ದಾವಣಗೆರೆ: ನಗರದ ಎವಿಕೆ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಆಹಾರ ಮೇಳ ತಿಂಡಿಪ್ರಿಯರ ಗಮನ ಸೆಳೆಯಿತು. ವಿದ್ಯಾರ್ಥಿನಿಯರು, ಪಾಲಕರು, ಪ್ರಾಧ್ಯಾಪಕರು ಗ್ರಾಹಕರಂತೆ ಹಣ ತೆತ್ತು ವಿವಿಧ ಖಾದ್ಯಗಳ ಸವಿ ಸವಿದರು. ವಿದ್ಯಾರ್ಥಿನಿಯರು ಸ್ಥಳದಲ್ಲೇ ಒಂದಷ್ಟು ಬಿಸಿಖಾದ್ಯಗಳನ್ನು ಸಿದ್ಧಪಡಿಸುತ್ತಿದ್ದರೆ, ಮತ್ತೆ ಕೆಲವರು ಮನೆಗಳಲ್ಲಿ ಪಾಲಕರ ಸಹಕಾರದೊಂದಿಗೆ ಮೊದಲೆ ತಯಾರಿಸಿ ತಂದಿದ್ದ ಭಕ್ಷೃಗಳು ಕಣ್ಸೆಳೆದವು.
ಪಾನಿಪುರಿ, ಗೋಲ್‌ಗಪ್ಪ ಶಾರ್ಟ್ಸ್, ಬೆಣ್ಣೆದೋಸೆ, ವಡಾ ಪಾವ್, ಪಾವ್‌ಬಜಿ, ಬರ್ಗರ್, ಚುರುಮುರಿ, ಚೋಯಿಂಗಿ, ಪಾಲುದಾ, ವೆಜಿಟೇಬಲ್ ಲಾಲಿಪಪ್, ಜಾಮೂನು ಸೇರಿ ಉತ್ತರ ಕರ್ನಾಟಕ ಶೈಲಿಯ ರೊಟ್ಟಿ ಊಟದ ಸವಿಯನ್ನು ಅನೇಕರು ರುಚಿಸಿದರು.
ಬಾಪೂಜಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಸದಸ್ಯೆ ಕಿರುವಾಡಿ ಗಿರಿಜಮ್ಮ ಕಾರ್ಯಕ್ರಮ ಉದ್ಘಾಟಿಸಿದರು. ವಿಶ್ವವಿದ್ಯಾಲಯ ಹಾಗೂ ಕಾಲೇಜು ಬೋಧಕರ ಸಂಘಗಳ ಒಕ್ಕೂಟದ ಮಾಜಿ ಅಧ್ಯಕ್ಷ ಪ್ರೊ.ಸಿ.ಎಚ್. ಮುರಿಗೇಂದ್ರಪ್ಪ ಮೇಳಕ್ಕೆ ಶುಭ ಕೋರಿದರು. ಎವಿಕೆ ಪದವಿ ಕಾಲೇಜಿನ ಪ್ರಾಚಾರ್ಯ ಡಾ. ಬಿ.ಪಿ.ಕುಮಾರ್, ಪಪೂ ಕಾಲೇಜಿನ ಪ್ರಾಚಾರ್ಯ ಎ.ಬಿ.ಶಿವನಗೌಡ ಹಾಗೂ ಪ್ರಾಧ್ಯಾಪಕರಿದ್ದರು.
—