ಎಮ್ಮೆಗಳನ್ನು ಕದ್ದೋಯ್ದ ಕಳ್ಳರು

ನಾಗಮಂಗಲ: ಪಟ್ಟಣ ಸಮೀಪದ ಸಾರಿಮೇಗಲಕೊಪ್ಪಲು ಗ್ರಾಮದಲ್ಲಿ ಮನೆಮುಂದೆ ಕಟ್ಟಿಹಾಕಿದ್ದ ಎಮ್ಮೆಗಳನ್ನು ದುಷ್ಕರ್ಮಿಗಳು ಬುಧವಾರ ತಡರಾತ್ರಿ ಕದ್ದೋಯ್ದಿದ್ದಾರೆ.

ಗ್ರಾಮದ ಕುಮಾರ್ ಎಂಬುವವರಿಗೆ ಸೇರಿದ ಎರಡು ಎಮ್ಮೆ ಮತ್ತು ಒಂದು ಕರುವನ್ನು ಕಳ್ಳತನ ಮಾಡಲಾಗಿದೆ. ಇವುಗಳ ಮೌಲ್ಯ 50 ಸಾವಿರ ರೂ. ಎನ್ನಲಾಗಿದೆ.

ಎಮ್ಮೆಗಳ ಕಳ್ಳತನದಿಂದ ಗ್ರಾಮದ ರೈತರು ಆತಂಕಗೊಂಡಿದ್ದಾರೆ. ಒಂದು ವರ್ಷದ ಹಿಂದೆ ಇದೇ ಗ್ರಾಮದಲ್ಲಿ ಆಡುಗಳು ಕಳ್ಳತನವಾಗಿದ್ದವು. ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.