ಎಸ್​ಜೆಎಂವಿ ಮಹಿಳಾ ಕಾಲೇಜ್ ಚಾಂಪಿಯನ್

ಧಾರವಾಡ: ನಗರದ ವಿದ್ಯಾಗಿರಿ ಜೆಎಸ್​ಎಸ್ ಕಾಲೇಜು ಬುಧವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಪ್ರತಿಭಾನ್ವೇಷಣೆ ‘ಸಂಕಲ್ಪ- 2019’ರಲ್ಲಿ ಹುಬ್ಬಳ್ಳಿಯ ಎಸ್.ಜೆ.ಎಂ.ವಿ. ಮಹಿಳಾ ಕಾಲೇಜ್ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆಯಿತು.

ಪ್ರತಿಭಾನ್ವೇಷಣೆಯ ವಿವಿಧ ಸ್ಪರ್ಧೆಗಳಲ್ಲಿ 54 ಕಾಲೇಜ್​ಗಳ 432 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಬೆಳಗಾವಿ ಲಿಂಗರಾಜ ಕಾಲೇಜ್ ಹಾಗೂ ಹುಬ್ಬಳ್ಳಿಯ ಜೆ.ಜಿ. ಕಾಲೇಜ್ ರನ್ನರ್ ಅಪ್ ಪ್ರಶಸ್ತಿ ಪಡೆದವು. ಸಾಂಸ್ಕೃತಿಕ ವಿಭಾಗದಲ್ಲಿ ಹೊನ್ನಾವರದ ಎಸ್.ಡಿ.ಎಂ ಕಾಲೇಜ್ ಪ್ರಥಮ, ಗದುಗಿನ ಮನೋರಮಾ ಕಾಲೇಜ್ ದ್ವಿತೀಯ, ಶಿರಸಿಯ ಸರ್ಕಾರಿ ಪದವಿ ಕಾಲೇಜ್ ತೃತೀಯ ಸ್ಥಾನ ಪಡೆದವು.

ರಸಪ್ರಶ್ನೆ ವಿಭಾಗದಲ್ಲಿ ಧಾರವಾಡದ ಅಕ್ಕಿಹಾಳ ಪದವಿ ಕಾಲೇಜ್ ಪ್ರಥಮ, ಹುಬ್ಬಳ್ಳಿಯ ಜೆ.ಜಿ. ಕಾಮರ್ಸ್ ಕಾಲೇಜ್ ದ್ವಿತೀಯ, ಗದುಗಿನ ಎ.ಎಸ್.ಎಸ್. ಕಾಲೇಜ್ ತೃತೀಯ ಸ್ಥಾನ ಪಡೆದವು. ನಿಧಿ ಅನ್ವೇಷಣ ವಿಭಾಗದಲ್ಲಿ ಬೆಳಗಾವಿ ಕೆ.ಎಲ್.ಎಸ್. ಗೋಗಟೆ ಕಾಲೇಜ್ ಪ್ರಥಮ, ಧಾರವಾಡದ ಜೆ.ಎಸ್.ಎಸ್ ಎಂ.ಬಿ.ಎ ಕಾಲೇಜ್ ದ್ವಿತೀಯ, ಹುಬ್ಬಳ್ಳಿಯ ಜೆ.ಜಿ. ಕಾಮರ್ಸ್ ಕಾಲೇಜ್ ತೃತೀಯ ಸ್ಥಾನ ಪಡೆದರೆ, ಚರ್ಚಾಸ್ಪರ್ಧೆಯಲ್ಲಿ ಸ್ಥಾನ ಬೆಳಗಾವಿಯ ಲಿಂಗರಾಜ ಕಾಲೇಜ್ ಪ್ರಥಮ, ಬೆಳಗಾವಿ ಲಿಂಗರಾಜ ಬಿ.ಸಿ.ಎ. ಕಾಲೇಜ್ ದ್ವಿತೀಯ, ಹುಬ್ಬಳ್ಳಿಯ ಎಸ್.ಜೆ.ಎಂ.ವಿ. ಮಹಿಳಾ ಕಾಲೇಜ್ ತೃತೀಯ ಸ್ಥಾನ ಪಡೆಯಿತು. ವಿಜ್ಞಾಪನ್ ವಿಭಾಗದಲ್ಲಿ ಬೆಳಗಾವಿಯ ಕೆ.ಎಲ್.ಇ ಕಾಲೇಜ್ ಪ್ರಥಮ, ಬೆಳಗಾವಿ ಲಿಂಗರಾಜ ಕಾಲೇಜ್ ದ್ವಿತೀಯ, ಧಾರವಾಡ ಜೆ.ಎಸ್.ಎಸ್ ಎಂಬಿಎ ಕಾಲೇಜ್ ತೃತೀಯ ಸ್ಥಾನ ಗಳಿಸಿದವು.

ಜೆಎಸ್​ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ಪ್ರಾಚಾರ್ಯ ಡಾ. ಅಜಿತ ಪ್ರಸಾದ ಪ್ರಶಸ್ತಿ ವಿತರಿಸಿದರು.

ಸುಮನಾ ವಜ್ರಕುಮಾರ, ಸೂರಜ ಜೈನ್, ಮಹಾವೀರ ಉಪಾಧ್ಯೆ, ಡಾ. ಜಿನದತ್ತ ಹಡಗಲಿ, ಜಿನ್ನಪ್ಪ ಕುಂದಗೋಳ, ವಿವೇಕ ಲಕ್ಷೆ್ಮೕಶ್ವರ, ಎನ್.ಎಲ್. ಪುಡಕಲಕಟ್ಟಿ, ವಿಭಾ ಮುಗಳಿ, ಶ್ರಿಕಾಂತ ರಾಗಿ ಕಲ್ಲಾಪೂರ, ನವೀನ ಬಡಿಗೇರ, ಜ್ಯೋತಿ ಅಕ್ಕಿ, ಇತರರಿದ್ದರು.