ಎಸಿಬಿ ಬಲೆಗೆ ಗ್ರಾಮ ಲೆಕ್ಕಾಧಿಕಾರಿ

ಶಿಗ್ಗಾಂವಿ: ಖಾತಾ ಬದಲಾವಣೆ, ವಂಶವೃಕ್ಷ ಪ್ರಮಾಣ ಪತ್ರ ನೀಡಲು ಲಂಚ ಪಡೆಯುತ್ತಿದ್ದ ತಾಲೂಕಿನ ಹಿರೇಮಲ್ಲೂರ ಗ್ರಾಪಂ ಗ್ರಾಮಲೆಕ್ಕಾಧಿಕಾರಿ ಆನಂದ ಯಮನಪ್ಪ ದೇಸಾಯಿ ಶುಕ್ರವಾರ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಚಿಕ್ಕಮಲ್ಲೂರ ಗ್ರಾಮದ ರೈತ ಶೇಖಪ್ಪ ಭೀಮಪ್ಪ ಸಂಜೀವಪ್ಪನವರ ತಮ್ಮ ಜಮೀನು ಒಂದರ ಖಾತಾ ಬದಲಾವಣೆ ಮತ್ತು ವಂಶ ವೃಕ್ಷ ಪ್ರಮಾಣ ಪತ್ರ ವಿತರಿಸುವಂತೆ ಗ್ರಾಮಲೆಕ್ಕಾಧಿಕಾರಿಗೆ ಕೋರಿ ದ್ದರು. ಆದರೆ, 5 ಸಾವಿರ ರೂ. ಲಂಚ ನೀಡಿದರೆ ಮಾತ್ರ ಕೆಲಸ ಮಾಡಿಕೊಡುವುದಾಗಿ ಗ್ರಾಮಲೆ ಕ್ಕಾಧಿಕಾರಿ ಬೇಡಿಕೆ ಇಟ್ಟಿದ್ದ. ಇದರಿಂದ ಆಕ್ರೋಶಗೊಂಡ ರೈತ ಸಂಜೀವಪ್ಪನವರ, ಗ್ರಾಮಲೆಕ್ಕಾಧಿಕಾರಿ ವಿರುದ್ಧ ತಹಸೀಲ್ದಾರ್, ಸವಣೂರ ಉಪ ವಿಭಾಗಾಧಿಕಾರಿಗೆ ದೂರು ನೀಡಿದ್ದರೂ ಪ್ರಯೋಜನವಾಗಿರಲಿಲ್ಲ. ಇದರಿಂದ ಬೇಸತ್ತ ರೈತ ಎಸಿಬಿಗೆ ದೂರು ನೀಡಿದ್ದರು. ರೈತ ನೀಡಿದ ದೂರಿನನ್ವಯ ಎಸಿಬಿ ವರಿಷ್ಠಾಧಿಕಾರಿ ವಂಶಕೃಷ್ಣ ಅವರ ಮಾರ್ಗದರ್ಶನದಲ್ಲಿ ದಾಳಿ ಕೈಗೊಂಡಾಗ 3500 ರೂ. ಲಂಚದ ಹಣ ತೆಗೆದುಕೊಳ್ಳುವಾಗ ಗ್ರಾಮಲೆಕ್ಕಾಧಿಕಾರಿ ಸಿಕ್ಕಿ ಬಿದ್ದಿದ್ದಾರೆ. ‘ಗ್ರಾಮಲೆಕ್ಕಾಧಿಕಾರಿ ವಿರುದ್ಧ ದೂರು ದಾಖಲಾಗಿದೆ. ಸಂಜೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾ ಗುವುದು’ ಎಂದು ಎಸಿಬಿ ಡಿವೈಎಸ್ಪಿ ಪ್ರಲ್ಹಾದ್ ಎಸ್.ಕೆ. ತಿಳಿಸಿದ್ದಾರೆ. ಎಸಿಬಿ ಇನ್ಸ್​ಪೆಕ್ಟರ್ ಸುದರ್ಶನ ಕೆ.ಪಿ, ಬಸವರಾಜ ಹಳ್ಳಬಣ್ಣವರ ಇದ್ದರು.