More

  ಎಸ್‌ಡಿಎಂ ಇನ್‌ಸಿಗ್ನಿಯಾ

  ಧಾರವಾಡ: ನಗರದ ಎಸ್‌ಡಿಎಂ ಇಂಜಿನಿಯರಿ೦ಗ್ ಮಹಾವಿದ್ಯಾಲಯ ವತಿಯಿಂದ ಇನ್‌ಸಿಗ್ನಿಯಾ 2024: ರಾಷ್ಟçಮಟ್ಟದ ತಾಂತ್ರಿಕ, ಸಾಂಸ್ಕೃ್ಕತಿಕ ಉತ್ಸವವನ್ನು ಏ. 19 ಮತ್ತು 20ರಂದು ಆಯೋಜಿಸಲಾಗಿದೆ ಎಂದು ಪ್ರಾಚಾರ್ಯ ಡಾ. ರಮೇಶ ಚಕ್ರಸಾಲಿ ಹೇಳಿದರು.
  ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೧೯ರಂದು ಸಂಜೆ ೪ ಗಂಟೆಗೆ ಹುಬ್ಬಳ್ಳಿಯ ಎಬೆಲ್ ಡಿಸೈನ್ ಇಂಜನಿಯರಿAಗ್ ಸರ್ವೀಸ್ ಲಿಮಿಟೆಡ್‌ನ ಎಂ.ಡಿ ಜಗದೀಶ ಹಿರೇಮಠ ಉತ್ಸವಕ್ಕೆ ಚಾಲನೆ ನೀಡುವರು. ಹಿಂದುಸ್ತಾನಿ ಶಾಸ್ತಿçÃಯ ಗಾಯಕ ಶ್ರೀಪಾದ ಹೆಗಡೆ ಅತಿಥಿಯಾಗಿ ಪಾಲ್ಗೊಳ್ಳುವರು. ಎಸ್‌ಡಿಎಂ ಸಂಸ್ಥೆಯ ಕಾರ್ಯದರ್ಶಿ ಜೀವಂಧರಕುಮಾರ ಅಧ್ಯಕ್ಷತೆ ವಹಿಸುವರು. ಬಾಲಿವುಡ್ ಗಾಯಕ ವರುಣ ಜೈನ್ ಈ ಬಾರಿಯ ಉತ್ಸವದ ಕೇಂದ್ರಬಿAದುವಾಗಿದ್ದಾರೆ. ಏ. ೨೦ರಂದು ಸಂಜೆ ೬ ಗಂಟೆಗೆ ಕಾಲೇಜು ಮೈದಾನದಲ್ಲಿ ಅವರಿಂದ ಸಂಗೀತ ಕಚೇರಿ ಇರಲಿದೆ ಎಂದರು.
  ದೇಶದ ವಿವಿಧ ಭಾಗಗಳಿಂದ ೨ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಪೇಪರ್ ಪ್ರೆಸೆಂಟೇಶನ್, ರಸಪ್ರಶ್ನೆ, ಪಾಶ್ಚಿಮಾತ್ಯ ನೃತ್ಯ, ಸಂಗೀತ, ನಾಟಕ, ಸಾಹಿತ್ಯಿಕ, ಲಲಿತ ಕಲೆಗಳು ಸೇರಿ ೭೦ಕ್ಕೂ ಹೆಚ್ಚು ವೈವಿಧ್ಯಮಯ ಕಾರ್ಯಕ್ರಮ ಇರಲಿವೆ. ಆಟೋ ಎಕ್ಸ್ಪೋ ಮತ್ತು ಏರೋ ಮಾಡೆಲಿಂಗ್ ಈ ಬಾರಿಯ ವಿಶೇಷವಾಗಿವೆ. ಎಸ್‌ಡಿಎಂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸಹಯೋಗದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts