ಹೂಲಿ: ಮಹಿಳೆಯರಲ್ಲಿನ ತಾರತಮ್ಯ ತಡೆಗಟ್ಟಬೇಕೆಂದು ಶ್ರುತಿ ವಿಶ್ವಾಸ ವೈದ್ಯ ಹೇಳಿದರು.
ಗ್ರಾಮದ ಗ್ರಾಮ ಪಂಚಾಯಿತಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಹಿಳಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ಹೆಣ್ಣು ಒಬ್ಬ ತಾಯಿಯಾಗಿ, ಸಹೋದರಿಯಾಗಿ, ಹೆಂಡತಿಯಾಗಿ, ಸಮಾಜದ ಜವಾಬ್ದಾರಿ ಹೊತ್ತು ಒಯ್ಯುವದರಲ್ಲಿ ಸಶಕ್ತಳಾಗಿದ್ದಾಳೆಂದು ಹರ್ಷ ವ್ಯಕ್ತಪಡಿಸಿದರು. ರಾಮಪ್ಪ ರಕ್ಕಸಗಿ ಮಾತನಾಡಿದರು.
ಗ್ರಾಪಂ ಅದ್ಯಕ್ಷೆ ಸಂಗಮ್ಮ ತೊರಗಲ, ಉಪಾಧ್ಯಕ್ಷ ಯಲ್ಲಪ್ಪ ಕಾರ್ಲಕಟ್ಟಿ, ಪಿಡಿಒ ಎಂ.ಐ.ಕಳ್ಳಿ, ಗ್ರಾಪಂ ಸದಸ್ಯ ಮಲ್ಲಪ್ಪ ಸುನ್ನಾಳ, ಸ್ವಸಹಾಯ ಸಂಘದ ಮುಖ್ಯಸ್ಥೆ ಮಂಜುಳಾ ಮುನವಳ್ಳಿ, ಗ್ರಂಥಪಾಲಕ ಶೇಖರಯ್ಯ ಪೂಜೇರ ಇತರರಿದ್ದರು.