More

  ಎಲ್ಲ ಕ್ಷೇತ್ರದಲ್ಲೂ ಮಹಿಳೆಯರನ್ನು ಪ್ರೋತ್ಸಾಹಿಸಿ

  ರಾಮದುರ್ಗ: ಎಲ್ಲ ಕ್ಷೇತ್ರದಲ್ಲಿಯೂ ಮಹಿಳೆಯರಿಗೆ ಅಧಿಕಾರ ನೀಡುವ ಮೂಲಕ ಅವರನ್ನು ಪ್ರೋತ್ಸಾಹಿಸಬೇಕು. ಅಂದಾಗ ಮಹಿಳೆಯರು ಸಾಧನೆ ಮಾಡಲು ಸಾಧ್ಯ ಎಂದು ಬೆಂಗಳೂರಿನ ಕೈಗಾರಿಕಾ ತರಬೇತಿ ಹಾಗೂ ಉದ್ಯೋಗ ಇಲಾಖೆಯ ಜಂಟಿ ನಿರ್ದೇಶಕಿ ಸಾಧನಾ ಪೋಟೆ ಹೇಳಿದರು.

  ಪಟ್ಟಣದ ಶ್ರೀಮತಿ ಸುಶಿಲಾಬಾಯಿ ಕುಲಗೋಡ ವಾಣಿಜ್ಯ ಮತ್ತು ವಿಜ್ಞಾನ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಮಹಿಳಾ ಸಬಲೀಕರಣ ಕಾರ್ಯಾಗಾರದಲ್ಲಿ ಅವರು ಮಾತನಾಡಿ, ವಿದ್ಯಾರ್ಥಿ ದಿಶೆಯಲ್ಲಿಯೇ ವಿದ್ಯಾರ್ಥಿನಿಯರು ಸರ್ವ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು. ವಿದ್ಯಾ ಪ್ರಸಾರಕ ಸಮಿತಿ ಗೌರವ ಕಾರ್ಯದರ್ಶಿ ಎಸ್​.ಎಸ್​. ಸುಲ್ತಾನಪುರ ಮಾತನಾಡಿದರು. ಕಾಲೇಜು ಪರವಾಗಿ ಸಾಧನಾ ಪೋಟೆ ಅವರನ್ನು ಸತ್ಕರಿಸಲಾಯಿತು. ಕಾರ್ಯಕ್ರಮದ ನಿಮಿತ್ತ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆ ವಿಜೇತ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಲಾಯಿತು.
  ವಿದ್ಯಾ ಪ್ರಸಾರಕ ಸಮಿತಿ ಸದಸ್ಯ ಟಿ. ದಾಮೋದರ, ಬೆಳಗಾವಿಯ ಉದ್ಯೋಗ ಇಲಾಖೆಯ ವೆಂಕಟೇಶ, ಜಿಮಖಾನಾ ಉಪಾಧ್ಯ ಎಸ್​.ಬಿ. ಕಟ್ನೂರ, ಉಪನ್ಯಾಸಕಿ ಎಂ.ಎಚ್​. ಕುಲಕರ್ಣಿ, ಪ್ರಾಚಾರ್ಯ ಎಂ.ಬಿ. ಪಾಟೀಲ, ಬಿ.ಆರ್​. ಪಮ್ಮಾರ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts