ಕಲಬುರಗಿ: ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳನ್ನು ಶೈಕ್ಷಣಿವಾಗಿ ಅಭಿವೃದ್ಧಿ ಮಾಡಬೇಕು. ಅದನ್ನು ಹೋಗಲಾಡಿಸಲು ಕೆಕೆಆರ್‌ಡಿಬಿಯಿಂದ ಎರಡು ವರ್ಷವನ್ನು ಶೈಕ್ಷಣಿಕ ವರ್ಷ ಎಂದು ಘೋಷಿಸಿದ್ದು, ಅದಕ್ಕೆ ಪೂರಕವಾಗಿ ಶಾಲಾ ಕಟ್ಟಡ, ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಲು ಆದ್ಯತೆ ನೀಡಲಾಗುತ್ತಿದೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ.ಅಜಯಸಿಂಗ್ ಹೇಳಿದರು.
ರಾಜ್ಯ ಸರ್ಕಾರಿ ಹಿರಿಯ ಹಾಗೂ ಪಧವಿಧರೇತರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದಿAದ ನಗರದ ಡಾ.ಎಸ್.ಎಂ.ಪAಡಿತ್ ರಂಗ ಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಕಾರ್ಯಾಗಾರದಲ್ಲಿ ಮಾತನಾಡಿ, ಯಾವುದೇ ಬದಲಾವಣೆ ಒಂದೆರಡು ವರ್ಷದಲ್ಲಿ ಅಸಾಧ್ಯ. ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಮೂರು ಸಾವಿರ ಕೋಟಿ ರೂ. ಅನುದಾನದ ಶೇ.೨೫ರಷ್ಟು ಅಂದರೆ ೭೫೦ ಕೋಟಿ ರೂ. ಹಣ ಮೀಸಲು ಇಡಲಾಗಿದೆ ಎಂದು ಹೇಳಿದರು.
ಬೆಳಗಾವಿ ಅಧಿವೇಶನದಲ್ಲಿ ಶಿಕ್ಷಕರ ಬೇಡಿಕೆಗಳಾದ ವೇತನ ಶ್ರೇಣಿ, ವಿಶೇಷ ಭತ್ಯೆ ಸೇರಿ ವಿವಿಧ ಬೇಡಿಕೆ ಈಡೇರಿಸುವ ಕುರಿತು ಶಿಕ್ಷಣ ಸಚಿವರ ಗಮನಕ್ಕೆ ತರಲಾಗುವುದು. ಕೆಕೆಆರ್‌ಡಿಬಿಯಿಂದ ಅಗತ್ಯ ನೆರವು, ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಜಗದ್ಗುರು ಶ್ರೀ ಡಾ.ಸಾರಂಗ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಸಿದ್ದರಾಮಯ್ಯ ಸರ್ಕಾರ ಸಮಸ್ಯೆಗೆ ಸ್ಪಂದಿಸುವ ಗುಣ ಹೊಂದಿದ್ದು, ಶಿಕ್ಷಕರ ಬೇಡಿಕೆಗಳ ಕುರಿತು ಬೆಂಗಳೂರಿಗೆ ಹೋದಾಗ ಸಿಎಂ, ಶಿಕ್ಷಣ ಸಚಿವರ ಗಮನಕ್ಕೆ ತರಲಾಗುವುದು. ಮಕ್ಕಳ ಭವಿಷ್ಯವನ್ನು ರೂಪಿಸಿ, ರಾಷ್ಟಪತಿ ಸ್ಥಾನದಿಂದ ಹಿಡಿದು ಸೈನಿಕರ, ಸ್ವಾಮೀಜಿಗಳ ಸ್ಥಾನದವರೆಗೆ ಕೊಂಡೊಯ್ಯಲು ಮುಖ್ಯ ಕಾರಣ ಶಿಕ್ಷಕರು ಎಂದರು.
ಶಾಸಕ ಅಲ್ಲಮಪ್ರಭು ಪಾಟೀಲ್, ಉದ್ಯಮಿ ಗುರುರಾಜ ಮತ್ತಿಮಡು, ನ್ಯಾಯವಾದಿ ಬಸಣ್ಣಸಿಂಗೆ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಜು ಲೇಂಗಟಿ, ಅಪರ ಆಯುಕ್ತರ ಆಪ್ತ ಸಹಾಯಕ ಚನ್ನಬಸಪ್ಪ ಮುಧೋಳ, ಕಲಬುರಗಿ ದಕ್ಷಿಣ ಕ್ಷೇತ್ರ ಶಿಕ್ಷಣಾಧಿಕಾರಿ ವಿಜಯಕುಮಾರ ಜಮಖಂಡಿ, ಶಿವಕುಮಾರ ಕಮಲಾಪುರೆ, ಹಣಮಂತಪ್ಪ ತಿಪ್ಪಲದಿನ್ನಿ, ಆರ್.ಮೃತ್ಯುಂಜಯ, ಬಾಬುರಾವ ಕೂಬಾಳ ಇತರರಿದ್ದರು.