ರ ಸೇನೆ ರಾಷ್ಟ್ರೀಯ ಅಧ್ಯಕ್ಷ ಧನಂಜಯ್ ಜಯರಾಂ ದೇಸಾಯಿ ಹೇಳಿದರು.

  ಕೇರಳದಲ್ಲಿ ಹುಟ್ಟಿಕೊಂಡ ಎಸ್‌ಡಿಪಿಐ, ಪಿಎಫ್‌ಐ ಕಾರ್ಯಕರ್ತರ ಹಾವಳಿ ದೇಶವ್ಯಾಪಿ ಹೆಚ್ಚಿದೆ. ಭಾರತವನ್ನು ಇಸ್ಲಾಂ ರಾಷ್ಟ್ರವಾಗಿ ಪರಿವರ್ತಿಸಲು ಹೊರಟಿದ್ದರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಕಿಡಿ ಕಾರಿದರು.
  ಶಾಲಾ-ಕಾಲೇಜುಗಳಲ್ಲಿ ಗಣೇಶೋತ್ಸವದ ಆರಾಧನೆ ಬದಲಾಗಿ ನಮಾಜ್ ಮಾಡಿಸುವುದಾಗಿ ಕೆಲವು ಮುಸ್ಲಿಮರು ಹೇಳುತ್ತಿರುವುದು ಖಂಡನೀಯ. ಕರ್ನಾಟಕದಲ್ಲಿ ವೀರ ಸಾವರ್ಕರ್‌ಗೆ ಅಪಮಾನ ಮಾಡಲಾಗಿದೆ. ಟಿಪ್ಪು ದಿನಾಚರಣೆಗೆ ಮುಂದಾಗಿರುವುದು ಸರಿಯಲ್ಲ ಎಂದು ಹೇಳಿದರು. ನಮ್ಮ ದೇಶದಲ್ಲಿ ಸ್ತ್ರೀಯರಿಗೆ ಪೂಜ್ಯನೀಯ ಸ್ಥಾನ ನೀಡಲಾಗಿದ್ದು ಹಿಜಾಬ್ ಬಂಧನ ಬೇಕಿಲ್ಲ ಎಂದರು.
  ಬೆಳಗಾವಿ, ಕರ್ನಾಟಕ ಅಥವಾ ಮಹಾರಾಷ್ಟ್ರದಲ್ಲಿರಲಿ, ನಾವೆಲ್ಲರೂ ಭಾರತೀಯರು ಎಂಬ ಭಾವನೆ ಬರಬೇಕು. ಭಾಷಾ ವಿಷಾದ ಮಾಡಬಾರದು. ಪ್ರಾಂತ ಹಾಗೂ ಜಾತಿ ಭೇದ ಕಿತ್ತೊಗೆಯಬೇಕು ಎಂದು ಹೇಳಿದರು.
  ಸುದ್ದಿಗೋಷ್ಠಿಯಲ್ಲಿ ರಾಜ್ಯ ಪ್ರವಕ್ತ ಕೆ.ಎನ್. ಸಂದೀಪ್, ಎಂ. ಶ್ರೀಕಾಂತ್, ಸುರೇಶ್, ಎ. ಕಿರಣ್, ಪ್ರಭಾಕರ್ ಎಂ.ಎಸ್, ಗುರುಬಸಪ್ಪ ಬಿ.ಕೆ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts