More

  ಎಲ್ಲ ಗ್ರಾಪಂಗಳಿಗೆ ಸೌರವಿದ್ಯುತ್ ಸೌಲಭ್ಯ

  ಸಿದ್ದಾಪುರ: ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿ ಕಟ್ಟಡಗಳಿಗೆ ಸೌರವಿದ್ಯುತ್ ಸೌಲಭ್ಯ ಕಲ್ಪಿಸಲು ತೀರ್ವನಿಸಲಾಗಿದೆ. ಕೇಂದ್ರ ಸರ್ಕಾರದ ಘನತ್ಯಾಜ್ಯ ನಿರ್ವಹಣೆಯ ಯೋಜನೆಯನ್ನು ರಾಜ್ಯದ ಎಲ್ಲ ಗ್ರಾಪಂಗಳು ಜಾರಿಗೊಳಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

  ತಾಲೂಕಿನ ಕೋರ್ಲಕೈ ಗ್ರಾಪಂ ಕಟ್ಟಡವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ರಸ್ತೆ ಸುಧಾರಣೆ ಮತ್ತು ಹೊಸ ರಸ್ತೆ ನಿರ್ವಣಕ್ಕಾಗಿ 1500 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದ್ದು, ಸದ್ಯದಲ್ಲಿಯೇ ಕಾಮಗಾರಿ ಆರಂಭಗೊಳ್ಳಲಿದೆ ಎಂದರು.

  ಅಧ್ಯಕ್ಷತೆ ವಹಿಸಿದ್ದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಉದ್ಯೋಗಖಾತ್ರಿ ಯೋಜನೆಯಲ್ಲಿ ಹಣ ಲಭ್ಯ ಇದೆ. ಅದರೆ, ಈ ಯೋಜನೆಯಲ್ಲಿ ರೈತರಿಗೆ ಉಪಯುಕ್ತವಾಗುವ ಕೆಲಸಮಾಡಲು ಅಸಾಧ್ಯವಾಗಿದೆ. ಯೋಜನೆಯಲ್ಲಿ ರೈತರಿಗೆ ಅನುಕೂಲವಾಗುವಂತಹ ಕಾಮಗಾರಿ ಕೈಗೊಳ್ಳಲು ಅವಕಾಶ ಸಿಗುವಂತಾಗಬೇಕು ಎಂದರು.

  ಜಿಪಂ ಸಿಇಒ ಮಹಮ್ಮದ್ ರೋಶನ್, ಜಿಪಂ ಸದಸ್ಯೆ ಸುಮಂಗಲಾ ನಾಯ್ಕ, ನಾಗರಾಜ ನಾಯ್ಕ ಬೇಡ್ಕಣಿ, ಎಂ.ಜಿ. ಹೆಗಡೆ ಗೆಜ್ಜೆ, ತಾಪಂ ಅಧ್ಯಕ್ಷ ಸುಧೀರ ಬಿ. ಗೌಡರ್, ಗ್ರಾಪಂ ಅಧ್ಯಕ್ಷ ನಟರಾಜ ಜಿಡ್ಡಿ, ತಾಪಂ ಸದಸ್ಯರಾದ ಮಹಾಬಲೇಶ್ವರ ಹೆಗಡೆ, ಪದ್ಮಾವತಿ ಮಡಿವಾಳ, ತಹಸೀಲ್ದಾರ್ ಮಂಜುಳಾ ಭಜಂತ್ರಿ, ತಾಪಂ ಇಒ ಪ್ರಶಾಂತ್ ರಾವ ಇತರರಿದ್ದರು.

  ಚಂದ್ರಶೇಖರ ನಾಯ್ಕ, ಶಿವಕುಮಾರ, ವೆಂಕಟೇಶ ಮಡಿವಾಳ ಕಾರ್ಯಕ್ರಮ ನಿರ್ವಹಿಸಿದರು.

  ಸಿದ್ದು ಮತ್ತೆ ಮುಖ್ಯಮಂತ್ರಿಯಾಗುವುದಿಲ್ಲ

  ಶಿರಸಿ: ಕಾಂಗ್ರೆಸ್ ಅಧ್ಯಕ್ಷರ ಘೊಷಣೆಯಾದರೆ ಸಿದ್ದರಾಮಯ್ಯನ ಅಸಮಾಧಾನದ ಸ್ಪೋಟದಿಂದ ಕಾಂಗ್ರೆಸ್ ಒಡೆದು ಹೋಳಾಗಲಿದೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

