ಎಫ್1 ಇತಿಹಾಸದ ಸಾವಿರನೇ ರೇಸ್ ಜಯಿಸಿದ ಹ್ಯಾಮಿಲ್ಟನ್

ಶಾಂಘೈ: ರೇಸ್ ಸ್ಪೋರ್ಟ್ಸ್​ನ ಅತ್ಯಂತ ಜನಪ್ರಿಯ ಚಾಂಪಿಯನ್​ಷಿಪ್​ಗಳಲ್ಲಿ ಒಂದಾದ ಫಾಮುಲಾ ಒನ್ ಕಾರ್ ರೇಸ್​ನ ಇತಿಹಾಸದ 1 ಸಾವಿರನೇ ರೇಸ್​ನಲ್ಲಿ ಮರ್ಸಿಡೀಸ್ ತಂಡದ ಬ್ರಿಟನ್ ಚಾಲಕ ಲೂಯಿಸ್ ಹ್ಯಾಮಿಲ್ಟನ್ ಚಾಂಪಿಯನ್ ಆಗಿದ್ದಾರೆ. ಭಾನುವಾರ ಶಾಂಘೈನಲ್ಲಿ ನಡೆದ ಚೀನಾ ಓಪನ್ ಜಿಪಿಯಲ್ಲಿ ತಂಡದ ಸಹ ಚಾಲಕ ವ್ಲಾಟ್ಟೆರಿ ಬೊಟ್ಟಾಸ್ ತೀವ್ರ ಪ್ರತಿರೋಧವನ್ನು ಮಣಿಸಿ ಹ್ಯಾಮಿಲ್ಟನ್ ಪದಕ ವೇದಿಕೆಯಲ್ಲಿ ಅಗ್ರಸ್ಥಾನ ಪಡೆದರು. ಬೊಟ್ಟಾಸ್​ಗಿಂತ 6.5 ಸೆಕೆಂಡ್ ಮುಂಚಿತವಾಗಿ ಹ್ಯಾಮಿಲ್ಟನ್ ಗುರಿ ಕ್ರಮಿಸಿದರೆ, ಫೆರಾರಿ ತಂಡದ ಸೆಬಾಸ್ಟಿಯನ್ ವೆಟ್ಟಲ್ 3ನೇ ಸ್ಥಾನ ಪಡೆದರು.