ಎಲ್​ಐಸಿ ಪ್ರತಿನಿಧಿಗಳ ಪ್ರತಿಭಟನೆ

  • ಧಾರವಾಡ: ಎಲ್​ಐಸಿ ಪಾಲಿಸಿಗಳ ಕಂತಿನ ಮೇಲೆ ಸರ್ಕಾರ ವಿಧಿಸಿರುವ ಜಿಎಸ್​ಟಿ ವಾಪಸ್ ಪಡೆಯಬೇಕು ಮತ್ತಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಜೀವ ವಿಮಾ ಪ್ರತಿನಿಧಿಗಳ ಸಂಘಟನೆ (ಲಿಕಾಯಿ) ವತಿಯಿಂದ ವಿಭಾಗೀಯ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಲಾಯಿತು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೀತಿಗಳು ದುಡಿಯುವ ಜನರ ವಿರೋಧಿಯಾಗಿವೆ. ವಿಮಾ ಪ್ರತಿನಿಧಿಗಳಿಗೆ ಉದ್ಯೋಗ ಭದ್ರತೆ ನೀಡಬೇಕು. ಅರ್ಹ ಪ್ರತಿನಿಧಿಗಳಿಗೆ ಖಾತ್ರಿ ಪಿಂಚಣಿ, ಮೆಡಿಕ್ಲೇಮ್ ವ್ಯವಸ್ಥೆ ಜಾರಿಗೆ ತರಬೇಕು. ಕಲ್ಯಾಣ ನಿಧಿ ಸ್ಥಾಪಿಸಬೇಕು. ರಾಜ್ಯ ಸರ್ಕಾರ ವಿಮಾ ಪ್ರತಿನಿಧಿಗಳಿಂದ ವೃತ್ತಿ ತೆರಿಗೆಯನ್ನು ವಾರ್ಷಿಕವಾಗಿ ಕಮಿಷನ್ ಮೂಲಕ ಮರುವಳಿ ಮಾಡಲು ಸೂಕ್ತ ಸುತ್ತೋಲೆ ಹೊರಡಿಸಬೇಕು. ಇತರೆ ವೃತ್ತಿ ತೆರಿಗೆದಾರರಿಗೆ ನೀಡುವ ಸೌಲಭ್ಯವನ್ನು ವಿಮಾ ಪ್ರತಿನಿಧಿಗಳಿಗೂ ವಿಸ್ತರಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ನಂತರ ಹಿರಿಯ ವಿಭಾಗೀಯ ವ್ಯವಸ್ಥಾಪಕರಿಗೆ ಮನವಿಪತ್ರ ಸಲ್ಲಿಸಿದರು. ಲಿಕಾಯಿ ಕೇಂದ್ರ ಸಮಿತಿ ಉಪಾಧ್ಯಕ್ಷ ಸಿ.ಎ. ಜೋಸೆಫ್, ರಾಜ್ಯ ಸಮಿತಿ ಉಪಾಧ್ಯಕ್ಷ ಆರ್.ಎಸ್. ಘಟಪನದಿ, ಕೇಂದ್ರ ಸಮಿತಿ ಸದಸ್ಯ ಶಂಕರ ಕುಂಬಿ, ಸಂಘಟನೆ ಮುಖಂಡರಾದ ಎಫ್.ಎಸ್. ಸಿಂದಗಿ, ಎಂ.ಎ. ಘಾಟವಾಲೆ, ಎ.ಎಂ. ದಳವಾಯಿ, ಜಿ.ಎನ್. ಕುಲಕರ್ಣಿ, ಯು.ಆರ್. ಭುಸನೂರಮಠ, ಎಫ್.ಎಚ್. ನಾಶಿಪುಡಿ, ಎಂ.ವೈ. ಕರಿಗಾರ, ಎನ್.ಬಿ. ಕುರಿ, ಇತರರು ಇದ್ದರು.Leave a Reply

Your email address will not be published. Required fields are marked *