ಬೆಳಗಾವಿಯಲ್ಲಿ ಎರಡು ಬಾಯಿ, ಮೂರು ಕಣ್ಣಿನ ಆಕಳ ಕರು ಜನನ

ಬೆಳಗಾವಿ: ಜಿಲ್ಲೆಯ ಕಿತ್ತೂರ ತಾಲೂಕಿನ ಡೊಂಬರಕೊಪ್ಪ ಗ್ರಾಮದಲ್ಲಿ ಶುಕ್ರವಾರ ರಾತ್ರಿ ವಿಶೇಷವಾದ ಆಕಳ ಕರುವೊಂದು ಜನಿಸಿದೆ.
ಈ ಕರುವಿಗೆ ಎರಡು ಬಾಯಿ, 2 ನಾಲಿಗೆ, 3 ಕಣ್ಣುಗಳಿವೆ.
ಈ ಅಪರೂಪದ ಕರು ಸದ್ಯ ಶಿವರುದ್ರಪ್ಪ ಪತ್ರೆಪ್ಪ ಬೆಟಸೂರ ಎಂಬುವರು ಸಾಕಿದ ಆಕಳಿಗೆ ಜನಿಸಿದೆ. ಈ ವಿಚಿತ್ರವಾದ ಕರುವನ್ನು ನೋಡುವುದಕ್ಕಾಗಿ ಗ್ರಾಮದ ಸುತ್ತಮುತ್ತಲಿನ ಜನತೆ ತಂಡೋಪತಂಡವಾಗಿ ವಿಕ್ಷೀಸುವುದಕ್ಕಾಗಿ ಆಗಮಿಸುತ್ತಿದ್ದಾರೆ.