ಹುಬ್ಬಳ್ಳಿ: ಇಲ್ಲಿಯ ಅಮರಗೋಳ ಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ವಾರ್ಷಿಕ ಸಭೆ ಸೋಮವಾರ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ರಾಜಕಿರಣ ಮೆಣಸಿನಕಾಯಿ ಮಾತನಾಡಿ, ಸಂಘದ 2023-24ನೇ ಸಾಲಿನ ಆದಾಯ ವೆಚ್ಚ, ಅಢಾವೆ ಪತ್ರಿಕೆ ಮಂಡಿಸಿ, ವರದಿ ವಾಚನ ಮಾಡಿದರು.
ಎಪಿಎಂಸಿಯ ಕುಂದು-ಕೊರತೆಗಳ ಬಗ್ಗೆ ರ್ಚಚಿಸಿ ವ್ಯಾಪಾರ-ವಹಿವಾಟು ಅಭಿವೃದ್ಧಿಗೆ ಸದಸ್ಯರು ಸಲಹೆ ಸೂಚನೆ ನೀಡಿದರು. ಎಪಿಎಂಸಿಗೆ ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ರೈತರ ಉತ್ಪನ್ನಗಳು ಆವಕ ಆಗುವಂತೆ ಮತ್ತು ಮಾರುಕಟ್ಟೆ ವ್ಯಾಪಾರ ಸದೃಢಗೊಳಿಸುವ ಕುರಿತು ಗಂಭೀರ ಚರ್ಚೆ ನಡೆಸಲಾಯಿತು.
ಸಂಘದ ಸಲಹಾ ಸಮಿತಿ ಅಧ್ಯಕ್ಷ ಜಗದೀಶಗೌಡ ಪಾಟೀಲ, ರಾಜಣ್ಣ ಬತ್ಲಿ, ಗಂಗಾಧರ ಬೆಲ್ಲದ, ರಾಜಶೇಖರ ವಾಲಿ, ಗಂಗನಗೌಡ ಪಾಟೀಲ, ಬಸವರಾಜ ಯಕಲಾಸಪುರ, ಎ.ಆರ್. ನದಾಫ, ಎಂ.ಆರ್. ಮೇಲಗಿರಿ, ಸಂಘದ ಸಹಗೌರವ ಕಾರ್ಯದರ್ಶಿ ರವಿ ಮರದ, ಚಂದ್ರಶೇಖರ ಪೂಜಾರ, ರುದ್ರಪ್ಪ ಬೆಟಗೇರಿ, ಶಿವಯೋಗಿ ಹೊಸಕಟ್ಟಿ, ಈಶ್ವರಪ್ಪ ಹೆಬಸೂರ, ಶಿವನಗೌಡ ಪಾಟೀಲ, ಮುಂತಾದವರು ಉಪಸ್ಥಿತರಿದ್ದರು.
ಸಂಘದ ಗೌರವ ಕಾರ್ಯದರ್ಶಿ ಅಶೋಕ ಬಾಳಿಕಾಯಿ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಅನೀಲ ಓಸ್ತವಾಲ ವಂದಿಸಿದರು.