  ತಾಲೂಕಿನ ಸೋಂದಾದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಯಾವುದೇ ಕಾರಣಕ್ಕೂ ಸ್ಪೋಟದ ಪ್ರಶ್ನೆಯಿಲ್ಲ. ಕೇಂದ್ರ ಮತ್ತು ರಾಜ್ಯದ ನಾಯಕರು, ಮುಖ್ಯಮಂತ್ರಿಗಳು ಯಾರನ್ನು ಸಚಿವ ಸಂಪುಟದಲ್ಲಿ ಸೇರಿಸಿಕೊಳ್ಳುತ್ತಾರೋ ಅದಕ್ಕೆ ಎಲ್ಲರೂ ಬದ್ಧರಿದ್ದೇವೆ. ಕಾರಣ ಸಿದ್ದರಾಮಯ್ಯನವರ ಕನಸು ಎಂದಿಗೂ ಈಡೇರುವುದಿಲ್ಲ ಹಾಗೂ ಅವರು ಮತ್ತೊಮ್ಮೆ ಮುಖ್ಯಮಂತ್ರಿ ಆಗುವುದಿಲ್ಲ ಎಂದರು.

  ತನ್ವೀರ್ ಸೇಠ್​ಗೆ ಚಾಕು ಹಾಕಿರುವ ಎಸ್​ಡಿಪಿಐ ಸಂಘಟನೆ ಕಾರ್ಯಕರ್ತರು ಎಲ್ಲಿ ತಮಗೂ ಚಾಕು ಹಾಕುತ್ತಾರೋ ಎಂಬ ಭಯದಿಂದ ಜಮೀರ್ ಅಹ್ಮದ್ ಆರ್​ಎಸ್​ಎಸ್ ನಿಷೇಧಿಸುವ ಹೇಳಿಕೆ ನೀಡಿದ್ದಾರೆ ಎಂದರು.

  ರಾಜ್ಯದಲ್ಲಿ ಹಿಂದಿನ ಸರ್ಕಾರ ವಿನಾ ಕಾರಣ ಹಿಂದು ಕಾರ್ಯಕರ್ತರ ಮೇಲೆ ಹಾಕಿದ್ದ ಪ್ರಕರಣಗಳ ಮಾಹಿತಿ ಪಡೆದು, ಅದನ್ನು ಹಿಂಪಡೆಯುತ್ತೇವೆ ಎಂದರು.

  ಮಂಗಳೂರು ಘಟನೆ ಪೊಲೀಸರ ವೈಫಲ್ಯವಲ್ಲ

  ಸಿದ್ದಾಪುರ: ಮಂಗಳೂರಿನ ಘಟನೆ ಪೊಲೀಸರ ವೈಫಲ್ಯ ಅಲ್ಲ. ಇದು ದುಷ್ಕರ್ವಿುಗಳ ವೈಫಲ್ಯ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದುಷ್ಕರ್ವಿುಗಳು ರಾಜ್ಯದಲ್ಲಿ ಗೊಂದಲ ಮೂಡಿಸಿ ಸಾವು ನೋವನ್ನು ಉಂಟು ಮಾಡಲು ಯತ್ನಿಸುತ್ತಿದ್ದಾರೆ. ಆದರೆ, ತಕ್ಷಣ ಕಾರ್ಯಪ್ರವೃತ್ತರಾಗಿರುವ ಪೊಲೀಸರು ಬಾಂಬ್ ಇಟ್ಟವನ ಸುಳಿವು ಪತ್ತೆ ಹಚ್ಚಿದ್ದಾರೆ. ಪೊಲೀಸರ ಈ ಕೆಲಸವನ್ನು ಶ್ಲಾಘಿಸಬೇಕಿದೆ. ಬಾಂಬ್ ಅನ್ನು ಪೊಲೀಸರೇ ಇಟ್ಟು ಇದನ್ನು ಸೃಷ್ಟಿ ಮಾಡಿದ್ದಾರೆ ಎನ್ನುವ ಹೇಳಿಕೆ ಖಂಡನೀಯ. ಇದು ಪೊಲೀಸರ ಆತ್ಮಸ್ತೈರ್ಯ ಕುಗ್ಗಿಸುವ ಕೆಲಸ. ಈ ರೀತಿಯ ಕೆಲಸವನ್ನು ಯಾರೂ ಮಾಡಬಾರದು ಎಂದು ಎಚ್​ಡಿಕೆ ಹೇಳಿಕೆಗೆ ತಿರುಗೇಟು ನೀಡಿದರು.

  ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ವಿದೇಶ ಪ್ರವಾಸ ಮುಗಿಸಿ ಬಂದ ಕೂಡಲೆ, ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಯಡಿಯೂರಪ್ಪನವರು ರಾಜಕೀಯ ನಿವೃತ್ತಿ ಪಡೆಯುತ್ತಾರೆ ಎಂದು ಕಲ್ಲಡ್ಕ ಪ್ರಭಾಕರ ಭಟ್ಟ ಅವರ ಮಾತನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳಬೇಕಿಲ್ಲ ಎಂದು ಈಶ್ವರಪ್ಪ ಹೇಳಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts